Home Archive by category ರಾಜ್ಯ

ಕೊಯಮತ್ತೂರಿನ ಲಾಟರಿ ಮತ್ತು ಹೋಟೆಲ್ ಲಾಬಿ : ಭಾರತದ ಲಾಟರಿ ದೊರೆ ಮಾರ್ಟಿನ್ ಸಾಮ್ರಾಜ್ಯ

ಸಿಕ್ಕಿಂ ಸರಕಾರಕ್ಕೆ ರೂ. 4,500 ಕೋಟಿ ವಂಚಿಸಿರುವನು ಎನ್ನಲಾದ ಕೊಯಮತ್ತೂರು ಮೂಲದ ಸ್ಯಾಂಟಿಯಾಗೋ ಮಾರ್ಟಿನ್ ಮ್ಯಾನ್ಮಾರ್‌ನಲ್ಲಿ ಕೆಲಸ ಮಾಡಿ ಭಾರತಕ್ಕೆ ಹಿಂತಿರುಗಿದವನು. ನಾನಾ ದಾರಿಯಿಂದ ಲಾಟರಿ ರಾಜ ಎನಿಸಿ, ಫ್ಯೂಚರ್ ಗೇಮಿಂಗ್ ಹಾಗೂ ಹೋಟೆಲ್‌ಗಳ ಮಾಲಕನಾಗಿರುವನು. 1,368 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಕೊಂಡಿರುವ ಈತ ರಾಜಕೀಯ ಪಕ್ಷಗಳಿಗೆ ತನ್ನ

ಪದ್ಮಜಾ ಬಿಜೆಪಿಗೆ ವಲಸೆ : ಮುರಳೀಧರನ್‌ಗೆ ಟಿಕೆಟ್

ಕೇರಳದ ಮುಖ್ಯಮಂತ್ರಿಯಾಗಿದ್ದ ಎ. ಕೆ. ಕರುಣಾಕರ್ ಮಕ್ಕಳು ಎರಡು ದಾರಿ ಹಿಡಿದಿದ್ದರೂ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳದೆ ಮುರಳೀಧರನ್‌ರಿಗೆ ಟಿಕೆಟ್ ನೀಡಿದೆ. ಮರಳೀಧರನ್‌ರು ಸದ್ಯ ವಡಕ್ಕರ ಸಂಸದರು. ಆದರೆ ಅವರಿಗೆ ಈಗ ತ್ರಿಶೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ತ್ರಿಶೂರು ಕರುಣಾಕರನ್‌ರ ಮೂಲ ನೆಲೆ. ಪದ್ಮಜಾರು ಬಿಜೆಪಿಗೆ ಸೇರಿರುವುದರಿಂದ ಮುರಳೀಧರನ್‌ರಿಗೆ ಕ್ಷೇತ್ರ ಬದಲಿಸಿ ಟಿಕೆಟ್ ನೀಡಲಾಗಿದೆ. ತ್ರಿಶೂರ್‌ನಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಕರುಣಾಕರನ್ 

ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ

ಉತ್ತರ ಕರ್ನಾಟಕ ಮೂಲದ ಬೆಂಗಳೂರು ನಿವಾಸಿ ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ಸುಧಾ ಮೂರ್ತಿಯವರನ್ನು ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ಬಗೆಗೆ ಪ್ರಧಾನಿ ಮೋದಿಯವರು ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿ, ರಾಷ್ಟ್ರಪತಿಯವರು ತಮ್ಮನ್ನು ನೇಮಿಸಿರುವುದು ಆನಂದ ತಂದಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನಾಮ ನಿರ್ದೇಶನ ಮಾಡಿದ್ದಾರೆ. ಇದರಿಂದ ನಾರೀ ಶಕ್ತಿಗೆ ಬಲ ಬಂದಂತಾಗಿದೆ ಎಂದೂ ಹೇಳಲಾಗಿದೆ.

ತಮಿಳುನಾಡು ಸೇರದ ಜಯಲಲಿತಾ ಚಿನ್ನಾಭರಣ

ಕರ್ನಾಟಕದ ವಶ ಇರುವ ದಿವಂಗತ ಜಯಲಲಿತಾರಿಗೆ ಸೇರಿದ ಚಿನ್ನಾಭರಣಗಳನ್ನು ತಮಿಳುನಾಡು ಸರಕಾರಕ್ಕೆ ಒಪ್ಪಿಸುವುದಕ್ಕೆ ಹೈಕೋರ್ಟ್ ಮಧ್ಯಾವಧಿ ತಡೆ ನೀಡಿತು. ಇವುಗಳಲ್ಲಿ ಹೆಚ್ಚಿನ ಆಭರಣಗಳು ನನ್ನ ಅಜ್ಜಿ ನಟಿ ಸಂಧ್ಯಾರಿಗೆ ಸೇರಿದ್ದು ಎಂದು ಜಯಲಲಿತಾರ ಸಹೋದರನ ಮಗಳು ಜೆ. ದೀಪಾ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರು ಚಿನ್ನಾಭರಣ ಹಸ್ತಾಂತರಕ್ಕೆ ತಾತ್ಕಾಲಿಕ ತಡೆ ನೀಡಿದರು.

