Home Archive by category ರಾಜಕೀಯ (Page 13)

“ನಮ್ಮ ಸರ್ಕಾರದಲ್ಲಿ ಸ್ಕ್ಯಾಮ್ ಇಲ್ಲ, ಸ್ಕೀಮ್ ಮಾತ್ರ” : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಜೂನ್ 22 ರಂದು ಉಡುಪಿಯ ಕಿದಿಯೂರು ಹೋಟೆಲ್ ನ ಶೇಷಶಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ,

ಜಿಲ್ಲಾ ಮಟ್ಟದ ಉಡುಪಿ ಬಿಜೆಪಿ ಕಾರ್ಯಕರ್ತರ ಸಭೆ : ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಭಾಗಿ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಜೂನ್ 22 ರಂದು ಉಡುಪಿಯ ಕಿದಿಯೂರು ಹೋಟೆಲ್ ನ ಶೇಷಶಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು ಪೊಲೀಸರ ಸಭೆ ಮಾಡಿದ್ದಾರೆ. ಪೊಲೀಸರ ಸಭೆಯಲ್ಲಿ ಕೇಸರೀಕರಣ ಬೇಡ ಹುಷಾರ್ !

ಕೇಂದ್ರ ಸರ್ಕಾರದ ವಿರುದ್ಧ ಅನ್ನದ ಬಟ್ಟಲು ಬಡಿದು ಎಚ್ಚರಿಕೆ : ಮಾಜಿ ಸಚಿವ ರಮಾನಾಥ ರೈ

ಬಡವರಿಗೆ ಅಕ್ಕಿ ನೀಡುವ ಯೋಜನೆಗೆ ಅಡ್ಡಿಪಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅನ್ನದ ಬಟ್ಟಲು ಬಡಿಯುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಲಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಡವರ ಅನ್ನಕ್ಕೆ ಕಲ್ಲು ಹಾಕುವವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ದೇಶದಲ್ಲೇ ಬಡವರಿಗೆ ಪ್ರಥಮವಾಗಿ ಉಚಿತವಾಗಿ ಅಕ್ಕಿ ನೀಡಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ

ಮತಾಂತರ ನಿಷೇಧ ಕಾಯ್ದೆವಾಪಾಸ್ ಪಡೆದಲ್ಲಿ ಬೀದಿಗಿಳಿದು ಹೋರಾಟ : ಭಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ

ರಾಜ್ಯದ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯಲು ನಿರ್ಧರಿಸಿರುವ ವಿಚಾರಕ್ಕೆ ಪುತ್ತೂರಿನ ಭಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ ಕಿಡಿ ಕಾರಿದ್ದಾರೆ. ಭಜರಂಗದಳ ಯಾವುದೇ ಧರ್ಮದ ವಿರೋಧಿಯಲ್ಲ. ಬಲವಂತದ, ಆಮಿಷದ ಮತಾಂತರಕ್ಕೆ ವಿರೋಧವಿದೆ. ಯಾವುದೇ ಕಾರಣಕ್ಕೂ ಕಾಯ್ದೆ ವಾಪಾಸ್ ಪಡೆಯಬಾರದು. ಒಂದು ವೇಳೆ ವಾಪಾಸ್ ಪಡೆದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು. ಹಿಂದೂ ಸಮಾಜದಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರ : ಜಿಲ್ಲೆಯಲ್ಲಿ ಆಂದೋಲನದ ಮಾದರಿ ಹೋರಾಟ : ಶಾಸಕ ಡಾ. ವೈ ಭರತ್ ಶೆಟ್ಟಿ

ರಾಜ್ಯದ ಸಿದ್ದರಾಮಯ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡಲು ಉದ್ದೇಶಿಸುವ ಮೂಲಕ ಪರೋಕ್ಷ ಸಮರ ಸಾರಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಂದೋಲನದ ಮಾದರಿ ಹೋರಾಟ ನಡೆಸಿ, ಹಿಂದುತ್ವದ ಉಳಿವಿಗಾಗಿ ಟಕ್ಕರ್ ನೀಡಲಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭಾರತ್ ಶೆಟ್ಟಿ ವೈ ಹೇಳಿದ್ದಾರೆ. ಬಿಜೆಪಿ ಸರ್ಕಾರ ಮತಾಂತರ ಹಾವಳಿಯನ್ನು ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಬಹಳಷ್ಟು

ಜುಲೈ 3 ರಿಂದ ಕಾಂಗ್ರೆಸ್ ಸರಕಾರದ ವಿಧಾನಸಭೆ ಅಧಿವೇಶನ

ಕಾಂಗ್ರೆಸ್ ಸರಕಾರದ ವಿಧಾನಸಭೆ ಅಧಿವೇಶನವು ಜುಲೈ 3 ರಿಂದ 14 ರವರೆಗೆ ನಡೆಯಲಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಆದೇಶ ನೀಡಿದ್ದಾರೆಅಧಿವೇಶನದ ಮೊದಲ ದಿನ ಉಭಯ ಸಧನವನ್ನು ಉಧ್ದೇಶಿಸಿ ರಾಜ್ಯಪಾಲರು ಬಾಷನ ಮಾಡಲಿದ್ದಾರೆ, ಶಾಸಕರಿಗೆ ಪ್ರಶ್ನೆಗಳ ಸೂಚನ ಪತ್ರವನ್ನು ಸದನಕ್ಕೆ ಸಲ್ಲಿಸಲು ಜೂನ್ 16 ಕೊನೆಯ ದಿನವಾಗಿದೆ

