Home Archive by category Fresh News (Page 57)

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ, ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ.. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಉಡುಪಿಯಲ್ಲಿ ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಸಚಿವರು.ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಬಿಜೆಪಿಗೆ ಅಭಿವೃದ್ಧಿ

ನೆಲ್ಯಾಡಿ:ಶ್ರೀರಾಮ ವಿದ್ಯಾಲಯ ಸೂರ್ಯ ನಗರ ಶ್ರೀರಾಮೋತ್ಸವ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರದಲ್ಲಿ ಜ.22ರಂದು ಅಯೋಧ್ಯೆಯಲ್ಲಿ ನಡೆದ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಮಹೋತ್ಸವದ ಪ್ರಯುಕ್ತ ಪ್ರಾರ್ಥನೆ, ಭಜನೆ, ಶ್ರೀರಾಮ ರಕ್ಷಾಸ್ತೋತ್ರ, ಹನುಮಾನ್ ಚಾಲೀಸ್, ರಾಮಾಯಣ ಆಧಾರಿತ ರಸಪ್ರಶ್ನೆಗಳು, 108 ಬಾರಿ ರಾಮ ತಾರಕ ಮಂತ್ರ, ಶ್ರೀ ರಾಮೋತ್ಸವವು ನಡೆಯಿತು. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಜೊತೆಗೆ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ಕರ ಸೇವಕರಾದ ಕೃಷ್ಣಪ್ಪ ಕಟ್ಟೆಮಜಲು,

ಅಖಿಲ ಭಾರತ ವಕೀಲೆಯರ ರಾಜ್ಯ ಸಮಾವೇಶ

ಭ್ರಷ್ಟಾಚಾರದ ಕಾರಣಕ್ಕೆ ಭಾರತದ ಶಾಸಕಾಂಗ, ಕಾರ್ಯಾಂಗಗಳು ಜನರ ವಿಶ್ವಾಸ ಕಳೆದುಕೊಂಡಿದ್ದರೂ ನ್ಯಾಯಾಂಗವು ಜನರ ನಂಬಿಕೆ ಉಳಿಸಿಕೊಂಡಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ಜಿ. ಉಮಾ ಹೇಳಿದರು. ಅವರು ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಹಾಲ್‍ನಲ್ಲಿ ನಡೆದ ಮಹಿಳಾ ವಕೀಲರ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗವು ಬಲವಾಗಿದ್ದರೆ ಪ್ರಜಾಪ್ರಭುತ್ವವೂ ಗಟ್ಟಿ. ಭಾರತದ ನ್ಯಾಯಾಂಗ ಅಚಲವಾಗಿದೆ. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ

ಲೋಕ ಸಭಾ ಚುನಾವಣೆಗೆ ಉಡುಪಿ ಜಿಲ್ಲೆಯ ಮತದಾರರ ಪಟ್ಟಿ ಪ್ರಕಟ

ಲೋಕ ಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗದ ಕೋರಿಕೆಯಂತೆ ಉಡುಪಿ ಜಿಲ್ಲೆಯ ಸದ್ಯದ ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪ್ರಕಟಿಸಿದರು. ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರಗಳು ಸೇರಿ 10,45,296 ಅರ್ಹ ಮತದಾರರು ಇದ್ದಾರೆ. ಇವರಲ್ಲಿ 5,40,833 ಮಹಿಳೆಯರು, 5,04,448 ಗಂಡಸರು ಹಾಗೂ 15 ಮಂದಿ ತೃತೀಯ ಲಿಂಗಿಗಳಾಗಿದ್ದಾರೆ. ಹೊಸದಾಗಿ ಮತದಾರ ಪಟ್ಟಿಗೆ ಸೇರಿದ ಯುವ ಸಮುದಾಯದ ಸಂಖ್ಯೆ 10,245 ಆಗಿದೆ. ಯಥಾಪ್ರಕಾರ ಮತದಾರರ

ಬಂಟ್ವಾಳ : ದರೋಡೆ ಪ್ರಕರಣವನ್ನು ಭೇಧಿಸಿದ ದ.ಕ.ಜಿಲ್ಲಾ ಪೊಲೀಸರು

ದ.ಕ.ಜಿಲ್ಲೆಯ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ದಿನಾಂಕ; 11-01-2024 ರಂದು ಮುಂಜಾನೆ ನಡೆದ ಚಿನ್ನಾಭರಣಗಳನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:03/2024 ಕಲಂ: 395, 397, 411 ಭಾ.ದಂ.ಸಂ. ರಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿ, ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡವು, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26),

ಶ್ರೀ ಕೃಷ್ಣ ಮಠದಲ್ಲಿ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ

ಉಡುಪಿಯಲ್ಲಿ ರಾಮ ಪ್ರತಿಷ್ಠಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶ್ರೀ ಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ ನಡೆಯಿತು. ಬ್ರಹ್ಮರಥ, ಚಿನ್ನದ ರಥ ಮಹಾಪೂಜಾ ರಥ, ಬೆಳ್ಳಿರಥ ಹಾಗೂ ನವರತ್ನ ರಥವನ್ನು ರಥ ಬೀದಿಗೆ ಪ್ರದಕ್ಷಿಣೆ ತರಲಾಯಿತು ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ರಾತ್ರಿ ನಡೆದ ಉತ್ಸವದಲ್ಲಿ ರಾಮಾಯಣ ಸಹಿತ ಕೃಷ್ಣದೇವರ ಉತ್ಸವ ನಡೆಸಲಾಯಿತು. ಮಹೋತ್ಸವಕ್ಕೂ ಮುನ್ನ ಮಧ್ವ ಸರೋವರದಲ್ಲಿ ತೆಪೋತ್ಸವ ನಡೆಯಿತು. ಈ

