Home Archive by category ಶೈಕ್ಷಣಿಕ (Page 12)

ಫೆ.17ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ”ನಿರುತ್ತಾಯಣ” ಯಕ್ಷರೂಪಕ

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯು (NSD) “ಭಾರತ್ ರಂಗ್ ಮಹೋತ್ಸವ್” ಎಂಬ ಹೆಸರಿನಲ್ಲಿ ನಾಟಕೋತ್ಸವವನ್ನು ಪ್ರತೀವರ್ಷ ಆಯೋಜಿಸುತ್ತದೆ. ಈ ಉತ್ಸವದ 22 ನೇ ಆವೃತ್ತಿಯು, ಇದೇ ಫೆಬ್ರವರಿಯ 14 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಭಾರತದಾದ್ಯಂತ 10 ಸ್ಥಳಗಳಲ್ಲಿ ಪ್ರದರ್ಶಿಸಲು 960 ನಾಟಕಗಳಿಂದ, ಕೇವಲ  77 ನಾಟಕಗಳನ್ನು ಪ್ರಸಕ್ತ ವರ್ಷದಲ್ಲಿ

ಅಮೃತ ವಿದ್ಯಾಲಯಂನಲ್ಲಿ ಸಾರ್ವಜನಿಕ ಮಕ್ಕಳ ಆರೋಗ್ಯ ಶಿಬಿರ

ಇದೇ ಬರುವ ಆದಿತ್ಯವಾರ ಫೆಬ್ರವರಿ 5ರಂದು ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂನ ಆವರಣದಲ್ಲಿ ಸಾರ್ವಜನಿಕ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಬೆಳಿಗ್ಗೆ 8.30ರಿಂದ ಅಪರಾಹ್ನ 1.30ರ ವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ಚಾಂದಿನಿ ವಿಕ್ರಂ ಶೆಟ್ಟಿ ಎಚ್ ಒ ಡಿ, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್,ಇವರಿಂದ ದಂತ ನೈರ್ಮಲ್ಯದ ಬಗ್ಗೆ ಉಪನ್ಯಾಸ ಮಾಡಲಿದ್ಧಾರೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯ ಬೇಕಾಗಿ ವಿನಂತಿ.

ಸಹ್ಯಾದ್ರಿಯಲ್ಲಿ ಔರಾ 2023 – ಫ್ರೆಶರ್ಸ್ ಡೇ ಆಚರಿಸಲಾಯಿತು

ಔರಾ 2023 – ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಬ್ಯಾಚ್ 2022ರ ಫ್ರೆಶರ್ಸ್ ಡೇ ಅನ್ನು ಫೆಬ್ರವರಿ 7, 2023 ರಂದು ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಗ್ಲೋಬಲ್ ಆರ್‌ಎಂಜಿ ಮುಖ್ಯಸ್ಥರಾದ ಶ್ರೀ ಚಕ್ರವರ್ತಿ ಇ.ಎಸ್. ಹಾಗೂ ಗೌರವ ಅತಿಥಿಗಳಾಗಿ ಶ್ರೀ ಎನ್. ಶಶಿಕುಮಾರ್ IPS, DIGP ಮತ್ತು ಪೊಲೀಸ್ ಆಯುಕ್ತರು, ಮಂಗಳೂರು ಇವರುಗಳು ಭಾಗವಹಿಸಿದರು.

