Home ಕರಾವಳಿ Archive by category ಮಂಗಳೂರು

ಕರ್ನಾಟಕ ಸರಕಾರ ಆಹಾರ ಆಯೋಗದ ಸದಸ್ಯರಾಗಿ ಹಿರಿಯ ಕಾಂಗ್ರೆಸ್ಸಿಗ ಸುಮಂತ್ ರಾವ್ ಆಯ್ಕೆ

1991ರಿಂದ ವಿದ್ಯಾರ್ಥಿ ಕಾಂಗ್ರೆಸ್ ನಲ್ಲಿ (nsui ) ಗುರುತಿಸಿಕೊಂಡು ಯು. ಟಿ ಖಾದರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಹೋರಾಟವನ್ನು ಸಂಘಟಿಸಿಕೊಂಡು ಎನ್ ಎಸ್ ಯು ಐ ಯಲ್ಲಿ ಅವಿಭಾಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ

ಮಂಗಳೂರು : “ದಾಸ ನಮನ”- ಸಂಗೀತ ಕಾರ್ಯಾಗಾರ

ಮಂಗಳೂರು: ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ಸಂಗೀತ ವಿದ್ಯಾರ್ಥಿಗಳಿಗಾಗಿ ಮತ್ತು ಸಂಗೀತಾಸಕ್ತರಿಗಾಗಿ  “ದಾಸ ನಮನ” ಸಂಗೀತ ಕಾರ್ಯಾಗಾರವು  ಮಂಗಳೂರು ವಿಟಿ ರಸ್ತೆಯ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ  ನಡೆಯಿತು.  ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ಮಲ್ಲಿಕಾರ್ಜುನ ಸಂಶಿ  ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡಿದರು. ದಾಸಪರಂಪರೆಯಲ್ಲಿ ಬಂದ ಅಪರೂಪದ ಹಾಡುಗಳಿಗೆ ಹಿಂದೂಸ್ತಾನಿ ರಾಗ ಆಧಾರಿತ ಸ್ವರಸಂಯೋಜನೆ ಮತ್ತು ಕಲಿಕಾ ವಿಧಾನದ

ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

ರಾಜ್ಯ ಸರಕಾರವು ತುಳು, ಬ್ಯಾರಿ, ಕೊಂಕಣಿ ಅಕಾಡಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ತಾರನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಉಮರ್ ಯು.ಎಚ್. ಹಾಗೂ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರನ್ನು ನೇಮಿಸಿದೆ.

ಮಂಗಳೂರು: ಮಾ.17ರಂದು ಗುರು-ಶಿಷ್ಯರ ಸಮ್ಮಿಲನ

ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಅಲ್ಯುಮ್ನಿ ಅಸೋಸಿಯೇಷನ್ ಆಶ್ರಯದಲ್ಲಿ ಮಾರ್ಚ್ 17ರಂದು ಬೆಳಗ್ಗೆ 9.30ರಿಂದ ಸಂಜೆ 4ರ ತನಕ ಗುರು -ಶಿಷ್ಯರ ಸಮ್ಮಿಲನ ‘ಗುರುಭ್ಯೋ ನಮಃ’ ಕಾರ್ಯಕ್ರಮ ನಡೆಯಲಿದೆ.1982ರಿಂದ 2024ರವರೆಗಿನ 41 ವರ್ಷಗಳ ಸುದೀರ್ಘ ಕಾಲದಲ್ಲಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳ ಹಾಗೂ ಕಲಿಸಿದ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ಒಂದೇ ಕಡೆ ಕಲೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ

ಮಂಗಳೂರು: ಫಾದರ್ ಮುಲ್ಲರ್ ರೋಟರಿ ಸ್ಕಿನ್ ಬ್ಯಾಂಕ್ ಉದ್ಘಾಟನೆ

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಮಂಗಳೂರು ವತಿಯಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ‘ಫಾದರ್ ಮುಲ್ಲರ್-ರೋಟರಿ ಸ್ಕಿನ್ ಬ್ಯಾಂಕ್’ ಉದ್ಘಾಟಿಸಲಾಯಿತು. ಸ್ಕಿನ್ ಬ್ಯಾಂಕ್‌ನ್ನು ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ಕಿನ್ ಬ್ಯಾಂಕ್ ಅನೇಕ ವರ್ಷಗಳ ಹಿಂದಿನ ಕನಸಾಗಿದ್ದು, ಅದಿಂದು ನನಸಾಗಿದೆ. ಇತರ

