Home Archive by category Fresh News (Page 31)

ಉಳ್ಳಾಲ: ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿಗೆ ಹುಟ್ಟೂರ ಸನ್ಮಾನ

ದೇರಳಕಟ್ಟೆ : ಹುಟ್ಟೂರ ಅಭಿನಂದನಾ ಸಮಿತಿ ಉಳ್ಳಾಲ ತಾಲೂಕು ಇದರ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ

ವಿಶ್ವ ಶ್ರವಣ ದಿನ ಮಾರ್ಚ್-3

ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಮಾರ್ಚ್ 3 ರಂದು ಕಿವಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಶ್ರವಣ ದೋಷಗಳ ಬಗ್ಗೆ ಅರಿವು ಮೂಡಿಸಲು ವಿಶ್ವ ಶ್ರವಣ ದಿನ ಎಂದು ವಿಶ್ವದಾದ್ಯಂತ ಆಚರಿಸುತ್ತಾರೆ. 2023ನೇ ಇಸವಿಯ ಘೋಷ ವಾಕ್ಯ “ಕಿವಿ ಮತ್ತು ಶ್ರವಣದ ಬಗ್ಗೆ ಕಾಳಜಿ ಹಾಗೂ ಆರೈಕೆ ನಿಜವಾಗಿಸೋಣ” ಎಂಬುದಾಗಿದೆ. ಪಂಚೇಂದ್ರಿಯಗಳಾದ ಕಣ್ಣು, ಮೂಗು, ಕಿವಿ, ನಾಲಗೆ ಹಾಗೂ ಚರ್ಮಗಳಲ್ಲಿ ಎಲ್ಲದಕ್ಕೂ ಸಮಾನ ಪ್ರಾಮುಖ್ಯತೆ ಇದೆ. ಆದರೆ ಇವುಗಳಲ್ಲಿ ಕಿವಿ ಹೊರತುಪಡಿಸಿ

ಏನಿದು ಪೊಲಿಯೋ ರೋಗ.

ಪೊಲಿಯೋ ಎನ್ನುವ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪ್ರತಿ ವರ್ಷ ಅಕ್ಟೋಬರ್ -24 ರಂದು “ವಿಶ್ವ ಪೊಲಿಯೋ ದಿನ” ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪೊಲಿಯೋ ರೋಗಕ್ಕೆ ಮೊತ್ತ ಮೊದಲ ಬಾರಿ ಲಸಿಕೆ ಕಂಡು ಹಿಡಿದ ಸಂಶೋಧಕ ಶ್ರೀ ಜೋನಾಡ್ ಸಾಲ್ ಅವರ ಹುಟ್ಟಿದ ದಿನವನ್ನು ಅವರ ನೆನಪಿಗಾಗಿ ಪೊಲಿಯೋ ದಿನ ಎಂದು ಆಚರಿಸಲಾಗುತ್ತಿದೆ. 1955 ರಲ್ಲಿ

ಸಾಹಿತಿ ರಾಧಾಕೃಷ್ಣ ಸೇರಿ ಮೂವರಿಗೆ ಗಡಿನಾಡ ಚೇತನ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ಗೆ ಕೇರಳದ ಕಾಸರಗೋಡಿನ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಸೇರಿ ಮೂವರು ಆಯ್ಕೆಯಾಗಿದ್ದಾರೆ. ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದೇವರು ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ರಾಧಾಕೃಷ್ಣ, ‘ಜಯದೇವಿತಾಯಿ ಲಿಗಾಡೆ’ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ಬೀದರ್‌ನ ಕನ್ನಡ ಪರ ಹೋರಾಟಗಾರ ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ‘ಕಯ್ಯಾರ ಕಿಞ್ಞಣ್ಣ ರೈ’ ಅವರ

ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಪ್ರವೇಶಕ್ಕೆ 15,986 ವಿದ್ಯಾರ್ಥಿಗಳು ಹಾಜರು

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ಕನ್ನಡ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ಭಾನುವಾರದಂದು ಪ್ರವೇಶ ಪರೀಕ್ಷೆ ನಡೆಸಿದ್ದು ನಾಡಿನ ಮೂಲೆ ಮೂಲೆಯಿಂದ ವಿದ್ಯಾಗಿರಿಗೆ 15,986 ಹೆಚ್ಚಿನ ವಿದ್ಯಾರ್ಥಿಗಳು ಅವರ ಪೋಷಕರು, ಜತೆಗೂಡಿ ಆಗಮಿಸಿ ವಿದ್ಯಾಗಿರಿ ಮತ್ತು ಪುತ್ತಿಗೆಯಲ್ಲಿ ಪರೀಕ್ಷೆಯನ್ನು ಬರೆದಿದ್ದಾರೆ. ಪ್ರತೀ ವರ್ಷದಂತೆ ಈ ಬಾರಿಯೂ ತನ್ನ ಕನಸಿನ ನಾಡಿನ ಏಕೈಕ ಶೂನ್ಯ ಶುಲ್ಕದ ಕನ್ನಡ ಮಾಧ್ಯಮ ಶಾಲೆಗೆ ಉಚಿತ ದಾಖಲಾತಿ

ಉಡುಪಿ: ಮಾ.5ಕ್ಕೆ ಪರಿಯಾಳ ಸಮಾಜ ಸಮುದಾಯ ಭವನ ಉದ್ಘಾಟನೆ

ಉಡುಪಿ: ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ವತಿಯಿಂದ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಉಚ್ಚಿಲದಲ್ಲಿ ನಿರ್ಮಿಸಲಾದ ಪರಿಯಾಳ ಸಮಾಜ ಸಮುದಾಯ ಭವನದ ಉದ್ಘಾಟನೆಯು ಮಾ.5ರಂದು ಉಚ್ಚಿಲದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಯು.ಶಂಕರ ಸಾಲ್ಯಾನ್ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 15 ಲಕ್ಷರೂ. ನೆರವು ದೊರಕಿದ್ದು, ಉಳಿದಂತೆ ದಾನಿಗಳಿಂದ ಸಂಗ್ರಹಿಸಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡವನ್ನು

