Home Archive by category ರಾಜಕೀಯ (Page 7)

ದೆಹಲಿ: ಶೋಭಾ ಕರಂದ್ಲಾಜೆಗೆ ಹೆಚ್ಚುವರಿ ಮಂತ್ರಿಗಿರಿ

ವಿಧಾನ ಸಭೆಗೆ ಆಯ್ಕೆಯಾದ ಕಾರಣ ರಾಜೀನಾಮೆ ನೀಡಿದ ಕೇಂದ್ರ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದಸಿಂಗ್ ಪಟೇಲ್, ರೇಣುಕಾ ಸಿಂಗ್ ಅವರು ಹೊಂದಿದ್ದ ಸಚಿವ ಖಾತೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೆಚ್ಚುವರಿಯಾಗಿ ನಾಲ್ವರು ಮಂತ್ರಿಗಳಿಗೆ ಹಂಚಿದ್ದಕ್ಕೆ ಅಂಕಿತ ಹಾಕಿದರು. ಮಂತ್ರಿ ಅರ್ಜುನ್ ಮುಂಡಾರಿಗೆ ಹೆಚ್ಚುವರಿಯಾಗಿ ಕೃಷಿ ಮತ್ತು ರೈತರ

ಸಾಬೀತು ಮಾಡದಿದ್ದರೆ ಪಾಕ್‍ಗೆ ಹೋಗಲು ಯತ್ನಾಳ್‍ಗೆ ‘ಹಾಶ್ಮಿ’ ಸವಾಲು

ನನಗೆ ಐಸಿಸ್ ಸಂಪರ್ಕ ಇರುವುದನ್ನು ಸಾಬೀತು ಪಡಿಸಿದರೆ ನಾನು ದೇಶವನ್ನೇ ಬಿಡುತ್ತೇನೆ. ನೀವು ಸಾಬೀತು ಪಡಿಸದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಬಿಜೆಪಿ ಶಾಸಕ ಯತ್ನಾಳರಿಗೆ ವಿಜಯಪುರದ ಹಜರತ್ ಹಾಸಿಂ ಪೀರ ದರ್ಗಾದ ಧರ್ಮಾಧಿಕಾರಿ ಸಯ್ಯದ್ ಮೊಹಮದ್ ತನ್ಸೀರ್ ಹಾಶ್ಮಿ ಸವಾಲು ಹಾಕಿದ್ದಾರೆ. ಇದೇ ವೇಳೆ ಹಾಶ್ಮಿಯವರು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮತ್ತು ಕೆಲವು ಬಿಜೆಪಿ ನಾಯಕರ ಜೊತೆಗೆ ಇರುವ ಫೆÇೀಟೋ ಸಹ ಬಹಿರಂಗ ಆಗಿದೆ. ಹಾಶ್ಮಿ ಐಸಿಸ್ ಜನ, ಮುಖ್ಯಮಂತ್ರಿ

ಇಂಡಿಯಾದ ಹೆಸರು ಕೆಡಿಸುವ ಫೇಕ್ ನ್ಯೂಸ್

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟದವರು ಗುಂಪು ಫೋಟೋ ತೆಗೆಸಿಕೊಳ್ಳುವಾಗ ಮುಸ್ಲಿಮರ ಆಜಾನ್ ಹಾಕಿದ್ದರು, ಎಚ್ಚರ ಎಂಬ ಪೋಸ್ಟ್ ಒಂದು ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಅದು ಸುಳ್ಳು ಸುದ್ದಿ ಎಂದು ಕ್ವಿಂಟ್ ಫ್ಯಾಕ್ಟ್ ಚೆಕ್ ಹೇಳಿದೆ. ಇಲ್ಲಿ ಈ ಪೋಸ್ಟ್‌ಗೆ ಬಳಸಿದ ವೀಡಿಯೋ ಆಗಸ್ಟ್ 31, ಸೆಪ್ಟೆಂಬರ್ 1ರಂದು ಮುಂಬಯಿಯಲ್ಲಿ ನಡೆದ ಇಂಡಿಯಾ ಮೈತ್ರಿ ಕೂಟದ ಸಭೆಯದ್ದಾಗಿದೆ. ವೇದಿಕೆಯಲ್ಲಿ ಆ ಬ್ಯಾನರ್ ಇದೆ. ಈ ಸುದ್ದಿ ಆಗ ಎಲ್ಲ ಪತ್ರಿಕೆ, ಟೀವಿಗಳಲ್ಲಿ