ಮುಲ್ಕಿಯಲ್ಲಿ ಬಿಜೆಪಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಗೆಲುವು ಸಾಧ್ಯವಾಗಿದೆ. ಅದ್ದರಿಂದ ಕಾರ್ಯಕರ್ತರಿಗೆ ವಿಶೇಷ ಅಭಿನಂದನೆ ಸಲ್ಲಬೇಕಾಗಿದೆ ಎಂದು ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಧ ಕೋಟ್ಯಾನ್ ಹೇಳಿದರು. ಅವರು ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆ ಧರ್ಮಚಾವಡಿಯಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ವಿರೋಧ ಪಕ್ಷದವರು ಎಲ್ಲಾ ರೀತಿಯ ಅಪಪ್ರಚಾರ ಮಾಡಿದ್ದು ಆದರೆ ಯಾವುದೇ ಅಪಪ್ರಚಾರಕ್ಕೆ ನಾನು ಉತ್ತರ ನೀಡಲಿಲ್ಲ.

ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಯುಧಗಳಿಂದ ಹಲ್ಲೆಗೆ ಯತ್ನ : ನಟೋರಿಯಸ್ ಕ್ರಿಮಿನಲ್ ಗಳಿಗೆ ಸುಪಾರಿ ನೀಡಿದ ಸ್ಥಳೀಯ ಕಾಂಗ್ರೆಸ್ ಮುಖಂಡ

ಉಡುಪಿ : ಇತ್ತೀಚೆಗೆ ಉಡುಪಿ ಜಿಲ್ಲೆಯ ಉದ್ಯಾವರದ ಬೊಳ್ಜೆ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತ ರಕ್ಷಿತ್ ಸಾಲಿಯಾನ್ ಮೇಲೆ ಅಪರಿಚಿತರಾದ ಮೂವರು ಮಾರಕಾಯುಧಗಳಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ವರದಿಯಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ಕಾಪು ಪೋಲಿಸ್ ಠಾಣೆಯುಲ್ಲಿ ದೂರು ದಾಖಲಾಗಿದ್ದು ಈ ಕುರಿತಂತೆ ಪೋಲೀಸರು ವಿಚಾರಣೆ ನಡೆಸಲು ಪ್ರಾರಂಭಿಸಿದಾಗ ಈ ಹಿಂದೆ ಹಲವಾರು ದರೋಡೆ, ಕಳ್ಳತನ ಕೊಲೆ ಇತ್ಯಾದಿ ಆರೋಪಗಳನ್ನು ಹೊತ್ತು, ಇದೀಗ ಜಾಮೀನಿನ ಮೇಲೆ ತಿರುಗಾಡುತ್ತಿರುವ

ಶಕ್ತಿ ಯೋಜನೆಗೆ ಚಾಲನೆ : ಪ್ರಯಾಣಿಕರೊಂದಿಗೆ ಬಸ್ ನಲ್ಲಿ ಸಂಚರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ : ರಾಜ್ಯದ‌ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಆರಂಭಿಸಿರುವ ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯ ಕೆ ಎಸ್ ಆರ್ ಟಿ ಸಿ ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣದಲ್ಲಿ ಜೂನ್ 11ರ ರವಿವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ […]

‘ಪಠ್ಯಪುಸ್ತಕದ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ’ : ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ರಾಜ್ಯ ಸರ್ಕಾರದಿಂದ ಪಠ್ಯ ಬದಲಾವಣೆ ವಿಚಾರವಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರ ಯಾವಾಗಲೂ ವ್ಯಕ್ತಿಗಳ ಆಧಾರದಲ್ಲಿ ನಡೆಯುವುದಿಲ್ಲ. ಬದಲಾಗಿ ಸರ್ಕಾರ ನಡೆಯುವುದು ಶಾಸನದ ಆಧಾರದಲ್ಲಿ. ಒಂದು ಸರ್ಕಾರ ಮಾಡಿದ ನಿರ್ಧಾರವನ್ನು ಮತ್ತೊಂದು ಸರಕಾರ ಪರಿಶೀಲನೆ ಮಾಡದೆ ಬದಲು ಮಾಡುವುದು ಸರಿಯಲ್ಲ. ಸಾರ್ವಜನಿಕವಾಗಿ ಇಂತಹ ಬೆಳವಣಿಗೆಗಳು ಗೌರವ ತರುವುದಿಲ್ಲ. ಬನ್ನಂಜೆ ಗೋವಿಂದಾಚಾರ್ಯರ ಪಾಠವನ್ನು ವಾಪಸ್ಸು