ಆಗ್ರಾ, ಮಥುರಾ, ಆಲಿಗಡಗಳಲ್ಲಿ ಭಾರೀ ಮಳೆ

ದಿಲ್ಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶಗಳಲ್ಲಿ ಭಾರೀ ಮಳೆ ಬಂದಿದೆ. ಸುತ್ತಣ 12 ರಾಜ್ಯಗಳಲ್ಲಿ ತುಂತುರು ಮಳೆ ಬಂದಿದ್ದು ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಗಾಳಿ ಮಳೆ ಸುರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾರತದ ಕೆಲವೆಡೆ ಹವಾಮಾನ ಬದಲಾವಣೆ ಕಂಡಿದೆ. ಮಳೆಯೊಂದಿಗೆ 50 ಕಿಮೀ ವೇಗದಲ್ಲಿ ಗಾಳಿಯೂ ಬೀಸಲಿದೆ; ಬೀಳುತ್ತಿದೆ. ದಿಲ್ಲಿ, ಉತ್ತರ ಪ್ರದೇಶದ ಆಲಿಗಡ, ಆಗ್ರಾ, ಮಥುರಾ, ಹಿಮಾಚಲ ಪ್ರದೇಶದ ಉದ್ದಗಲಕ್ಕೂ ಗಾಳಿ ಮಳೆ ರುದ್ರ ನರ್ತನ

ಸಾಹಿತಿ ರಾಧಾಕೃಷ್ಣ ಸೇರಿ ಮೂವರಿಗೆ ಗಡಿನಾಡ ಚೇತನ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ಗೆ ಕೇರಳದ ಕಾಸರಗೋಡಿನ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಸೇರಿ ಮೂವರು ಆಯ್ಕೆಯಾಗಿದ್ದಾರೆ. ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದೇವರು ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ರಾಧಾಕೃಷ್ಣ, ‘ಜಯದೇವಿತಾಯಿ ಲಿಗಾಡೆ’ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ಬೀದರ್‌ನ ಕನ್ನಡ ಪರ ಹೋರಾಟಗಾರ ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ‘ಕಯ್ಯಾರ ಕಿಞ್ಞಣ್ಣ ರೈ’ ಅವರ

ಗೌರಿ ಲಂಕೇಶ್ ಕೊಲೆ ಆರೋಪಿ ನಾಯಕ್‌ಗೆ ನೋಟೀಸು

ಗೌರಿ ಲಂಕೇಶ್ ಕೊಲೆ ಆರೋಪಿ ಎನ್. ಮೋಹನ್ ನಾಯಕ್ ಹೈಕೋರ್ಟಿನಲ್ಲಿ ಜಾಮೀನು ಪಡೆದಿದ್ದುದರ ಸಿಂಧುತ್ವ ಪ್ರಶ್ನಿಸಿದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಆರೋಪಿ ನಾಯಕ್‌ಗೆ ನೋಟೀಸು ನೀಡಿತು. ಹೈಕೋರ್ಟ್ 2023ರ ಡಿಸೆಂಬರ್ 7ರಂದು ಮೋಹನ್ ನಾಯಕ್‌ಗೆ ಜಾಮೀನು ನೀಡಿತ್ತು. ಕೂಡಲೆ ಗೌರಿ ತಂಗಿ ಕವಿತಾ ಲಂಕೇಶ್ ಸುಪ್ರೀಂನಲ್ಲಿ ಪ್ರಶ್ನಿಸಿದ್ದರು. ಆ ಸಂಬಂಧ ಜನವರಿಯಲ್ಲಿ ಆರೋಪಿಗೆ ಸುಪ್ರೀಂ ಕೋರ್ಟ್ ನೋಟೀಸು ನೀಡಿತ್ತು. ರಾಜ್ಯ ಸರಕಾರವೂ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ

ನೆಯ್ಪಿಲಿಯ ನರಳಾಟ

ಭಾರತದಲ್ಲಿ ಚಿರತೆಗಳ ಸಂಖ್ಯೆ ವಾರ್ಷಿಕ 1.08 ಶೇಕಡಾ ಏರಿಕೆ ಕಾಣುತ್ತಿದೆ. ಸದ್ಯ ಭಾರತದಲ್ಲಿ 13,874 ಚಿರತೆಗಳು ಇರುವುದಾಗಿ ಒಕ್ಕೂಟ ಸರಕಾರದ ಪರಿಸರ ಮಂತ್ರಿ ಭೂಪೇಂದ್ರ ಯಾದವ್ ಬಿಡುಗಡೆ ಮಾಡಿರುವ ಚಿರತೆ ಸ್ಥಿತಿಗತಿ ವರದಿಯಲ್ಲಿ ಇದೆ. ಈ ಚಿರತೆ ಎನ್ನುವುದು ಲೆಪರ್ಡ್. ಇದನ್ನು ತುಳುವಿನಲ್ಲಿ ಚಿಟ್ಟೆ ಪಿಲಿ, ನೆಯ್ಪಿಲಿ ಎಂದೆಲ್ಲ ಕರೆಯುತ್ತಾರೆ. ಇದಕ್ಕೆ ನೆಯ್ಪಿಲಿ ಹೆಸರು ಬಂದುದು ಅದರ ಬೇಟೆಯಿಂದ. ಲೆಪರ್ಡ್ ಚಿರತೆಯು ನಾಯಿ ಹಿಡಿಯುವುದರಲ್ಲಿ ಎಕ್ಸ್‍ಪರ್ಟ್.

ಹಣವಂತರ ನಡುವಣ ಹೆಣವಂತ ಸಮುದಾಯ

ಭಾರತದಲ್ಲಿ ಅತೀ ಸಿರಿವಂತರ ಸಂಖ್ಯೆಯು 13,230ಕ್ಕೆ ಏರಿಕೆಯಾಗಿದೆ. 141 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ದೊಡ್ಡ ಸಂಖ್ಯೆಯೇನೂ ಅಲ್ಲ. ಆದರೆ ಅಭಿವೃದ್ಧಿಶೀಲ ಹೆಸರು ಹಲಗೆ ಕಳಚಿಕೊಳ್ಳಲಾಗದ, 40 ಕೋಟಿಯಷ್ಟು ಬಡವರನ್ನು ಹೊಂದಿರುವ ಭಾರತದಲ್ಲಿ ಬಡವರ ಸಂಖ್ಯೆ ಇಳಿಸಲು ಸಾಧ್ಯವಾಗಿಲ್ಲ. ಬದಲಿಗೆ ಜನಸಂಖ್ಯೆ ಏರಿದಂತೆಯೇ ಬಡವರ ಸಂಖ್ಯೆಯೂ ಏರುತ್ತ ನಡೆದಿದೆ. 1970ನೇ ಇಸವಿಯಲ್ಲಿ ತಿಂಗಳಿಗೆ 300 ರೂಪಾಯಿ ಗಳಿಸುತ್ತಿದ್ದ ವ್ಯಕ್ತಿಯು ಈಗ ತಿಂಗಳಿಗೆ 13,000

ಅಡ್ಡ ಮತದಾನ ಬಿಜೆಪಿಗೆ ಭರ್ಜರಿ ಲಾಭ

ಹದಿನೈದು ರಾಜ್ಯಗಳ 66 ರಾಜ್ಯ ಸಭಾ ಸ್ಥಾನಗಳಿಗೆ ವಿಧಾನ ಸಭೆಯಿಂದ ನಡೆದ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 30 ಸ್ಥಾನ ಗೆದ್ದು 45 ಶೇಕಡಾಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. ಆದರೆ ಇದರಲ್ಲಿ 6 ಸ್ಥಾನಗಳನ್ನು ಅದು ವಶೀಲಿಬಾಜಿಯಿಂದ, ಖರೀದಿಯಿಂದ, ಹಿಂದಿನ ಬಾಗಿಲಿನಿಂದ ತನ್ನದಾಗಿಸಿಕೊಂಡಿದೆ ಎನ್ನುವುದು ಹಲವರ ಆರೋಪವಾಗಿದೆ. ಆರು ವರುಷ ಸದಸ್ಯಾವಧಿಯ ರಾಜ್ಯ ಸಭೆಯ ಮೂರನೇ ಒಂದು ಭಾಗದ ಸದಸ್ಯರು ಪ್ರತಿ ಎರಡು ವರುಷಕ್ಕೊಮ್ಮೆ