Home Archive by category Fresh News (Page 12)

ಕಾಂಗ್ರೆಸ್ ನ ಪದ್ಮರಾಜ್ ಗೆ ಮತ ಹಾಕಿ ಬಿಜೆಪಿಯನ್ನು ಸೋಲಿಸಿ: ಸಿಪಿಐಎಂನ ಯಾದವ ಶೆಟ್ಟಿ ಕರೆ

ಮೂಡುಬಿದಿರೆ: ದ.ಕ.ಜಿಲ್ಲೆಯಲ್ಲಿ ಕಳೆದ 32 ವರ್ಷಗಳಿಂದ ಬಿಜೆಪಿಯ ಸಂಸದರಿದ್ದರು. ಆದರೆ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಆಗಿದೆ. ಮನು ಸಂಸ್ಕೃತಿಯನ್ನು ಪ್ರತಿಪಾದಿಸುವ ಬಿಜೆಪಿಯು ಅಧಿಕಾರಕ್ಕೆ ಬರಬಾರದು ಆದ್ದರಿಂದ ನಾವು ಕಾಂಗ್ರೆಸ್ ನ ಪದ್ಮರಾಜ್ ಗೆ ಮತವನ್ನು ಹಾಕಿ ಬಿಜೆಪಿಯನ್ನು ಸೋಲಿಸಬೇಕು ಎಂದು ಸಿಪಿಐಎಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಕರೆ

ಪುತ್ತೂರಿನ ಹರ್ಷ ಶೋರೂಂನ ಗೋದಾಮಿನಲ್ಲಿ ಅಗ್ನಿ ಅವಘಡ

ಪುತ್ತೂರು: ಪುತ್ತೂರು ದರ್ಬೆ ಸಂತೃಪ್ತಿ ಹೋಟೆಲ್ ಹಿಂಬದಿ ಹರ್ಷ ಶೋರೂಮ್ ಗೋದಾಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೋಟ್ಯಾಂತರ ಮೌಲ್ಯದ ಸೊತ್ತುಗಳು ಹಾನಿಗೊಂಡಿವೆ. ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಪುತ್ತೂರು ನಗರ ಪೊಲೀಸರು ಸಹಕರಿಸುತ್ತಿದ್ದಾರೆ.

ಆಟಿಸಂ ಜಾಗೃತಿ ದಿನ- ಏಪ್ರಿಲ್ 2

ಪ್ರತಿ ವರ್ಷ ಏಪ್ರಿಲ್ ಎರಡರಂದು ವಿಶ್ವದಾದ್ಯಂತ ವಿಶ್ವ ಆಟಿಸಂ ದಿನ ಆಚರಿಸಲಾಗುತ್ತದೆ. ಆಟಿಸಂ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕಿ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು 2007ರಲ್ಲಿ ಯುನೈಟೆಡ್ ಜನರಲ್ ಅಸೆಂಬ್ಲಿ ಜಾರಿಗೆ ತಂದಿತು. ಕಳೆದ ೧೬ ವರ್ಷಗಳಲ್ಲಿ ಸಾವಿರಾರು ಇಂತಹ ಜಾಗೃತಿ ಕಾರ್ಯಕ್ರಮಗಳು ಜಗತ್ತಿನಾದ್ಯಂತ ನಡೆದು, ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ

ದಂತಾಘಾತವಾದಾಗ ಏನು ಮಾಡಬೇಕು?

ಹಲ್ಲು ನಮ್ಮ ದೇಹದ ಅತ್ಯಂತ ಪ್ರಾಮುಖ್ಯವಾದ ಅಂಗ. ಸುಂದರ ದಂತ ಪಂಕ್ತಿಗಳಿಂದ ಕೂಡಿದ ನಗು ಎಂತವರನ್ನು ಮಂತ್ರ ಮುಗ್ಧವಾಗಿಸುತ್ತದೆ. ಹಲ್ಲು ನಮ್ಮ ದೇಹದ ಮುಂಭಾಗದಲ್ಲಿ ಇರುವ ಕಾರಣದಿಂದಲೇ ಯಾವುದೇ ಆಟೋಟಗಳಲ್ಲಿ, ಹೊಡೆದಾಟದಲ್ಲಿ, ಅಪಘಾತದಲ್ಲಿ ಬಿದ್ದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಇದು ಸರ್ವೆ ಸಾಮಾನ್ಯವಾಗಿರುತ್ತದೆ. ಹೀಗೆ ತಮಗರಿಯುವ ಮುನ್ನವೇ ಹಲ್ಲು ತುಂಡಾದಾಗ ಮತ್ತು ಹಲ್ಲು ಹಲ್ಲಿನ ಸಾಕೆಟ್‍ನಿಂದ ಹೊರಬಿದ್ದಾಗ ಏನು ಮಾಡಬೇಕು

