Home Posts tagged #fisheries

ಮಲ್ಪೆಯ ಮೀನು ಬೋಟು ಭಟ್ಕಳ ಕಡಲಲ್ಲಿ ಲೂಟ : ಏಳು ಆರೋಪಿಗಳ ಬಂಧನ

ಮಲ್ಪೆ ಬಂದರಿನಿಂದ ಮೀನು ಹಿಡಿಯಲು ಹೋಗಿದ್ದ ಕೃಷ್ಣನಂದನ ಎಂಬ ಬೋಟಿನಿಂದ ಮೀನು ಮತ್ತು ಡೀಸೆಲ್ ಅಪಹರಿಸಿದ್ದಾರೆ ಎಂಬ ದೂರಿನ ಮೇಲೆ ಮಲ್ಪೆ ಪೋಲೀಸರು ಭಟ್ಕಳದಲ್ಲಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಭಟ್ಕಳದ ೩೪ರ ಸುಬ್ರಮಣ್ಯ ಖಾರ್ವಿ, 38ರ ರಾಘವೇಂದ್ರ ಖಾರ್ವಿ, 40ರ ಹರೀಶ್ ನಾರಾಯಣ ಖಾರ್ವಿ, 42ರ ನಾಗೇಶ್ ನಾರಾಯಣ ಖಾರ್ವಿ, 38ರ ಗೋಪಾಲ ಮಾಧವ, 43ರ ಸಂತೋಷ

ಮೀನುಗಾರರಿಗೆ ಬಜೆಟ್‍ನಲ್ಲಿ ಪ್ರಕಟಿಸಿದ ಯೋಜನೆ ಕಾರ್ಯಗತಗೊಂಡಿಲ್ಲ : ಐವನ್ ಡಿಸೋಜಾ

ರಾಜ್ಯ ಸರಕಾರ ಮೀನುಗಾರರಿಗಾಗಿ ಬಜೆಟ್‍ನಲ್ಲಿ ಪ್ರಕಟಿಸಿದ ಒಂದು ಯೋಜನೆಯೂ ಜಾರಿಗೆ ತರದೆ ಮೀನುಗಾರ ಸಮುದಾಯವನ್ನು ಕಡೆಗಣಿಸಿದೆ. ಈಗಾಗಲೇ ಮೀನುಗಾರ ಮುಖಂಡರು ಬೆಂಗಳೂರಿಗೆ ತೆರಳಿ ತಮ್ಮ ಸಮಸ್ಯೆಯನ್ನು ಸರಕಾರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸ್ಪಂದಿಸದಿದ್ದರೆ ಮೀನುಗಾರರ ಜತೆ ಸೇರಿ ಕಾಂಗ್ರೆಸ್ ಪಕ್ಷವೂ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಉಪಾಕ್ಷ ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ.

ಡಾ. ಪ್ರವೀಣ್ ಪುತ್ರ ರಚಿಸಿದ “ವಾರಿಯರ್ಸ್ ಆಫ್ ದಿ ಬ್ಲೂ” ಪೈಂಟಿಂಗ್ ಪ್ರದರ್ಶನ

ಮಂಗಳೂರು ಕರಾವಳಿ ಚೋತ್ರ ಕಲಾ ಚಾವಡಿ ಬಲ್ಲಾಲ್‌ಭಾಗ್ ವತಿಯಿಂದ ವಾರಿಯರ್ಸ್ ಆಫ್ ದಿ ಬ್ಯೂ ಡಾ. ಪ್ರವೀಣ್ ಪುತ್ರ ಅವರು ಮೀನುಗಾರಿಕೆಯ ಬಗ್ಗೆ ರಚಿಸಿದ ಪೈಂಟಿಂಗ್‌ನ ಪ್ರದರ್ಶನ ನಡೆಯಿತು. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಕರಾವಳಿ ಚೋತ್ರ ಕಲಾ ಚಾವಡಿಯ ಸೆಕ್ರೆಟರಿ ಡಾ. ಎಸ್.ಎಮ್ ಶಿವಪ್ರಕಾಶ್ ಅವರು, ಕಲಾವಿದ ಪ್ರವೀಣ್ ಪುತ್ರ ಅವರು, ಸುಮಾರು 2 ಸಾವಿರಕ್ಕೂ ಹೆಚ್ಚು ಪೈಂಟಿಂಗ್‌ಗಳನ್ನು ರಚಿಸಿ ಎಲ್ಲರ ಮನಸನ್ನು ಗೆದ್ದಿದ್ದಾರೆ. ಮೀನುಗಾರ ಸಮುದಾಯದವರ