Home Posts tagged #belthangady (Page 2)

ಮತ ಚಲಾಯಿಸಿದ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರು ಗರ್ಡಾಡಿಯ ಸೈಂಟ್ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 123 ರಲ್ಲಿ ಮತ ಚಲಾಯಿಸಿದರು. ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ಹಬ್ಬ ಎಂದು ಕರೆಸಿಕೊಳ್ಳುವ ಮತದಾನ ಸಂಭ್ರಮದಲ್ಲಿ ಕ್ಷೇತ್ರದ ಎಲ್ಲಾ ಮತದಾರರು ಭಾಗಿಯಾಗಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮ ಪತ್ರ ಸಲ್ಲಿಕೆ : ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಲಿರುವ ರಕ್ಷಿತ್ ಶಿವರಾಂ ರವರು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಚಲನಚಿತ್ರ ನಟ ವಿಜಯರಾಘವೇಂದ್ರ ಹಾಗೂ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು

ಬೆಳ್ತಂಗಡಿ : ತೋಟತ್ತಾಡಿ ; ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಬೆಳ್ತಂಗಡಿ. : ತೋಟತ್ತಾಡಿ ಬಿಜೆಪಿಯ ದುರಾಡಳಿತಕ್ಕೆ ಬೇಸಿತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಹರೀಶ್ ಗೌಡ ವಿಶ್ವನಾಥ್ ಗೌಡ ರವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸಂಯೋಜಕರಾದ ಭಗೀರಥ ಜಿ. ಮಾಜಿ ಜಿಲ್ಲಾ ಪಂಚಾಯತ್

ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿ ಡಾ. ಕುಮಾರ ಹೆಗ್ಡೆ ನೇಮಕ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ವಿಜ್ಞಾನ ನಿಕಾಯದ ಡೀನ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕುಮಾರ ಹೆಗ್ಡೆ ಬಿ.ಎ. ಅವರು ನೇಮಕಗೊಂಡಿದ್ದಾರೆ. ಪ್ರಾಂಶುಪಾಲರಾಗಿದ್ದ ಡಾ. ಎ. ಜಯ ಕುಮಾರ್ ಶೆಟ್ಟಿ ಅವರು ಮಾ.31ರಂದು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆದಿದೆ. ಡಾ. ಕುಮಾರ ಹೆಗ್ಡೆ ಬಿ.ಎ. ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ರ್ಯಾಂಕ್

ಸೌಕರ್ಯ ವಂಚಿತ ಬೆಳ್ತಂಗಡಿ – ಬಜಿರೆ ಗ್ರಾಮ : ಯುವ ರೈತ ಸಂಘ ಎಚ್ಚರಿಕೆ

ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಸ್ಪರ್ಧಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಯುವ ರೈತ ಘಟಕ – ರಾಜ್ಯ ಸಂಚಾಲಕ ಮತ್ತು ಜಿಲ್ಲಾಧ್ಯಕ್ಷ – ಆದಿತ್ಯ ಕೊಲ್ಲಾಜೆ ಮತ್ತು ಅವರ ತಂಡ ಬಜಿರೆ, ಗ್ರಾಮಕ್ಕೆ ಸಹಿ ಅಭಿಯಾನ ಮತ್ತು ಜನರ ಸಮಸ್ಯೆಗಳನ್ನು ಅರಿಯಲು ನಡೆಸಿದ್ದರು. ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಸ್ಥರು, ಕಳೆದ 5 ವರ್ಷಗಳಿಂದ ಹಲವೆಡೆ ನೀರಿಲ್ಲದೆ, ಕೆಲವೆಡೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ ಎಂದು ದೂರಿದರು. ಇದಲ್ಲದೇ, ಇಲ್ಲಿನ ಜನರು ಹಿಂದಿನ

ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವಂತೆ ಏಕಾಂಗಿ ಪ್ರತಿಭಟನೆ

ಬೆಳ್ತಂಗಡಿ; ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿ ಸಿಪಿಐ ಎಂ ಮುಖಂಡ ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಏಕಾಂಗಿ ಪ್ರತಿಭಟನೆಗೆ ಸೋಮವಾರ ಚಾಲನೆ ನೀಡಿದರು. ಬೆಳಿಗ್ಗೆ ಹತ್ತು ಗಂಟೆಗೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಆರಂಭಿಸಿದ ಅವರು ಸಂಜೆ

ಮೂಲಭೂತ ಸೌಕರ್ಯ ವಂಚಿತ ಮಲೆಕುಡಿಯ ಆದಿವಾಸಿಗಳು : ನಾವೂರ್ ಮತ್ತು ಕುತ್ಲೂರಿಗೆ ಯುವ ರೈತ ಘಟಕ ತಂಡ ಭೇಟಿ

