Home Archive by category Fresh News (Page 14)

ನಗರದತ್ತ ಮುಖ ಮಾಡಿ ಮೋಸ ಹೋದವರು

ಹಣ ನಗರಗಳಲ್ಲಿ ರಾಶಿ ಬಿದ್ದಿದೆಯೆಂದು ನಗರದತ್ತ ಮುಖ ಮಾಡಿರುವವರ ಸಂಖ್ಯೆ ಈಗ ಒಂದೇ ಸಮನೆ ಏರುತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ನಗರದತ್ತ ಜನರ ವಲಸೆ ಕ್ರಿಸ್ತ ಪೂರ್ವದಿಂದಲೇ ಆರಂಭವಾಗಿದೆ. ಏಥನ್ಸ್, ರೋಮ್ ಇತ್ಯಾದಿ ನಗರಗಳು ಆ ಪಟ್ಟಿಯಲ್ಲಿ ಇವೆ. ಏಶಿಯಾದಲ್ಲಿ ಬ್ಯಾಬಿಲೋನ್, ಜೆರೂಸಲೇಮ್, ಆಫ್ರಿಕಾದಲ್ಲಿ ಕೈರೋ ಮೊದಲಾದ ನಗರಗಳು ಕ್ರಿಸ್ತಪೂರ್ವದಲ್ಲೇ ಜನ ವಲಸೆಯ

ಮಂಗಳೂರು : ಮುಕುಂದ್‌ ಎಂಜಿಎಂ ರಿಯಾಲ್ಟಿ: ಕೇದಾರ್ ಹೈ ಲಿವಿಂಗ್ ಲಕ್ಷುರಿ ವಸತಿ ಸಮುಚ್ಚಯದಲ್ಲಿ ಮಾದರಿ ಫ್ಲ್ಯಾಟ್ ವೀಕ್ಷಣೆಗೆ ಸಿದ್ಧ

ಮುಕುಂದ್‌ಎಂಜಿಎಂರಿಯಾಲ್ಟಿಯವರಿಂದ ಮಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ದೇರೇಬೈಲ್‌ನಲ್ಲಿ ನಿಮಾರ್ಣಗೊಳ್ಳುತ್ತಿರುವ ‘ಕೇದಾರ್-ಹೈ ಲಿವಿಂಗ್ ಲಕ್ಷುರಿ ಹೋಮ್ಸ್ ವಸತಿ ಸಮುಚ್ಚಯದಲ್ಲಿ ಗ್ರಾಹಕರ ವೀಕ್ಷಣೆಗೆ ಮಾದರಿ ಫ್ಲ್ಯಾಟ್ ಸಿದ್ಧವಾಗಿದ್ದು ಇಲ್ಲಿ ಹೈ ಲಿವಿಂಗ್ ಲಕ್ಷುರಿ ವೈಶಿಷ್ಟ್ಯಗಳಾದ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್‌ಆನ್‌ರೂಫ್‌ಟಾಪ್, ಬ್ಯಾಡ್ಮಿಂಟನ್‌ಕೋರ್ಟ್, ವಿಶಾಲವಾದಡಬಲ್ ಹೈಟ್ ಹೋಂದಿರುವ ವಿಸಿಟರ್ಸ್ ಲೋಬಿ, ಸ್ನೇಕ್ಸ್‌ಆಂಡ್ ಲ್ಯಾಡರ್ಸ್

ಲಾಲಾ ರಸ ಎಂಬ ಜೀವ ದ್ರವ್ಯ

ನಮ್ಮ ದೇಹದಲ್ಲಿನ ಜೊಲ್ಲು ರಸ ಗ್ರಂಥಿಗಳಿಂದ ಸ್ರವಿಸಲ್ಪಡುವ ದ್ರವ್ಯವನ್ನು ಜೊಲ್ಲು ರಸ ಅಥವಾ ಲಾಲಾರಸ ಎಂದು ಕರೆಯುತ್ತಾರೆ. ಈ ಜೊಲ್ಲುರಸದಲ್ಲಿ ಶೇಖಡಾ 99 ರಷ್ಟು ಬರೀ ನೀರು ಇರುತ್ತದೆ. ಮನುಷ್ಯ ಮಾತ್ರವಲ್ಲದೆ ಹೆಚ್ಚಿನ ಎಲ್ಲಾ ಪ್ರಾಣಿಗಳಲ್ಲಿಯೂ ಈ ಲಾಲಾರಸ ಸ್ರವಿಸಲ್ಪಡುತ್ತದೆ. ಕುತ್ತಿಗೆಯ ಸುತ್ತ ಇರುವ ಜೊಲ್ಲುರಸ ಗ್ರಂಥಿಗಳಿಂದ ಈ ಜೊಲ್ಲುರಸ ಸ್ರವಿಸಲ್ಪಡುತ್ತದೆ. ಸಬ್ ಮ್ಯಾಂಡಿಬುಲಾರ್ ಸಬ್‍ಲಿಂಗ್ರ್ವಲ್ ಮತ್ತು ಪೆರೋಟಿಡ್ ಎಂಬ ಮೂರು ಜೊತೆ ದೊಡ್ಡದಾದ ಜೊಲ್ಲು