ಉಳ್ಳಾಲ : ಶೇಂದಿ ತೆಗೆಯುವ ಸಂದರ್ಭ ತೆಂಗಿನಮರದಿಂದ ಬಿದ್ದು ಸಾವು

ಉಳ್ಳಾಲ : ಕೊಣಾಜೆ ಮುಯರ್ತೆದಾರರ ಸಂಘದ ಮಾಜಿ ನಿರ್ದೇಶಕರೋರ್ವರು ಶೇಂದಿ ತೆಗೆಯುವ ಸಂದರ್ಭ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನೇತ್ರಾವತಿ ನದಿ ಸಮೀಪದ ಸೋಮನಾಥ ಉಳಿಯ ಎಂಬಲ್ಲಿನ ಮನೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.ಮೂಲತ: ಧರ್ಮಸ್ಥಳ ಪುದುವೆಟ್ಟು ನಿವಾಸಿ ಸದ್ಯ ಸಂತೋಷ ನಗರ ಕುಟುಂಬ ಸಮೇತರಾಗಿ ನೆಲೆಸಿರುವ ವಿಶ್ವಾಂಬರನ್ (58) ಮೃತಪಟ್ಟವರು. ಎಂದಿನಂತೆ ಇಂದು ಬೆಳಿಗ್ಗೆ ತಾನು ಗುತ್ತಿಗೆ ವಹಿಸಿಕೊಂಡ ಕುತ್ತಾರು ಸೋಮನಾಥ ಉಳಿಯ ಸಮೀಪದ

ಅಯೋಧ್ಯೆ ಹಾಗೂ ಈಜಿಪ್ತ್ ಮತ್ತು ತಾಯ್‍ಲ್ಯಾಂಡ್ ರಾಮ

ಅಯೋಧ್ಯೆಯಲ್ಲಿ ರಾಮ ಮಂದಿರ ತೆರೆದುಕೊಂಡಿದೆ. ಕೆಲರೆಂಬಂತೆ ಅದು ಅರೆಬರೆ. ಪ್ರಧಾನಿ ಮೋದಿಯವರು ರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಗರ್ಭಗುಡಿಯ ವ್ಯಕ್ತಿ. ರಾಮ ಚಾರಿತ್ರಿಕವೇ, ಪುರಾಣವೇ? ಪುರಾಣ ಎಂಬುದು ಅಭಿಮತ. ಆದರೆ ಸಂಪೂರ್ಣ ದಾಖಲೆಯ ಚಾರಿತ್ರಿಕ ರಾಮರು ಭಾರತದಲ್ಲಿ ಅಲ್ಲ, ಈಜಿಪ್ತಿನಲ್ಲಿ ಇದ್ದರು; ತಾಯ್‍ಲ್ಯಾಂಡ್‍ನಲ್ಲಿ ಇರುವರು. ಮೂರೂವರೆ ಸಾವಿರ ವರುಷಗಳ ಹಿಂದೆ ಈಜಿಪ್ತಿನಲ್ಲಿ ರಾಮಸೆಸ್ ರಾಜರು ಇದ್ದರು. ಎರಡನೆಯ ರಾಮಸೆಸ್ ತುಂಬ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೀಪೋತ್ಸವ, ಕುಣಿತ ಭಜನೆ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆಚರಿಸಲಿರುವ ದೀಪೋತ್ಸವ, ಕುಣಿತ ಭಜನೆ, ಪ್ರಯುಕ್ತ ಸೋಮವಾರ ಸಂಜೆ ಆರು ಗಂಟೆಗೆ ದೇವರ ಎದುರು ಪ್ರಾರ್ಥಿಸಿ ಶಂಖನಾದದಿಂದ ಆರಂಭವಾಗಲಿದೆ. ಈ ಪ್ರಯುಕ್ತ ಸಾದ್ಯವಾದಷ್ಟು ಮಂದಿ ಶಂಖದೊಂದಿಗೆ ಸಂಜೆ ಆರು ಗಂಟೆಗೆ ಉಪಸ್ಥಿತರಿದ್ದು ತಾವೂ ಶಂಖನಾದ ಸೇವೆ ನಡೆಸಿ ರಾಮನ ಸೇವೆಯನಲ್ಲಿ ಪಾಲ್ಗೊಳ್ಳಬೇಕಾಗಿ ಆಡಳಿಮಂಡಳಿಯವರು ವಿನಂತಿಕೊಂಡಿದ್ದಾರೆ.

ಸುಳ್ಯ: ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗೊನೆ ಮುಹೂರ್ತ

ಸುಳ್ಯ ತಾಲೂಕು ಪೆರುವಾಜೆಯ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.30ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗೊನೆ ಮುಹೂರ್ತ ನೆರವೇರಿತು. ಶ್ರೀ ದೇವರ ವಾರ್ಷಿಕ ಉತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ದಿನಾಂಕ ಜ.30ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ ಮತ್ತು ಶುದ್ದಿ ಕಲಶ ಬೆಳಗ್ಗೆ 10 ಗಂಟೆಯಿಂದ