ಉಳ್ಳಾಲ: ಕೊಂಡಾಣ ದೈವಸ್ಥಾನದ ಭಂಡಾರ ಮನೆ ಧ್ವಂಸ ಪ್ರಕರಣ: ಮೂವರ ಬಂಧನ

ಕೊಂಡಾಣದಲ್ಲಿ ಕಟ್ಟುತ್ತಿದ್ದ ದೈವದ ಭಂಡಾರ ಮನೆಯನ್ನು ಜೆಸಿಬಿ ಬಳಸಿ ಉರುಳಿಸಿದ ಸಂಬಂಧ ಮುತ್ತಣ್ಣ ಶೆಟ್ಟಿ, ಧೀರಜ್, ಶಿವರಾಜ್ ಎಂಬ ಮೂವರನ್ನು ಬಂಧಿಸಿರುವುದಾಗಿ ಪೋಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.ಈ ಭಂಡಾರ ಮನೆಯನ್ನು ಮತ್ತು ದೈವಾಲಯವನ್ನು ಎಂಡೋಮೆಂಟಿಗೆ ಒಪ್ಪಿಸಿದ್ದರ ಸಂಬಂಧ ಮೂಲ ಕುಟುಂಬದವರ ನಡುವೆ ಇದ್ದ ಭಿನ್ನಾಭಿಪ್ರಾಯಗಳೇ ಈ ಭಂಡಾರ ಮನೆ ಉರುಳಿಸಿದ್ದಕ್ಕೆ ಕಾರಣ ಎಂದು ಆರೋಪಿಗಳು ತಿಳಿಸಿದ್ದಾರೆ.

ಕಡಬ: ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ

ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರೀ ಪ್ರಥಮ ದರ್ಜೆ ಕಾಲೇಜು ಬಳಿ ಮಾಸ್ಕ್ ಮತ್ತು ಹ್ಯಾಟ್ ದರಿಸಿದ್ದ ದಾಳಿಕೋರನೊಬ್ಬನು ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ನಿಂತಿದ್ದಾಗ ಆಮ್ಲ ದಾಳಿ ಆಗಿದೆ. ಮುಖಕ್ಕೆ ಗಂಭಿರ ಗಾಯಗಳಾಗಿರುವುದಾಗಿ ಹೇಳಲಾಗಿದೆ. ಸಂತ್ರಸ್ತ ಯುವತಿಯರನ್ನು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆ

ಬ್ರಹ್ಮಾವರದಲ್ಲಿ ಎಂ.ಸಿ.ಸಿ ಬ್ಯಾಂಕ್‌ ನ 17ನೇ ಶಾಖೆ ಉದ್ಘಾಟನೆ

ರಾಜ್ಯದ ಅಗ್ರಗಣ್ಯ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಂ.ಸಿ.ಸಿ ಬ್ಯಾಂಕಿನ 17ನೇ ಶಾಖೆಯು ಬ್ರಹ್ಮಾವರದ ವಾರಂಬಳ್ಳಿಯ ಶೇಷಗೋಪಿ ಪ್ಯಾರಡೈಸ್‌ನ ನೆಲಮಹಡಿ, ಆಕಾಶವಾಣಿ ವೃತ್ತದ ಬಳಿ, ಉದ್ಘಾಟನೆಗೊಂಡಿತು. ಹೊಸ ಶಾಖೆಯ ಉದ್ಘಾಟನೆಯನ್ನು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣರವರು ನೆರವೇರಿಸಿದರು. ಹೋಲಿ ಫ್ಯಾಮಲಿ ಚರ್ಚ್, ಬ್ರಹ್ಮಾವರ ಇದರ ಧರ್ಮಗುರುಗಳಾದ ವಂದನೀಯ ಜಾನ್ ಫೆರ್ನಾಂಡಿಸ್‌ರವರು ಆಶೀರ್ವಚನವನ್ನು ನೆರವೇರಿಸಿದರು. ಹೊಸ ಶಾಖೆಯ ಭದ್ರತಾ ಕೊಠಡಿಯನ್ನು

ಉಳ್ಳಾಲ: ಕೊಂಡಾಣ ದೈವಸ್ಥಾನದ ಭಂಡಾರ ಮನೆ ಧ್ವಂಸ: ಸ್ಥಳಕ್ಕೆ ತಹಶೀಲ್ದಾರ್, ಮುಖ್ಯಾಧಿಕಾರಿ, ಎಸಿಪಿ ಭೇಟಿ ಪರಿಶೀಲನೆ

ಉಳ್ಳಾಲ ತಾಲೂಕಿನ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸೇರಿದ ನಿರ್ಮಾಣ ಹಂತದ ಭಂಡಾರ ಮನೆಯನ್ನು ಕಿಡಿಗೇಡಿಗಳು ಜೆಸಿಬಿ ಮೂಲಕ ಧ್ವಂಸಗೊಳಿಸಿದ ಘಟನೆ ನಡೆದಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸ್ಥಳಕ್ಕೆ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್, ತಹಶೀಲ್ದಾರ್ ಪುಟ್ಟರಾಜು, ಎಸಿಪಿ ಧನ್ಯಾ ನಾಯಕ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆನಂದ್ ಅವರು ಠಾಣೆಗೆ ದೂರು