Home Archive by category Fresh News (Page 23)

ಕಾರ್ಕಳ: ಹಲಸು ಸಂಸ್ಕರಣಾ ಘಟಕದ ಉದ್ಘಾಟನೆ

ನಿಟ್ಟೆ ಸುಫಲ ರೈತ ಉತ್ಪಾದಕ ಮತ್ತು ಹಲಸು ಸಂಸ್ಕರಣಾ ಘಟಕದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಎಸ್‌ಎಂಇಯ ಡೈರೆಕ್ಟರ್ ಡಾ. ಗ್ಲೋರಿ ಸ್ವರೂಪ ಉದ್ಘಾಟಿಸಿ ಮಾತನಾಡಿ, ಸುಫಲ ರೈತ ಉತ್ಪಾದಕ ಘಟಕವು ಸುಮಾರು ಆರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಮೂರು ವರ್ಷಗಳ ಕಾಲ ಹಲಸಿನ ಹಣ್ಣಿನ ಬಗ್ಗೆ ಅಧ್ಯಯನ ಮಾಡಿ ಅದರಿಂದ

ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿಯಾದ ಕೋಟ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿಯಾಗಿ ಬೆಂಬಲ ಕೋರಿದರು.ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ಕೋಟ ಅವರು, ‘ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಅತ್ಯಂತ ಸರಳ ವ್ಯಕ್ತಿತ್ವದ ಮೇರು ನಾಯಕರಾದ ಗೌರವಾನ್ವಿತ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿಯಾಗಿ ಬೆಂಬಲ ಕೋರಿದೆ. ಈ

ಸತ್ತಾಗಲಾದರೂ ತೊಗಲು ದಾನ ಮಾಡಿ, ಬೇರೆಯವರ ತೊಗಲಾಗಿ ಆನಂದ ಪಡೆಯಿರಿ

ಫಾದರ್ ಮುಲ್ಲರ್‍ನಲ್ಲಿ ಈಗ ಚರ್ಮದ ಬ್ಯಾಂಕು ಆರಂಭವಾಗಿದೆ. ನೆತ್ತರ ಬ್ಯಾಂಕು ಮತ್ತು ಕಣ್ಣಿನ ಬ್ಯಾಂಕಿನಂತೆಯೇ ಇದೂ ಕೂಡ. ಸತ್ತ ವ್ಯಕ್ತಿಯ ಚರ್ಮವನ್ನು ಐದಾರು ಗಂಟೆಯ ಒಳಗೆ ತೆಗೆದು ಆರು ತಿಂಗಳ ಕಾಲ ಕಾಪಿಡುವುದು ಸಾಧ್ಯ. ಸುಟ್ಟ ಗಾಯಕ್ಕೆ ಒಳಗಾಗಿ ಚರ್ಮ ಕಳೆದುಕೊಂಡವರಿಗೆ ಈ ಚರ್ಮವನ್ನು ಕಸಿ ಮಾಡಬಹುದು. ಅದೇ ವ್ಯಕ್ತಿಯ ಚರ್ಮವನ್ನು ಒಂದು ಕಡೆಯಿಂದ ತೆಗೆದು ಇನ್ನೊಂದು ಕಡೆ ಹೊದಿಸುವುದು ಕೂಡ ಸಾಧ್ಯ. ಆದರೆ ಆಸಿಡ್ ದಾಳಿಗೆ ಈಡಾದ ಚರ್ಮಕ್ಕೆ ಇದು ಪರಿಹಾರವಾಗದು.

ಮೂಡುಬಿದಿರೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಯುವವಾಹಿನಿ (ರಿ) ಮೂಡುಬಿದಿರೆ ಘಟಕ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನೇತ್ರಾ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ಅಂದತ್ವ ವಿಭಾಗ) ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ನಡೆಯಿತು. ಯುವ ವಾಹಿನಿ (ರಿ)

ಮಂಗಳೂರು: ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಬ್ರಿಜೇಶ್ ಚೌಟ ಭೇಟಿ

ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಮಂಗಳೂರಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನ್ಯಾಯಾಲಯ ನಿಯೋಜಿತ ರಿಸೀವರ್ ಕೆ ಉಮೇಶ್ ಆಚಾರ್ಯ ಪಾಂಡೇಶ್ವರ, ಮನಪಾ ಮಣ್ಣಗುಡ್ಡೆ ಕಾರ್ಪೊರೇಟರ್ ಶ್ರೀಮತಿ ಬಿ ಸಂಧ್ಯಾ ಮೋಹನ್ ಬಿಜೆಪಿ ಯ ಪ್ರಮುಖರಾದ ಬಿ ಮೋಹನ್ ಮುಂತಾದವರು, ಶ್ರೀ ಕ್ಷೇತ್ರದ ಮಾಜಿ ಮಾಜಿ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಮಾಜಿ ಮೂರನೇ ಮೊಕ್ತೇಸರ ಎ ಲೋಕೇಶ್

ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆ-ಮಲ್ಲೈ ಮುಗಿಲನ್

ಮಂಗಳೂರು: ಮಣ್ಣು ,ನೀರು,ಗಾಳಿ ಸೇರಿದಂತೆ ನೈಸರ್ಗಿಕ ಸಂಪತ್ತಿನ ಮಿತ ಬಳಕೆ ಸಂರಕ್ಷಣೆ ನಮ್ಮೆಲ್ಲರ ಸಾಮೂ ಹಿಕ ಹೊಣೆ ಗಾರಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಅವರು ಜಿಲ್ಲಾಧಿಕಾರಿ ನಿವಾಸದಲ್ಲಿ ಜಿಲ್ಲಾಡಳಿತ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಯುವ ರೆಡ್ ಕ್ರಾಸ್ ಘಟಕ, ಬ್ಯಾಂಕ್ ಆಫ್ ಬರೋಡಾದ ಸಹಯೋಗದೊಂದಿಗೆ ಹಮ್ಮಿಕೊಂಡ ಜೀವ ಜಲ ಉಳಿಸಿ ಅಭಿಯಾನದ ಜಲ ಸಂರಕ್ಷಣೆಯ ಭಿತ್ತಿ ಪತ್ರ ಬಿಡುಗಡೆ

ಸಿಎಎ ಅಸಾಂವಿಧಾನಿಕ -ಅಭಿನವ್ ಚಂದ್ರಚೂಡ್

ಭಾರತೀಯ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿರುವ ಡಿ. ವೈ. ಚಂದ್ರಚೂಡ್ ಅವರ ಮಗ ವಕೀಲರಾದ ಅಭಿನವ್ ಚಂದ್ರಚೂಡ್ ಅವರು ಕೊಲ್ಕತ್ತಾದಲ್ಲಿ ಮಾತನಾಡುತ್ತ ಸಿಎಎ ಅಸಾಂವಿಧಾನಿಕ ಎಂದು ಹೇಳಿದರು. ವಕೀಲರಾದ ಅಭಿನವ್ ಅವರು ಸಂವಿಧಾನದ 14 ಮತ್ತು ಕೆಲವು ವಿಧಿಗಳನ್ನು ಉದಾಹರಿಸಿ ಸಿಎಎ ಸಂವಿಧಾನದ ಆಶಯಗಳಿಗೆ, ಸರ್ವರಿಗೆ ಸಮ ಬಾಳು ತತ್ವಕ್ಕೆ ವಿರುದ್ಧವಾದುದು ಎಂದು ಹೇಳಿದ್ದಾರೆ. ಜ್ಯೂಗಳ ವಲಸೆ, ಪಾರಸಿಗಳ ವಲಸೆ ಭಾರತದಲ್ಲಿ ಅಲ್ಪ ಸ್ವಲ್ಪ ಇರುವ ಅವರ ಇರುವಿಕೆಗಳ

ಉಳ್ಳಾಲ: ಅಸೈಗೋಳಿಯಲ್ಲಿ ಬಸ್ ನಿಲ್ದಾಣ ಲೋಕಾರ್ಪಣೆ

ಉಳ್ಳಾಲ: ಗ್ರಾಮೀಣ ಭಾಗದಲ್ಲಿ ವಿಶೇಷ ಸಾಮಾಜಿಕ ಕಳಕಳಿಯೊಂದಿಗೆ ಬಾಳಿ ಇತರರಿಗೆ ಮಾದರಿಯಾದವರು. ಅವರ ಹೆಸರಿನಲ್ಲಿ ಮಕ್ಕಳು ಸಮಾಜಕ್ಕೆ ಬಸ್ಸು ನಿಲ್ದಾಣವನ್ನು ಕೊಟ್ಟಿರುವುದು ಹೆತ್ತವರಿಗೆ ಕೊಡುವ ಬಹುದೊಡ್ಡ ಗೌರವವಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಮಂಜನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೈಗೋಳಿಯಲ್ಲಿ ದಿ| ಪಟ್ಟೋರಿ ಮೊಯ್ದೀನ್ ಕುಂಞಿ ಸ್ಮಾರಕ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಅಗಲಿದ ಪಟ್ಟೋರಿ

ಇವಿಎಂ ಭದ್ರತಾ ಕೇಂದ್ರಗಳ ಪೂರ್ವಸಿದ್ಧತೆ ಪರಿಶೀಲನೆ

ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲನೆ ಮಾಡಿದರು. ಸುರತ್ಕಲ್ ಎನ್.ಐ.ಟಿ.ಕೆ. ಇಂಜಿನಿಯರಿಂಗ್ ಕಾಲೇಜಿಗೆ ತೆರಳಿ ದಕ್ಷಿಣ ಕನ್ನಡ ಜಿಲ್ಲೆಯ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಮತ್ತಿತರರು

ಕೊಕ್ಕಡ: ಕಾಡಾನೆ ದಾಳಿ ಅಪಾರ ಕೃಷಿಗೆ ಹಾನಿ

ಕೊಕ್ಕಡ: ಇಲ್ಲಿಯ ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಒಂಟಿಸಲಗವು ಮಾ.13ರಂದು ರಾತ್ರಿ ದಾಳಿ ನಡೆಸಿದ್ದು ಕೃಷಿಗೆ ಹಾನಿ ಮಾಡಿದೆ. ಕೆಲವು ದಿನಗಳಿಂದ ಕಾಡಾನೆಯು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದು ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿಯನ್ನು ನೀಡುತ್ತಿದ್ದು, ನಿನ್ನೆ ರಾತ್ರಿ ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಕಾಡಾನೆ ಸಂಚಾರ ಮಾಡಿದ್ದು ತೋಟಕ್ಕೆ ನುಗ್ಗಿ ಅಲ್ಲಿನ ಬಾಳೆ