ಮಂಗಳೂರು: ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಬ್ರಿಜೇಶ್ ಚೌಟ ಭೇಟಿ

ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಮಂಗಳೂರಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನ್ಯಾಯಾಲಯ ನಿಯೋಜಿತ ರಿಸೀವರ್ ಕೆ ಉಮೇಶ್ ಆಚಾರ್ಯ ಪಾಂಡೇಶ್ವರ, ಮನಪಾ ಮಣ್ಣಗುಡ್ಡೆ ಕಾರ್ಪೊರೇಟರ್ ಶ್ರೀಮತಿ ಬಿ ಸಂಧ್ಯಾ ಮೋಹನ್ ಬಿಜೆಪಿ ಯ ಪ್ರಮುಖರಾದ ಬಿ ಮೋಹನ್ ಮುಂತಾದವರು, ಶ್ರೀ ಕ್ಷೇತ್ರದ ಮಾಜಿ ಮಾಜಿ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಮಾಜಿ ಮೂರನೇ ಮೊಕ್ತೇಸರ ಎ ಲೋಕೇಶ್

ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆ-ಮಲ್ಲೈ ಮುಗಿಲನ್

ಮಂಗಳೂರು: ಮಣ್ಣು ,ನೀರು,ಗಾಳಿ ಸೇರಿದಂತೆ ನೈಸರ್ಗಿಕ ಸಂಪತ್ತಿನ ಮಿತ ಬಳಕೆ ಸಂರಕ್ಷಣೆ ನಮ್ಮೆಲ್ಲರ ಸಾಮೂ ಹಿಕ ಹೊಣೆ ಗಾರಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಅವರು ಜಿಲ್ಲಾಧಿಕಾರಿ ನಿವಾಸದಲ್ಲಿ ಜಿಲ್ಲಾಡಳಿತ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಯುವ ರೆಡ್ ಕ್ರಾಸ್ ಘಟಕ, ಬ್ಯಾಂಕ್ ಆಫ್ ಬರೋಡಾದ ಸಹಯೋಗದೊಂದಿಗೆ ಹಮ್ಮಿಕೊಂಡ ಜೀವ ಜಲ ಉಳಿಸಿ ಅಭಿಯಾನದ ಜಲ ಸಂರಕ್ಷಣೆಯ ಭಿತ್ತಿ ಪತ್ರ ಬಿಡುಗಡೆ

ಇವಿಎಂ ಭದ್ರತಾ ಕೇಂದ್ರಗಳ ಪೂರ್ವಸಿದ್ಧತೆ ಪರಿಶೀಲನೆ

ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲನೆ ಮಾಡಿದರು. ಸುರತ್ಕಲ್ ಎನ್.ಐ.ಟಿ.ಕೆ. ಇಂಜಿನಿಯರಿಂಗ್ ಕಾಲೇಜಿಗೆ ತೆರಳಿ ದಕ್ಷಿಣ ಕನ್ನಡ ಜಿಲ್ಲೆಯ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಮತ್ತಿತರರು

ಮಂಗಳೂರು: ಮಾಲಾಡಿ ಕೋರ್ಟ್ ಬಡಾವಣೆಯಲ್ಲಿ ಪಾರ್ಕ್ ಉದ್ಘಾಟನೆ

ಬಂಗ್ರಕೂಳೂರು ವಾರ್ಡ್‌ಗೆ ಒಳಪಟ್ಟ ಮಾಲಾಡಿಕೋರ್ಟ್ ಬಡಾವಣೆಯಲ್ಲಿ ನಿರ್ಮಾಣ ಗೊಂಡ ಪಾರ್ಕ್‌ನ ಉದ್ಘಾಟನೆ ನಡೆಯಿತು. ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿ ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಅನುದಾನ ಅಂದಾಜು 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.ಈ ಹಿಂದಿನ ನನ್ನ ಶಾಸಕ ಅವಧಿಯಲ್ಲಿ ಇದಕ್ಕೆ ಮುಡಾದ ವತಿಯಿಂದ ಅನುದಾನ ಮೀಸಲಿಡಲಾಗಿತ್ತು.ಅನೇಕ ಕಿರು ಪಾರ್ಕ್‌ಗಳನ್ನು ನಿರ್ಮಿಸಿ ಹಸಿರು ವಾತಾವರಣ ಹಾಗೂ ಕೆರೆಗಳ ಪುನರುಜ್ಜೀವನಕ್ಕೆ ಒತ್ತು ನೀಡಿ

ಒಟಿಟಿಯಲ್ಲಿ ಮಂಕುಭಾಯ್ ಫಾಕ್ಸಿ ರಾಣಿ ಸಿನಿಮಾ

ಬಿಗ್‌ಬಾಸ್ ಸೀಸನ್ 9ರ ವಿಜೇತ ನಟ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಸಿನಿಮಾ ಇದೀಗ ಒಟಿಟಿಯಲ್ಲಿ ಲಭ್ಯವಿದೆ. ಅಮೆಜಾನ್ ಪ್ರೈಮ್‌ನಲ್ಲಿ ಸಿನಿ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ. ಕಳೆದ ವರ್ಷ ಸಿನಿಮಾ ಮಂದಿರದಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿದ್ದ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಓಟಿಟಿ ಪ್ಲಾಟ್ ಪಾಮ್‌ನಲ್ಲಿ ಲಭ್ಯವಿದೆ. ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಲು ಅವಕಾಶವಿದೆ.ನಟ ರೂಪೇಶ್ ಶೆಟ್ಟಿ