ಮಿಜೋರಾಂನಲ್ಲಿ ಮುಖ್ಯಮಂತ್ರಿಗಳಿಗೆ ಸೋಲು, ಜೆಡ್‌ಪಿಎಂ ಅಧಿಕಾರಕ್ಕೆ

ಮುಖ್ಯಮಂತ್ರಿ ಜೋರಮ್ ತಂಗ, ಉಪ ಮುಖ್ಯಮಂತ್ರಿ ಸಹಿತ ಹಲವು ಮಂತ್ರಿಗಳ ಸೋಲಿನೊಂದಿಗೆ ಮಿಜೋರಾಂ ನ್ಯಾಶನಲ್ ಫ್ರಂಟ್ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸಹ ಈ ಸರಕಾರದ ಭಾಗವಾಗಿತ್ತು. ಜೆಡ್‌ಪಿಎಂ ಮೈತ್ರಿ ಕೂಟವು 40 ಸದಸ್ಯ ಬಲದ ಮಿಜೋರಾಂನಲ್ಲಿ 27 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಎಂಎನ್ಎಫ್ ಬರೇ 10 ಕಡೆ ಗೆದ್ದಿದೆ. ಬಿಜೆಪಿ 2, ಕಾಂಗ್ರೆಸ್ 1 ಸ್ಥಾನ ಪಡೆದಿವೆ.

ಬಿಜೆಪಿಗೆ ನಾಲ್ಕರಲ್ಲಿ ಮೂರು ಎರಡು ಲಾಭ, ಹೇಗೆ? ಭಾರತ, ಇಂಡಿಯಾಕ್ಕೆ ಸೋಲು, ಎಲ್ಲಿ?

ನಾಲ್ಕು ರಾಜ್ಯಗಳ‌ ಚುನಾವಣೆಯ ಫಲಿತಾಂಶ ಬಿಜೆಪಿಗೆ ಲಾಭ ನೀಡಿದೆ. ಕಾಂಗ್ರೆಸ್ ಬಲ ನಿಂತ ನೀರಾಗಿದೆ. ಭಾರತ, ಇಂಡಿಯಾಗಳು ಸೋತು ಹೋಗಿವೆ. ಬಿಜೆಪಿಯಯ 142 ಹೆಚ್ಚು ಶಾಸಕರನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ ಮತ ಭಾರ ಭಾರೀ ಇಳಿಯದಿದ್ದರೂ ಒಟ್ಟು 66 ಶಾಸಕರನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ ಮಾತ್ರ ಅದು ತನ್ನ ಶಾಸಕ ಸಂಖ್ಯೆ ಹೆಚ್ಚಿಸಿಕೊಂಡು ಮೂರು ರಾಜ್ಯಗಳ ಕೊರತೆಯನ್ನು ಸ್ವಲ್ಪ ಭರ್ತಿ

ಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್.ಕೆ ಅತೀಖ್ ನೇಮಕ

ರಾಜ್ಯ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಎಲ್ ಕೆ ಅತೀಖ್ ಅವರನ್ನು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಯಾಗಿ ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಈವರೆಗೆ ಆ ಹುದ್ದೆಯಲ್ಲಿದ್ದ ಡಾ. ರಜನೀಶ್ ಗೋಯಲ್ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಎಲ್ ಕೆ ಅತೀಖ್ ಅವರು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿಯೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಹೊಣೆ ನಿರ್ವಹಿಸಲಿದ್ದಾರೆ.

