Home Posts tagged #haleyangadi

ಹಳೆಯಂಗಡಿ : ಗಾಳಿಗೆ ರಸ್ತೆಗುರಳಿದ ತೆಂಗಿನ ಮರ, ವಿದ್ಯುತ್ ಕಂಬಗಳು

ಮೂಲ್ಕಿ ತಾಲ್ಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳುವೈಲು ಪ್ರದೇಶದಲ್ಲಿ ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಗಳ ಸಹಿತ, ವಿದ್ಯುತ್ ಕಂಬಗಳು ಧರೆಶಾಹಿಯಾದ ಘಟನೆ ನಡೆದಿದ್ದು ಯಾವುದೇ ರೀತಿಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ. ದಕ್ಷಿಣದಿಂದ ಬೀಸಿದ ಬಲವಾದ ಗಾಳಿಗೆ ಮಾರುತಿ ರೈಸ್ ಮಿಲ್ಲಿನ ರಸ್ತೆ ಬದಿಯ ಖಾಸಗಿ ತೋಟದಲ್ಲಿದ್ದ

ಹಳೆಯಂಗಡಿ : ಸಮಸ್ಯೆಗಳನ್ನು ಒಂದೇ ಸೂರಿನಡಿ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮ

ಹಳೆಯಂಗಡಿ: ಗ್ರಾಮದ ಜನತೆಯ ಸಮಸ್ಯೆಗಳನ್ನು ಒಂದೇ ಸೂರಿನಡಿ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಸಾಕಷ್ಟು ಮಂದಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಪಡೆದುಕೊಳ್ಳಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೊಟ್ಯಾನ್‌ ಹೇಳಿದರು. ಅವರು ಹಳೆಯಂಗಡಿ ಪಂಚಾಯತ್‌ ವತಿಯಿಂದ ಕೆಮ್ರಾಲ್, ಪಡುಪನಂಬೂರು, ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ ಬರುವ ಎಲ್ಲಾ ಗ್ರಾಮದವರಿಗೆ ವಿದ್ಯಾ ವಿನಾಯಕ ಯುವಕ ಮಂಡಲ ಸಭಾಭವನ

ಹಳೆಯಂಗಡಿ : ರೈಲ್ವೇ ಗೇಟ್‍ನಲ್ಲಿಯೇ ಉಳಿದ ಗೂಡ್ಸ್ ಡಬ್ಬಿಗಳು

ಮೂಲ್ಕಿಯ ಹಳೆಯಂಗಡಿ ಇಂದಿರಾನಗರದ ರೈಲ್ವೇ ಗೇಟ್‍ನ ಬಳಿಯಲ್ಲಿಯೇ ಸಂಚರಿಸುತ್ತಿದ್ದ ಗೂಡ್ಸ್ ರೈಲು ಬೋಗಿಯ ಡಬ್ಬಿಗಳು ಅರ್ಧದಲ್ಲಿಯೇ ಕಡಿದುಕೊಂಡು ನಿಂತು ಸುಮಾರು ಒಂದು ತಾಸು ರೈಲ್ವೇ ಗೇಟ್‍ನಲ್ಲಿ ಸಂಚಾರಿಗಳು ಪರದಾಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಪಡುಬಿದ್ರಿಯಿಂದ ಮಂಗಳೂರಿನ ಎನ್‍ಎಂಪಿಟಿಯತ್ತ ತೆರಳುತ್ತಿದ್ದ ಗೂಡ್ಸ್ ಹೊತ್ತಿದ್ದ ಬೋಗಿಯೂ ತಾಂತ್ರಿಕ ದೋಷದಿಂದ ಬೋಗಿಯನ್ನು ಹೊಂದುಕೊಂಡಿದ್ದ ಗೂಡ್ಸ್ ಡಬ್ಬಿಗಳ ಹಾಗೂ

ಕಿನ್ನಿಗೋಳಿ – ಹಳೆಯಂಗಡಿ ನಡುವೆ ಬಸ್ ಟಿಕೆಟ್ ದರ 2 ರೂ ಇಳಿಕೆ

ಸುರತ್ಕಲ್ ಟೋಲ್ ಗೇಟ್ ತೆರವಾಗಿರುವ ಹಿನ್ನಲೆಯಲ್ಲಿ ಕಿನ್ನಿಗೋಳಿ ಹಳೆಯಂಗಡಿ ನಡುವೆ ಸಂಚರಿಸುವ ಎಲ್ಲಾ ಬಸ್ಗಳ ಟಿಕೆಟ್ ದರದಲ್ಲಿ ಡಿ.20 ರಿಂದ 2ರೂ ಕಡಿತ ಮಾಡಲಾಗುವುದು, ಕಿನ್ನಿಗೋಳಿಯಿಂದ ಮುಕ್ಕ ತನಕ ಹಿಂದಿನ ದರವೇ ಇರಲಿದೆ ಎಂದು ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ

ಹಳೆಯಂಗಡಿಯ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಿಂದ ಆಟಿದ ನೆಂಪು ಕಾರ್ಯಕ್ರಮ

ಮಂಗಳೂರು :ಆಟಿ ತಿಂಗಳ ತಿಂಡಿ ತಿನಿಸುಗಳು ಆಹಾರ ಕ್ರಮಗಳು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸಮಯದಲ್ಲಿ ಪ್ರಕೃತಿ ದತ್ತವಾಗಿ ಸಿಗುವ ಆಹಾರಗಳು ಜೌಷಧಿಯ ಗುಣಗಳನ್ನು ಹೊಂದಿದೆ. ಅಮಾಸ್ಯೆ ದಿನದ ಹಾಳೆ ಮರದ ಕೆತ್ತೆ ಅತ್ಯಧಿಕ ರೋಗ ನಿರೋಧಕ ಶಕ್ತಿಯಿಂದ ಕೂಡಿದೆ.ಇದರ ಕಷಾಯ ಸೇವಿಸಿದರೆ ರೋಗ ರುಜಿನಗಳು ದೂರವಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು  ಇದರ ಸದಸ್ಯ ನಾಗೇಶ್ ಕುಲಾಲ್  ಅವರು ಅಭಿಪ್ರಾಯ ಪಟ್ಟರು. ಆ.1 ರಂದು ಶ್ರೀ ಸುಬ್ರಹ್ಮಣ್ಯ