ಯಾಕೆ ಮತದಾನ ಮಾಡಬೇಕು?

ಪ್ರಜಾ ಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಚುನಾವಣೆ ಎನ್ನುವುದು ಹಬ್ಬವಿದ್ದಂತೆ. ಈ ಹಬ್ಬದಲ್ಲಿ ವಿಜೃಂಭಣೆಯಿಂದ ಪ್ರತಿಯೊಬ್ಬ ಮತದಾರರೂ ಪಾಲ್ಗೊಳ್ಳಬೇಕು. ಮತದಾನ ಎನ್ನುವುದು ಪ್ರಜಾಪ್ರಭುತ್ವವಾದಿ ದೇಶದ ಜೀವನಾಡಿ ಇದ್ದಂತೆ. ಪ್ರಜಾಪ್ರಭುತ್ವ ಅಡಿಪಾಯವೇ ಪ್ರಜೆಗಳು. ಇಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವಂತಹಾ ಆಡಳಿತ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನುತ್ತಾರೆ. ಇಲ್ಲ ಯಾವುದೇ ಜಾತಿ, ಮತ, ಧರ್ಮ, ಬಡವ, ಬಲ್ಲಿದ,

ಮಂಗಳೂರು : ಖ್ಯಾತ ನಟ, ನಾಟಕ ಕಲಾವಿದ, ಹಾಡುಗಾರ ಪ್ರಸಾಧನಕಾರ ಎಸ್. ರಾಮದಾಸ್ ನಿಧನ

ಖ್ಯಾತ ನಟ, ನಾಟಕ ಕಲಾವಿದ, ಹಾಡುಗಾರ ಪ್ರಸಾಧನಕಾರ ಎಸ್. ರಾಮದಾಸ್ (86) ಇಲ್ಲಿನ ಟಿ. ಟಿ. ರಸ್ತೆ ನಿವಾಸಿ ಅಲ್ಪ ಕಾಲದ ಅಸೌಖ್ಯದಿಂದಾಗಿ 27.03.2024 ರಂದು ಮಧ್ಯಾಹ್ನ ನಗರದ ಸ್ವಗ್ರಹದಲ್ಲಿ ನಿಧನ ಹೊಂದಿದರು. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಇವರು ಕಲ್ಕೂರ ಜಾಹಿರಾತು ಸಂಸ್ಥೆಯಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದರು .ದಶಕಗಳ ಕಾಲದ ಹಿಂದೆ ಪ್ರಾಥಮಿಕ ನವೋದಯ ಕಲಾವೃoದದಲ್ಲಿ ಮಸಣಕ್ಕೆ, ತರಂಗ ತರಂಗ ಅಂತರಂಗ, ಹೆಗಲಿಗೆ

ಮಂಗಳೂರು : ಬೈಕಂಪಾಡಿ ಸೀ ಫುಡ್ ಫ್ಯಾಕ್ಟರಿ ಬೆಂಕಿಗಾಹುತಿ

ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕೋಳಿ, ಮೀನಿನ ಆಹಾರ ತಯಾರಿಕಾ ಘಟಕವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಶಿಹಾರ್ ಎಂಟರ್ ಪ್ರೈಸಸ್ ಎಂಬ ಈ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಫ್ಯಾಕ್ಟರಿಯನ್ನು ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಎಂಆರ್ ಪಿಎಲ್, ಎನ್ ಎಂಪಿಟಿನಿಂದ ಸುಮಾರು 8 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ನಿರಂತರ ಮೂರೂವರೆ ಗಂಟೆಗಳ