ಡಿಕೆಶಿ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್: ನಳಿನ್ ಪ್ರತಿಕ್ರಿಯೆ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾಮಾಣಿಕರು, ಪಾರದರ್ಶಕವಾಗಿ ಇದ್ದಿದ್ದೇ ಆದರೆ ಅವರ ವಿರುದ್ಧದ ಪ್ರಕರಣ ಹಿಂಪಡೆಯುವ ಅಗತ್ಯ ಇರಲಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ಅವರ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದರು. ‘ಅವರಿಗೆ ಭಯ ಯಾಕೆ? ಅವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ. ಸಿಬಿಐ ತನಿಖೆಯ

ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲವಿದೆ : ಸಂಸದ ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಅಭಿನಂದನೆ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿ ನಳಿನ್ ಕುಮಾರ್ ಕಟೀಲು ಮಾತನಾಡಿ ನಾನು ಸಾಧನೆ ಮಾಡಿದೆನೆಂದು ಹೇಳುವುದಿಲ್ಲ. ರಾಜಕೀಯಕ್ಕೆ ಇಚ್ಚೆಯಿಂದ ಬಂದವನಲ್ಲ. ಸಂಘದ ಹಿರಿಯ ಸೂಚನೆಯಂತೆ ಸಂಸದನಾಗಿ ಜನಸೇವೆ ಮಾಡಿದ್ದೇನೆ. ಸಂಘದ ವಿಚಾರಧಾರೆಯನ್ನು ಒಪ್ಪಿಕೊಂಡು ರಾಷ್ಟ್ರದ

ಮಂಗಳೂರಿನಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಿಗೆ ಸೇಬು ಹಣ್ಣಿನ ಹಾರದ ಅದ್ಧೂರಿ ಸ್ವಾಗತ

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಮಂಗಳೂರಿಗೆ ಆಗಮಿಸಿದ ಬಿ. ವೈ ವಿಜಯೇಂದ್ರ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ನಗರಕ್ಕೆ ಆಗಮಿಸಿದ ಅವರು, ತೆರೆದ ವಾಹನದ ಮೂಲಕ ನಗರದ ಬಂಟ್ಸ್ ಹಾಸ್ಟೆಲ್‍ನಿಂದ ಸಿವಿ ನಾಯಕ್ ಹಾಲ್ ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದರು. ಈ ವೇಳೆ ಬಿಜೆಪಿಯ ಮಹಿಳಾ ಕಾರ್ಯಕರ್ತರು ಆರತಿ ಬೆಳಗಿ, ತಿಲಕ ಹಚ್ಚಿ ಬರಮಾಡಿಕೊಂಡರು, ಜೊತೆಗೆ ಸೇಬು ಹಣ್ಣಿನ ಹಾರದ ಮೂಲಕ ಭರ್ಜರಿ ಸ್ವಾಗತ ಮಾಡಿದರು.

ಬೆಂಗಳೂರು: ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ

ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, 6 ತಿಂಗಳ ಬಳಿಕ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆದಿದೆ. ಶಾಸಕರ ಅಭಿಪ್ರಾಯ ಪಡೆದು ದೆಹಲಿಯಿಂದ ಬಂದಿದ್ದ ವೀಕ್ಷಕರು ಅಶೋಕ್ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 66ರ ಹರೆಯದ ಅಶೋಕ್ ಅವರು ಆರ್ ಎಸ್ ಎಸ್ ಹಿನ್ನಲೆ ಹೊಂದಿದ್ದು, ಈ ಹಿಂದೆ ವಿಧಾನಸಭೆಯ ವಿಪಕ್ಷದ ಉಪನಾಯಕರಾಗಿ ಉಪಮುಖ್ಯಮಂತ್ರಿಯಾಗಿ, ಕಂದಾಯ , ಗೃಹ