Header Ads
Breaking News

ಜನೌಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಎಲ್ಲಾ ಮೆಡಿಸಿನ್‌ಗಳು ಲಭ್ಯವಾಗುತ್ತಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು-ಡಾ. ಜ್ಯೋತಿಲಕ್ಷ್ಮೀ

ವಿಟ್ಲ : ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ವಿಟ್ಲ ಇದರ ಆಶ್ರಯದಲ್ಲಿ ಮತ್ತು ವಿಟ್ಲ ರೋಟರಿ ಕ್ಲಬ್ ಇದರ ಸಹಭಾಗಿತ್ವದಲ್ಲಿ ಮಿತ ಧರದಲ್ಲಿ ಬಡವರ ಆರೋಗ್ಯದ ಸಂರಕ್ಷಣೆಗಾಗಿ ಭಾರತಾದಾದ್ಯಂತ ಆರಂಭವಾದ ಪ್ರಧಾನಿ ನರೇಂದ್ರ ಮೋದಿ ಆಶಯದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಇದರ 3ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಜನೌಷಧಿ ದಿವಸ್ ಆರ‍್ನೆಸ್ ಮತ್ತು ಉಚಿತ ಸುವಿಧ ಪ್ಯಾಡ್ ವಿತರಣಾ ಕಾರ್ಯಕ್ರಮವು ವಿಟ್ಲ ಪ್ರೌಢ ಶಾಲೆಯಲ್ಲಿ ನಡೆಯಿತು.