ಕುದುರೆಮುಖ ರಾಷ್ಟ್ರೀಯ ಅರಣ್ಯ ಮೀಸಲು ಪ್ರದೇಶದಲ್ಲಿನ ಮಲೆಕುಡಿಯ ಆದಿವಾಸಿಗಳು 100 ವರ್ಷಕ್ಕೂ ಹೆಚ್ಚು, ಈ ಕಾಡಿನಲ್ಲಿ ಪ್ರಸ್ತುತ ಜೀವನ ಪರಿಸ್ಥಿತಿಯನ್ನು ತಿಳಿಯಲು ಅನ್ವೇಷಣೆಗಾಗಿ ಬೆಳ್ತಂಗಡಿ ತಾಲೂಕಿನ ಮಲೆಕುಡಿಯ ಬುಡಕಟ್ಟು ಗ್ರಾಮ ನಾವೂರ್ ಮತ್ತು ಕುತ್ಲೂರಿಗೆ ಯುವ ರೈತ ಘಟಕ ತಂಡ ಭೇಟಿ ನೀಡಿತ್ತು. ಮಲಿಕುಡಿಯ ಆದಿವಾಸಿಗಳು ಈ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತವು ಅವರ ಮೂಲಭೂತ ಹಕ್ಕುಗಳಾದ ವಿದ್ಯುತ್, ನೀರಾವರಿ

ಕಾಂಗ್ರೆಸ್ ಹೇಳಿಕೆಗೆ ಶಾಸಕ ಹರೀಶ್ ಪೂಂಜಾ ತಿರುಗೇಟು

ಚುನಾವಣೆ ಬಂದಾಗ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುತ್ತಾರೆ ಎಂದು ಹೇಳಿದ ಕಾಂಗ್ರೆಸ್ ನಾಯಕರಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.ಕಳೆದ ನಾಲ್ಕೂವರೆ ವರ್ಷದ ಹಿಂದೆ ಇಲ್ಲಿನ ನಾಯಕರೊಬ್ಬರು ತಾಲೂಕಿನ ಹಲವಾರು ಕಡೆ ತೆಂಗಿನ ಕಾಯಿ ಒಡೆದು ಜನರನ್ನು ಮರುಳು ಮಾಡಿದ ಹಾಗೆ ನಾವು ಮಾಡಲಿಲ್ಲ. ಇಡೀ ತಾಲೂಕಿನಲ್ಲಿ ಅಭಿವೃದ್ದಿ ಮಾಡುವ ಮೂಲಕ ನಮ್ಮ ಪ್ರಣಾಳಿಕೆಯಲ್ಲಿ ಏನು ಹೇಳಿದ್ದೇವೆಯೋ ಅದನ್ನು ಚಾಚೂ ತಪ್ಪದೇ

ಎಸ್ ಡಿ ಎಂ ಕಾಲೇಜಿನ ಎನ್ ಸಿ ಸಿ ನೌಕಾ ವಿಭಾಗದ ಆರು ಕೆಡೆಟ್ ಗಳಿಗೆ ಬಂಗಾರದ ಪದಕ 

ದೆಹಲಿಯಲ್ಲಿ ನಡೆದ 2023 ರ ಗಣರಾಜ್ಯೋತ್ಸವ ಪರೇಡ್ ನಲ್ಲಿ  ಉಜಿರೆ ಎಸ್ ಡಿ ಎಮ್ ಕಾಲೇಜಿನ ನೌಕಾ ವಿಭಾಗದ 6 ಕೆಡೆಟ್ ಗಳು ಶಿಪ್ ಮೊಡೆಲಿಂಗ್ ವಿಭಾಗದಲ್ಲಿ ಬಂಗಾರದ ಪದಕವನ್ನು ಗಳಿಸಿ ಸಂಸ್ಥೆಗೆ ಗೌರವವನ್ನು ತಂದಿದ್ದಾರೆ. ಪಿಓ ಕೆಡೆಟ್  ಶ್ರೀರಾಮ ಮರಾಠೆ  ಮತ್ತು ಪಿಓ ಕೆಡೆಟ್ ಅನನ್ಯಾ ಕೆ.ಪಿ ಇವರು ಪವರ್ ಮಾಡೆಲ್ ವಿಭಾಗದಲ್ಲಿ ಬಂಗಾರದ ಪದಕವನ್ನು ಸಂಪಾದಿಸಿದ್ದಾರೆ. ಇಡೀ ದೇಶದ 17 ಡೈರೆಕ್ಟರೇಟ್ ನವರು ಸಿದ್ಧಪಡಿಸಿ ಪರೀಕ್ಷೆಗೊಳಪಡಿಸಿದ ಈ ಸ್ಪರ್ಧೆಗಳಲ್ಲಿ ಇವರು

ಕನ್ನಡ ಸಾಹಿತ್ಯ ಸಮ್ಮೇಳನ : ಕನ್ನಡ ತಾಯಿಗೆ ಸ್ವರಾಭಿಷೇಕಗೈದ ‘ಸುಮಧುರ ಗೀತೆಗಳ ಗಾಯನ’

ಉಜಿರೆ, ಫೆ 6: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ರವಿವಾರ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ಘಟ್ಟದಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಸುಮಧುರ ಗೀತೆಗಳ ಗಾಯನದ ಮೂಲಕ ಸ್ವರಾಭಿಷೇಕವೇ ನಡೆಯಿತು. ಆ ಮೂಲಕ ಮೂರು ದಿನಗಳ ಅಕ್ಷರ ಜಾತ್ರೆ ಪೂರ್ಣ ಮುಕ್ತಾಯ ಕಂಡಿತು. “ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು..” “ಕರುನಾಡ ತಾಯಿ ಸದಾ ಚಿನ್ಮಯಿ..” ಮುಂತಾದ ಗೀತೆಗಳ ಮೂಲಕ ಸ