ಮಾ.30ರಂದು ಕರಿಯರ್ ಎಕ್ಸ್‌ಪ್ಲೋರೇಷನ್ ಕಾರ್ಯಾಗಾರ

ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಡಿಸೈನ್ ವಿಭಾಗದ ವತಿಯಿಂದ ಕರಿಯರ್ ಎಕ್ಸ್‌ಪ್ಲೋರೇಷನ್ ಮಾರ್ಚ್ 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅರುಣ್ ಎ ಭಾಗವತ್ ತಿಳಿಸಿದ್ದಾರೆ.ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ದ್ವಿತೀಯ ಪಿಯುಸಿ ಆದ ನಂತರ ಮುಂದೇನು ಎಂಬ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಯೆನೆಪೋಯ ಸಂಸ್ಥೆ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗಾಗಿ

ಮೂಡುಬಿದಿರೆ: ಹಿರೇ ಅಮ್ಮನವರ ಬಸದಿಯ ಪ್ರತಿಷ್ಠಾ ಪುರೋಹಿತ ಎಂ. ಧರ್ಮರಾಜ ಇಂದ್ರ ನಿಧನ

ಮೂಡುಬಿದಿರೆ: ಇಲ್ಲಿನ ಹಿರೇ ಅಮ್ಮನವರ ಬಸದಿಯ ಪ್ರತಿಷ್ಠಾ ಪುರೋಹಿತ ಎಂ. ಧರ್ಮರಾಜ ಇಂದ್ರ (94) ಪೇಪರ್ ಮಿಲ್ ಬಳಿ ತಮ್ಮ ನಿವಾಸದಲ್ಲಿ ಬುಧವಾರ ನಿಧನ ಹೊಂದಿದರು.ರಾಷ್ಟ್ರಭಾಷಾ ವಿಶಾರದರಾಗಿದ್ದ ಅವರು ಐದು ದಶಕಗಳಿಂದ ಬಸದಿಯ ಪುರೋಹಿತರಾಗಿ, ಬಸದಿಯಲ್ಲಿ ನಿಂತು ಹೋಗಿದ್ದ ರಥೋತ್ಸವವನ್ನುಮತ್ತೆ ಆರಂಭಿಸಿದ್ದರು. ನವರಾತ್ರಿ ಪೂಜೆ, ಲಕ್ಷಕುಂಕುಮಾರ್ಚನ ಸಪ್ತಾಹ ಸಹಿತ ವಿವಿಧ ಜೈನ ಧಾರ್ಮಿಕ ಆರಾಧನೆಗಳಲ್ಲಿ ಪುರೋಹಿತರಾಗಿ ಪಾಲ್ಗೊಂಡಿದ್ದರು.ಜೈನ ಧಾರ್ಮಿಕ ಆರಾಧನಾ

ಉಡುಪಿ: ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ 8.81 ಲಕ್ಷ ರೂ. ವಶಕ್ಕೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಅಕ್ರಮಗಳನ್ನು ತಡೆಯಲು ಕಟ್ಟೆಚ್ಚರ ವಹಿಸಲಾಗಿದ್ದು, ಕಳೆದ ಒಂದು ವಾರದಲ್ಲಿ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಒಟ್ಟು 8.81ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 3.50ಲಕ್ಷ ರೂ., ಕಾಪು ವಿಧಾನಸಭಾ ಕ್ಷೇಕತ್ರದ ಉದ್ಯಾವರ ಚೆಕ್‌ಪೋಸ್ಟ್‌ನಲ್ಲಿ 4.51ಲಕ್ಷ ರೂ. ಹಾಗೂ ಮಾ.23ರಂದು ಉಡುಪಿ

ಮಂಜೇಶ್ವರ: ಎಟಿಎಂಗೆ ಹಣ ತುಂಬಿಸಲು ಬಂದ ವಾಹನದಿಂದ ದರೋಡೆ

ಮಂಜೇಶ್ವರ : ಎಟಿಎಂಗೆ ಹಣ ತುಂಬಿಸಲು ಬಂದ ವಾಹನದ ಗಾಜು ಪುಡಿಗೈದು ೫೦ಲಕ್ಷ ರೂ. ದರೋಡೆಗೈದು ತಂಡ ಪರಾರಿಯಾದ ಘಟನೆ ಉಪ್ಪಳದಲ್ಲಿ ನಡೆದಿದೆ. ವಾಹನದ ಗಾಜು ಒಡೆದು ಹಣವಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ತಂಡ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಉಪ್ಪಳದಲ್ಲಿ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಹಣ ತುಂಬುತ್ತಿದ್ದಾಗ ಖಾಸಗಿ ಕಂಪನಿಯ ವಾಹನದಲ್ಲಿ ಕಳ್ಳತನ ನಡೆದಿದೆ. ಸ್ಥಳಕ್ಕಾಗಮಿಸಿದ ಉಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