ಉಜಿರೆ ಎಸ್.ಡಿ.ಎಂ ಕಾಲೇಜಿಗೆ ನ್ಯಾಕ್ ಅತ್ಯುನ್ನತ ಗ್ರೇಡ್

ಉಜಿರೆ, ಫೆ.7: ರಾಷ್ಟ್ರೀಯ ಮೌಲ್ಯಾಂಕನ ಹಾಗೂ ಮೌಲ್ಯಮಾಪನದ (ನ್ಯಾಕ್) ನಾಲ್ಕನೇ ಆವೃತ್ತಿಯಲ್ಲಿ ಉಜಿರೆ ಶ್ರೀ ಧ.ಮ ಕಾಲೇಜು ಅತ್ಯುನ್ನತ ಗ್ರೇಡ್‍ನೊಂದಿಗೆ ಎ ಪ್ಲಸ್ ಪ್ಲಸ್ (ಂ ++) ವಿಶೇಷ ಮನ್ನಣೆ ಗಳಿಸಿದೆ. ನ್ಯಾಕ್ ಪರಿಶೀಲನೆಯ ಪ್ರಕ್ರಿಯೆಯ ಭಾಗವಾಗಿ ಮೂವರು ತಜ್ಞ ಸದಸ್ಯರ ತಂಡವು ಕಳೆದ ತಿಂಗಳ 30 ಹಾಗೂ 31ರಂದು ಕಾಲೇಜಿಗೆ ಭೇಟಿ ನೀಡಿತ್ತು. ಓರಿಸ್ಸಾದ ಕಲಹಂಡಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಂಜಯ ಕುಮಾರ್ ಸತಪತಿ ಅಧ್ಯಕ್ಷತೆಯ ನ್ಯಾಕ್

ಸಾಹಿತ್ಯ ಸಮ್ಮೇಳನದಲ್ಲಿ ಜನಮನ ರಂಜಿಸಿದ ಯಕ್ಷ ‘ಗಾನ’ ವೈಭವ

ಉಜಿರೆ, ಫೆ.6: ‌ದಕ್ಷಿಣ ಕನ್ನಡ ಜಿಲ್ಲಾ 25ನೆಯ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ರವಿವಾರ ಮಧ್ಯಾಹ್ನ ನಡೆದ ಯಕ್ಷ ‘ಗಾನ’ ವೈಭವ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಯಕ್ಷಗಾನ ಪ್ರಿಯರ ಚಪ್ಪಾಳೆಯ ಮೆಚ್ಚುಗೆ ಗಳಿಸಿದರು. ತಂಡದ ನಿರ್ದೇಶಕ (ಪುತ್ತೂರು ವಿವೇಕಾನಂದ ಕಾಲೇಜಿನ ಸಹ ಪ್ರಾಧ್ಯಾಪಕರು) ರಾದ ವರ್ಷಿತ್ ಕಿಜಕ್ಕಾರ್ ಅವರ ಚೆಂಡೆಯ ನಾದ ಹಾಗೂ ಕಿಶನ್ ರಾವ್ ಅವರ ಚಕ್ರತಾಳ ದನಿಯೊಂದಿಗೆ ವಿದ್ಯಾರ್ಥಿನಿಯರಾದ ಹೇಮಾ,

ಕನ್ನಡ ಸಾಹಿತ್ಯ ಸಮ್ಮೇಳನ : ಕನ್ನಡ ತಾಯಿಗೆ ಸ್ವರಾಭಿಷೇಕಗೈದ ‘ಸುಮಧುರ ಗೀತೆಗಳ ಗಾಯನ’

ಉಜಿರೆ, ಫೆ 6: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ರವಿವಾರ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ಘಟ್ಟದಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಸುಮಧುರ ಗೀತೆಗಳ ಗಾಯನದ ಮೂಲಕ ಸ್ವರಾಭಿಷೇಕವೇ ನಡೆಯಿತು. ಆ ಮೂಲಕ ಮೂರು ದಿನಗಳ ಅಕ್ಷರ ಜಾತ್ರೆ ಪೂರ್ಣ ಮುಕ್ತಾಯ ಕಂಡಿತು. “ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು..” “ಕರುನಾಡ ತಾಯಿ ಸದಾ ಚಿನ್ಮಯಿ..” ಮುಂತಾದ ಗೀತೆಗಳ ಮೂಲಕ ಸ

ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಾಹಿತ್ಯ ಸಮ್ಮೇಳನಕ್ಕೆ ತೆರೆ 

ಉಜಿರೆ, ಫೆ.6: ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ರವಿವಾರ ಸಂಪನ್ನಗೊಂಡ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಿತು. ಸಂಜೆ ಸಮ್ಮೇಳನದ ಸಮಾರೋಪದ ಬಳಿಕ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಮುಂಚೂಣಿಯಲ್ಲಿ ಮಂಗಳೂರು ಮತ್ತು ಉಜಿರೆಯ ವಿಶೇಷಚೇತನ ಮಕ್ಕಳ ಶಾಲೆ ‘ಸಾನಿಧ್ಯ’ದ ಮಕ್ಕಳಿಂದ ನಾಲ್ಕು ಕಾರ್ಯಕ್ರಮಗಳು

ಕದ್ರಿ ಕಾಳಭೈರವ ದೇವಸ್ಥಾನ: ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ

ಮಂಗಳೂರು: ಮಂಗಳೂರಿನ ಶ್ರೀ ಕಾಲಭೈರವ ದೇವಸ್ಥಾನ ಸುವರ್ಣ ಕದಳೀ ಶ್ರೀ ಯೋಗೇಶ್ವರ ಮಠದ ಮಠಾಧೀಶರಾದ ರಾಜರಾಜೇಶ್ವರತಪೋನಿಧಿ ಶ್ರೀ 1008 ಶ್ರೀ ರಾಜಯೋಗಿ ನಿರ್ಮಲನಾಥಜೀ ಅವರ ಮಾರ್ಗದರ್ಶನದಲ್ಲಿ, ವೇದವಿದ್ವಾನ್ ದೇರೆಬೈಲು ವಿಠಲ್‌ದಾಸ್ ತಂತ್ರಿಗಳ ನೇತೃತ್ವದಲ್ಲಿ ಕದ್ರಿ ಸಿದ್ಧ ಪೀಠದೊಡೆಯ ಶ್ರೀ ಕಾಲಬೈರವ ದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಇಂದು ನಾಥ ಪಂಥದ ಸಂಪ್ರದಾಯದಂತೆ ವೈಧಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.ಇದೇ ಸಂದರ್ಭದಲ್ಲಿ ಶಿಖರ

ಪ್ರಾದೇಶಿಕ ಅಸ್ಮಿತೆ ಬಿಂಬಿಸಿದ ರಂಗ ವೈಖರಿ ಗೋಷ್ಠಿ

ಉಜಿರೆ, ಫೆ.5: ಯಕ್ಷಗಾನ ಭಕ್ತಿ ಪರಂಪರೆಯಿಂದ ಬೆಳೆದು ಬಂದ ಕಲೆ. ಇದು ನಾಟ್ಯಧರ್ಮೀಯ ಹಾಗೂ ಲೋಕಧರ್ಮೀಯ ನೆಲೆಗಳನ್ನು ಹೊಂದಿದೆ ಎಂದು  ಹವ್ಯಾಸಿ ಯಕ್ಷಗಾನ ಕಲಾವಿದ ಮತ್ತು ಉಪನ್ಯಾಸಕ ಸುನಿಲ್ ಪಲ್ಲಮಜಲು ಹೇಳಿದರು. ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದ ‘ಸಾರಾ ಅಬೂಬಕ್ಕರ್ ವೇದಿಕೆ’ಯಲ್ಲಿ ನಡೆಯುತ್ತಿರುವ 25ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ 4ನೇ ಗೋಷ್ಠಿಯ ‘ರಂಗವೈಖರಿ’ ಕಾರ್ಯಕ್ರಮದಲ್ಲಿ ‘ಯಕ್ಷಗಾನ’ ಕುರಿತು ವಿಶೇಷ ಉಪನ್ಯಾಸಕರಾಗಿ

ವಿಶೇಷ ಉಪನ್ಯಾಸ: ‘ಮಂಕುತಿಮ್ಮನ ಕಗ್ಗ-ಜೀವನ ಮೌಲ್ಯ’

ಉಜಿರೆ, ಫೆ.5: ಉತ್ತಮ ಮೌಲ್ಯಗಳಿಂದ ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ಸುಭದ್ರತೆ ಸಾಧ್ಯವಾಗುತ್ತದೆ ಎಂದು ಪ್ರವಚನಕಾರ ಜಿ.ಎಸ್. ನಟೇಶ್ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