

ಮಂಗಳೂರಿನ ಬೊಕ್ಕಪಟ್ಣದಲ್ಲಿರುವ ಬ್ರಹ್ಮ ಬೊಬ್ಬರ್ಯ ಬಂಟ ದೈವಸ್ಥಾನದಲ್ಲಿ ಶ್ರೀ ಬ್ರಹ್ಮ ಬೊಬ್ಬರ್ಯ ಬಂಟ ದೈವಗಳ ವಾರ್ಷಿಕ ಚೌತಿಪರ್ಬ ಹಾಗೂ ನೇಮೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಬೊಕ್ಕಪಟ್ಣದಲ್ಲಿರುವ ಬ್ರಹ್ಮ ಬೊಬ್ಬರ್ಯ ಬಂಟ ದೈವಸ್ಥಾನದಲ್ಲಿ ಪ್ರತೀ ವರ್ಷದಂತೆ ವಾರ್ಷಿಕ ಚೌತಿಪರ್ಬ ಹಾಗೂ ನೇಮೋತ್ಸವ ನಡೆಯಿತು. ಬೋಳೂರು, ಬೊಕ್ಕಪಟ್ಣ, ಕುದ್ರೋಳಿ ಹಾಗೂ ಬೆಂಗ್ರೆ ನೀರೇಶ್ವಾಲ್ಯ ಮೊಗವೀರ ಗ್ರಾಮದ ಕೂಡುವಿಕೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇನ್ನು ಧಾರ್ಮಿಕ ಕಾರ್ಯಕ್ರಮ ‘ಮತ್ಸ್ಯವೇದ ರತ್ನ’ ದೇರೆಬೈಲು ಬ್ರಹ್ಮ ಶ್ರೀ ವಿಠಲದಾಸ್ ತಂತ್ರಿ ವರ್ಯರ ನೇತೃತ್ವದಲ್ಲಿ ನಡೆಯಿತು. ದೇವತಾ ಕಾರ್ಯ, ಶ್ರೀ ಬ್ರಹ್ಮ ಬೊಬ್ಬರ್ಯ ಬಂಟ ದೈವಗಳ ಗಗ್ಗರ ಸೇವೆ, ಬೊಬ್ಬರ್ಯ ಪಾತ್ರಿ ದರ್ಶನ ಸೇವೆ, ಶ್ರೀ ದೈವಗಳ ವಲಸಾರಿ ಬಲಿ ಸೇವೆ, ಗಂಗಾ ಭೇಟಿ, ತ್ರಿಶೂಲ ಬಲಿ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಕುದ್ರೋಳಿ 3ನೇ ಗ್ರಾಮದ ಅಧ್ಯಕ್ಷರಾದ ಲೊಕೇಶ್ ಸುವರ್ಣ, ಬೊಕ್ಕಪಟ್ಣ ಗ್ರಾಮದ ಉಪಾಧ್ಯಕ್ಷರಾದ ಬಿ. ಗೋಪಾಲಕೃಷ್ಣ ಕುಂದರ್, ಬೊಕ್ಕಪಟ್ಣ ಗ್ರಾಮದ ಸ್ಥಳ ಕರ್ತವರು ತುಕರಾಮ ಕೋಟ್ಯಾನ್, ಬೆಂಗ್ರೆ ನೀರೇಶ್ವಾಲ್ಯ ಗ್ರಾಮದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸಾಲ್ಯಾನ್, ಬೋಳೂರು ಗ್ರಾಮದ ಜೊತೆ ಕಾರ್ಯದರ್ಶಿ ಪ್ರವೀಣ್ ಮೆಂಡನ್, ಕುದ್ರೋಳಿ 2ನೇ ಗ್ರಾಮದ ಕೋಶಾಧಿಕಾರಿ ಯಾಧವ ಸುವರ್ಣ, ಬ್ರಹ್ಮ ಬೊಬ್ಬರ್ಯ ಬಂಟ ದೈವಸ್ಥಾನದ ಮಾಜಿ ಅಧ್ಯಕ್ಷರಾದ ಆರ್.ಪಿ. ಬೋಳೂರ್ ಮತ್ತು ಆಡಳಿತ ಸಮಿತಿಯ ಸದಸ್ಯರುಗಳು, ಗುರಿಕಾರರು ಉಪಸ್ಥಿತರಿದ್ದರು.