ರಾಜಕೀಯ ಬಿಟ್ಟು ಸಮುದಾಯದ ಗೆಲುವಿಗೆ ಆದ್ಯತೆ : ಸತ್ಯಜಿತ್ ಸುರತ್ಕಲ್

ಲೋಕಸಭಾ ಚುನಾವಣೆಯಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಬಿಲ್ಲವ ಸಮಾಜಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ದ.ಕ., ಉಡುಪಿ- ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಎಸ್‌ಎನ್‌ಜಿವಿ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ. ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ, ಟೀಂ ಸತ್ಯಜಿತ್ ಸುರತ್ಕಲ್‌ನಲ್ಲಿ

ಪದ್ಮರಾಜ್ ಅವರು ಕಾಂಗ್ರೆಸ್ ಪಕ್ಷದ ಎಲ್ಲರ ಒಮ್ಮತದ ಅಭ್ಯರ್ಥಿ : ಮಾಜಿ ಸಚಿವ ರಮಾನಾಥ ರೈ

ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು ಎ.3ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿ ಬಿ.ರಮಾನಾಥ ರೈ ತಿಳಿಸಿದ್ದಾರೆ. ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವ ಮೊದಲು ಚರ್ಚ್, ಮಸೀದಿ, ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ

ಬೈಂದೂರು: ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಈಶ್ವರಪ್ಪ

ಬೈಂದೂರು: ಕಳೆದ 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ. ಹಿಂದುತ್ವ ದೇಶ ಅಭಿವೃದ್ಧಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕುರಿತು ಜನ ಸ್ಪಷ್ಟ ಫಲಿತಾಂಶ ನೀಡಲಿದ್ದಾರೆ.ಯಾವ ಒತ್ತಡಗಳಿಗೂ ಮಣಿಯಲಾರೆ.ಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು. ಅವರು ಉಪ್ಪಂದದಲ್ಲಿ ಉಪ್ಪುಂದ ಪರಿಚಯ ಹೋಟೆಲ್ ಸಭಾಭವನದಲ್ಲಿ ನಡೆದ ಈಶ್ವರಪ್ಪ ಬೆಂಬಲಿತ ಕಾರ್ಯಕರ್ತರ

ಗೋಳಿತ್ತೊಟ್ಟು: ದ್ವಿಚಕ್ರ ವಾಹನಗಳ ಅಪಘಾತದ ಗಾಯಾಳು ನಿಧನ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪ ಮಾ.30ರಂದು ರಾತ್ರಿ ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸಾವರ, ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ನಿವಾಸಿ ವಿನಯ್(26ವ.)ಅವರು ಚಿಕಿತ್ಸೆಗೆ ಸ್ಪಂದಿಸದೆ ಮಾ.31ರ ಮಧ್ಯಾಹ್ನದ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಣ್ಣಂಪಾಡಿ ನಿವಾಸಿ ಜೇಕಬ್ ಅವರ

ಎರ್ಮಾಳಿನ ಅಕ್ರಮ ಕೋಳಿಯಂಕಕ್ಕೆ ದಾಳಿ : ಒಂಭತ್ತು ಮಂದಿ ವಶಕ್ಕೆ

ಎರ್ಮಾಳಿನ ಬಾರೊಂದರ ಹಿಂಬದಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು ಒಂಭತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಪೊಲೀಸ್ ವಶದಲ್ಲಿರುವವರು ಸುರೇಂದ್ರ ಬೆಳಪು, ಮಹೇಶ್ ಕುರ್ಕಾಲು, ಗಣೇಶ್ ಶೆಟ್ಟಿ ಎಲ್ಲೂರು, ಉಮೇಶ್ ಪೂಜಾರಿ ಕಾಪು, ಶ್ರೀಕಾಂತ್ ಉಚ್ಚಿಲ, ಸಂತೋಷ್ ಉಚ್ಚಿಲ, ರಾಜೇಂದ್ರ ಎಲ್ಲೂರು, ರಾಮ ತೆಂಕ ಎರ್ಮಾಳು, ಯೋಗೀಶ್ ಶೆಟ್ಟಿ ಕುಂಜೂರು.ಎರ್ಮಾಳಿನ ಬಾರ್ ಹಿಂಭಾಗದಲ್ಲಿ ಅಕ್ರಮ ಕೋಳಿಯಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಭೇಟಿ

ಪುತ್ತೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಭಾನುವಾರ ಮಧ್ಯಾಹ್ನ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿ, ಪೂಜೆ ನೆರವೇರಿಸಿದರು. ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮಾಜಿ ಅಧ್ಯಕ್ಷರುಗಳಾದ ವಿಜಯ ಕುಮಾರ್ ಸೊರಕೆ, ಜಯಂತ್ ನಡುಬೈಲು, ಕೆ.ಪಿ. ದಿವಾಕರ್, ಉಪಾಧ್ಯಕ್ಷರಾದ  ಅಶೋಕ್ ಕುಮಾರ್ ಪಡ್ಪು, ಶ್ರೀಮತಿ ವಿಮಲಾ ಸುರೇಶ್, ಕಾರ್ಯದರ್ಶಿ ಚಿದಾನಂದ ಸುವರ್ಣ,