Home Posts tagged #kumpala

ಕುಂಪಲ : ನವ ವಧು ವರರ ರಂಗ ರುಕ್ಮಿಣಿ ಸಮಾಗಮ ಕಾರ್ಯಕ್ರಮ

ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ನವ ವಧು ವರರ ರಂಗ ರುಕ್ಮಿಣಿ ಸಮಾಗಮ ಕಾರ್ಯಕ್ರಮ ನಡೆಯಿತು. ಉದ್ಯಮಿ ಕಂಪಾರ್ಟ್ ಇನ್ ಮಾಲಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮಕ್ಕೆ ದೀಪಬೆಳಗಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಜೀವನವನ್ನು ರೂಪಿಸಲು ನಮಗೆ ಸಂಸ್ಕಾರ ಬಹಳ ಮುಖ್ಯ, ಇದನ್ನು ಅರಿತಾಗ ಮಾತ್ರ ನಮ್ಮ ಜೀವನ ಸುಂದರವಾಗುತ್ತದೆ, ಈ ನಿಟ್ಟಿನಲ್ಲಿ ರಂಗ

ಕುಂಪಲದ ಯುವತಿ ಸಾವಿಗೆ ಟ್ವಿಸ್ಟ್ : ನಂಬಿದ್ದ ಮಹಿಳೆಯಿಂದಲೇ ಮೋಸ

ಉಳ್ಳಾಲ: ಗೃಹಪ್ರವೇಶ ನಡೆಸಿ ಐದೇ ದಿನದಲ್ಲಿ ನೂತನ ಮನೆಯಲ್ಲೇ ಯುವತಿ ನೇಣಿಗೆ ಶರಣಾದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮನೆ ಖರೀದಿಸಿದ ಮಹಿಳೆಯೊಬ್ಬಳಿಗೆ ನಗದು ನೀಡಿ ಒಂದೆಡೆ ಮೋಸಕ್ಕೊಳಗಾಗಿದ್ದರೆ, ಇನ್ನೊಂದೆಡೆ ಮನೆಯ ಬ್ಯಾಂಕ್ ಸಾಲ ಮರುಪಾವತಿಗೆ ಗೃಹಪ್ರವೇಶದಂದೇ ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದು ಮುಜುಗರಕ್ಕೀಡಾದ ಯುವತಿ ಮನನೊಂದು ನೇಣಿಗೆ ಕೊರಳೊಡ್ಡಿರುವುದಾಗಿ ತಾನು ಬರೆದಿಟ್ಟಿರುವ 15 ಪುಟಗಳ ಡೆತ್ ನೋಟ್ ಮೂಲಕ ಬಹಿರಂಗವಾಗಿದೆ. ಮೂಲತ: ಫರಂಗಿಪೇಟೆಯ

ಕುಂಪಲದ ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ

ಉಳ್ಳಾಲ: ಎರಡು ವರುಷಗಳ ಹಿಂದೆ ಕುಂಪಲದ ಆಶ್ರಯ ಕಾಲನಿಯ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೂಪದರ್ಶಿ ಪ್ರೇಕ್ಷ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಕುತ್ತಾರು,ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20)ಆತ್ಮ ಹತ್ಯೆಗೈದ ಯುವಕ.ಯತಿರಾಜ್ ತನ್ನ ಮನೆಯ ಹಿಂದಿನ ಚಿಕ್ಕಮ್ಮನ ಮನೆಯ ಎದುರಿನ ಸಿಟ್ ಔಟ್ನ ಕಬ್ಬಿಣದ ಹುಕ್ಸ್ ಒಂದಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ. ನಿನ್ನೆ

ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಉಳ್ಳಾಲ: ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿ , ಉಳ್ಳಾಲ ವಿಧಾಸನಭಾ ಕ್ಷೇತ್ರಕ್ಕೆ ಅವಶ್ಯಕವಿರುವ ಉದ್ದೇಶದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು. ಅವರು ಪಂಡಿತ್ ಹೌಸ್ ಚುನಾವಣಾ ಕಾರ್ಯಾಲಯದಲ್ಲಿ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಮನೆಮನೆಗಳಿಗೆ ಕುಡಿಯುವ ನೀರಿನ

ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಲ್ಲಿ ಯಾವುದೇ ಗೊಂದಲವಿಲ್ಲ : ಸಂತೋಷ್ ರೈ ಬೋಳಿಯಾರ್

ಉಳ್ಳಾಲ : ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಲ್ಲಿ ಯಾವುದೇ ಗೊಂದಲವಿಲ್ಲ, ಒಮ್ಮತದ ಅಭ್ಯರ್ಥಿ, ಕಾಂಗ್ರೆಸ್ ಸೋಲಿಸುವುದೇ ನಮ್ಮ ಧ್ಯೇಯವಾಗಿದೆ, ಕಾರ್ಯಕರ್ತರು ನೋವಿನಿಂದ ಇದ್ದಲ್ಲಿ ನೇರ ಬಂದು ತಿಳಿಸಿ, ಸೂಕ್ತ ಅಭ್ಯರ್ಥಿ ಸತೀಶ್ ಕುಂಪಲ ಅವರನ್ನು ಅತ್ಯಧಿಕ ಮತಗಳೊಂದಿಗೆ ಗೆಲ್ಲಿಸುವುದೇ ಮಂಗಳೂರು ಮಂಡಲ ಬಿಜೆಪಿಯ ಗುರಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಮುಡಿಪು ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ

ಕುಂಪಲದಲ್ಲಿ ಉದ್ಯಮಶೀಲತೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಯುಎನ್‍ಡಿಪಿ ಮತ್ತು ಎಎಲ್‍ಸಿ ಇಂಡಿಯಾ ಸಂಸ್ಥೆಯ ವತಿಯಿಂದ 5 ದಿನದ ಉದ್ಯಮಶಿಲತೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಕುಂಪಲದಲ್ಲಿ ಉದ್ಘಾಟನೆಗೊಂಡಿತು. ಮಹಿಳಾ ಉದ್ಯಮಿ ಗಳನ್ನು ಪ್ರೋತ್ಸಾಹಿಸಿ ಅವರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದೊಂದಿಗೆ ಸ್ತ್ರೀ ಶಕ್ತಿ ಗುಂಪಿನ ಆಸಕ್ತ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಿದರು. ನಾರಾಯಣ ಕುಂಪಲ ಅವರು