ಪ್ರಧಾನಿಯವರ ಆಶಯದಂತೆ 3ವರ್ಷಗಳ ಹಿಂದೆ ಆರಂಭವಾದ ಜನೌಷಧಿ ಕೇಂದ್ರವು ಈಗ ಭಾರತದಾಧ್ಯಂತ ವಿಸ್ತರಣೆಯಾಗಿ, ಈ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಎಲ್ಲಾ ಮೆಡಿಸಿನ್‌ಗಳು ಲಭ್ಯವಾಗುತ್ತಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಡಾ. ಜ್ಯೋತಿಲಕ್ಷ್ಮೀ ಹೇಳಿದರು. ಬಹುತೇಕ ಜನರಿಗೆ ಈ ಜನೌಷಧಿ ಕೇಂದ್ರದ ಬಗ್ಗೆ ಮಾಹಿತಿ ಇಲ್ಲವಾಗಿದ್ದು ಸಾಮಾನ್ಯ ಮೆಡಿಕಲ್‌ಗಳಲ್ಲಿ ಸಿಗುವ ಔಷಧಿಗಳಿಗಿಂತ ಸುಮಾರು ಶೇಕಡಾ ೮೦ ಕಡಿಮೆ ದರದಲ್ಲಿ ಔಷಧಿಗಳು ಸಿಗುತ್ತಿವೆ. ಪಿರಿಯೆಡ್ ಆರಂಭವಾಗಿರುವ ಮಹಿಳೆಯರಿಗಾಗಿ ದುಬಾರಿಯಾಗಿರುವ ಸ್ಯಾನಿಟೈಸರ್ ನ್ಯಾಪ್ಕಿನ್‌ಗಳು ಅತೀ ಕಡಿಮೆ ದರ ಅಂದರೆ ಕೇವಲ ೧ ರೂಪಾಯಿಗೆ ಜನೌಷಧಿ ಕೇಂದ್ರದಲ್ಲಿ ಸಿಗುತ್ತಿದೆ ಎಂದು ತಿಳಿಸಿದ ಅವರು ಕಡಿಮೆ ದರದಲ್ಲಿ ಪ್ಯಾಡುಗಳು ಲಭ್ಯವಾದಾಗ ಕಡಿಮೆ ಅವಧಿಗೆ ಉಪಯೋಗಿಸಿಕೊಂಡು ಅಂದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಪ್ಯಾಡು ಬದಲಾಯಿಸಿಕೊಂಡು ಹೆಚ್ಚು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಪಡೆದುಕೊಳ್ಳಬಹುದು, ಸ್ತ್ರೀಯರ ಋತುಸ್ರಾವ ಪ್ರಕ್ರಿಯೆ ಮತ್ತು ಸ್ವಚ್ಛತೆ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿ ಇದರ ಬಗ್ಗೆ ಭಯ ನಾಚಿಕೆ ಪಡಬೇಕಾಗಿಲ್ಲ, ಇದು ಒಂದು ನೈಸರ್ಗಿಕ ಪ್ರಕ್ರಿಯೆ ಎಂಬ ವಿವರಣೆಯನ್ನು ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಟ್ಲ ಫ್ರೌಢ ಶಾಲೆಯ ಉಪಪ್ರಾಂಶುಪಾಲರಾದ ಕಿರಣ್ ಕುಮಾರ್ ಅವರು ಮಾತನಾಡಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಔಷಧಿ ಕೇಂದ್ರ ವಿಟ್ಲದಲ್ಲಿ ಇದ್ದು ಈ ಬಗ್ಗೆ ಪ್ರತಿಯೊಬ್ಬರು ಮಾಹಿತಿಗಳನ್ನು ಪಡೆದುಕೊಂಡು ಇದರ ಬಗ್ಗೆ ಮನೆಮಂದಿಯಲ್ಲಿ ಮಾಹಿತಿ ನೀಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ರೋಟರಿಯವರಿಂದ ಅತ್ಯುತ್ತಮವಾದ ಕಾರ್ಯ ನಡೆಯುತ್ತಿದೆ. ಪ್ಯಾನ್ಸಿ ಸ್ಟೋರ್ ವಿಟ್ಲದಲ್ಲಿ ಎಲ್ಲಿದೆಯೆಂದು ಬಗ್ಗೆ ನಿಮಗೆ ಗೊತ್ತಿರಬೇಕಾದರೆ ಕೈಗೆಟಕುವ ದರದಲ್ಲಿ ಲಭ್ಯವಿರುವ ಜನೌಷಧಿ ಕೇಂದ್ರದ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲೇ ಬೇಕು ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಟ್ಲ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಮಾತನಾಡಿ ಮಾಲಿನಿ ಡಿ. ಆಳ್ವ ಅವರ ಮಾಲಕತ್ವದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವು ವಿಟ್ಲದಲ್ಲಿ ಖಾಸಗೀ ಬಸ್ಸು ನಿಲ್ದಾಣದ ಬಳಿ ಇದೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಔಷಧಿ ಇಲ್ಲಿ ಲಭ್ಯವಿರುತ್ತದೆ. ನಾನೂ ಕೂಡಾ ಓರ್ವ ಹಾರ್ಟ್ ಪೇಶೆಂಟ್ ಆಗಿದ್ದು, ಸಾಮಾನ್ಯ ಮೆಡಿಕಲ್ ನಲ್ಲಿ 2500 ಸಿಗುವ ಔಷಧಿಗಳು ನನಗೆ ಕೇವಲ 420 ರೂ ಗಳಲ್ಲಿ ವಿಟ್ಲದ ಜನೌಷಧಿ ಕೇಂದ್ರದಲ್ಲಿ ದೊರೆಯುತ್ತಿದೆ. ಮಹಿಳೆಯರಿಗೆ ಬೇಕಾಗುವ ಸುವಿಧ ಪ್ಯಾಡ್ ಇಂದು ಉಚಿತವಾಗಿ ವಿತರಣೆಯಗಲಿದ್ದು, ಕೇವಲ 1 ರೂ. ಗೆ ಸಿಗುವ ಈ ಸ್ಯಾನಿಟೈಸರ್ ಪ್ಯಾಡನ್ನು ಪಡೆದುಕೊಳ್ಳಿ ಮತ್ತು ಎಲ್ಲರಿಗೂ ಮಾಹಿತಿಗಳನ್ನು ಹಂಚಿಕೊಳ್ಳಿ ಎಂದರು.ರೋಟರಿ ಶಾಲಾ ಶಿಕ್ಷಕಿ ಗೀತಾ ಕಾರ್ಯಕ್ರಮ ನಿರ್ವಹಿಸಿದರು.


ವೇದಿಕೆಯಲ್ಲಿ ವಿಟ್ಲ ರೋಟರಿ ಸ್ಥಾಪಕಾಧ್ಯಕ್ಷ ಬಾಸ್ಕರ್ ಶೆಟ್ಟಿ , ರೋಟರಿ ಪೂರ್ವಾಧ್ಯಕ್ಷ ಸಂಜೀವ ಎಂ.ಎಸ್. ಲಕ್ಷ್ಷ್ಮೀ  ಗಣೇಶ   ಮೆೆಡಿಕಲ್‌   ಮಾಲಕರಾದ ದಿನೇಶ್ ಆಳ್ವ, ಶಿಕ್ಷಕಿ ವಾಣಿ , ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಟ್ಲ ಜನೌಷಧಿ ಕೇಂದ್ರದ ಮಾಲಕಿ ಮಾಲಿನಿ ಡಿ ಆಳ್ವ ಅವರು ಜನೌಷಧಿ ಕೇಂದ್ರದಲ್ಲಿ ಲಭ್ಯವಿರುವ ಸುವಿಧ ಪ್ಯಾಡನ್ನು ಉಚಿತವಾಗಿ ವಿತರಿಸಿದರು.

Related posts

Leave a Reply

Your email address will not be published. Required fields are marked *