Home Posts tagged #kundapur

ಕೊಲ್ಲೂರು : ವ್ಯಕ್ತಿಯ ಮೇಲೆ ಚಿರತೆ ದಾಳಿ, ಗಂಭೀರ ಗಾಯ

ಚಿರತೆಯೊಂದು ವ್ಯಕ್ತಿಯೋರ್ವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಕೊಲ್ಲೂರು ಸಮೀಪದ ನಾಗೋಡಿಯ ಕಂಚಿಕರೆ ಎಂಬಲ್ಲಿ ನಡೆದಿದೆ. ಚಿರತೆ ದಾಳಿಯಿಂದ ಗಣೇಶ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ತಡರಾತ್ರಿ ಗಣೇಶ್ ಅವರ ಮನೆಯ ಸಮೀಪವೇ ಚಿರತೆ ಕಂಡುಬಂದಿದ್ದು, ನಾಯಿಯ ಕೂಗಾಟ ಕೇಳಿ ಗಣೇಶ್ ಮನೆಯಿಂದ ಹೊರ ಬಂದಾಗ ಅವರ ಮೇಲೆ ಎರಗಿದೆ. ಗಂಭೀರ ಗಾಯಗೊಂಡಿದ್ದ ಗಣೇಶ್

“ನಮ್ಮ ಕುಂದಾಪುರ” ಬಳಗದ 26ನೇ ಸ್ನೇಹ ಸಹಮಿಲನ

“ನಮ್ಮ ಕುಂದಾಪುರ” ಬಳಗದ 26ನೇ ಸಹಮಿಲನವು ಕುಂದಾಪುರ ಹೋಟೆಲ್‍ನ ನಗು ಪ್ಯಾಲೇಸ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಖ್ಯಾತ ವಕೀಲರೂ, ಸಾಹಿತಿ, ಸಂಪನ್ಮೂಲವ್ಯಕ್ತಿಗಳಾಗಿರುವ ಎ .ಎಸ್. ಎನ್ ಹೆಬ್ಬಾರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಒಂದು ಹೂವಿನ ಚಿತ್ರವನ್ನು ಬಳಗದ ಗೋಡೆಯ ಮೇಲೆ ಹಾಕಿದರೆ ಸಾವಿರಾರು ಸದಸ್ಯರು ಕ್ಷಣಮಾತ್ರದಲ್ಲಿ ತಮ್ಮದೇ ಆದ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಪರಿ

ಎರಡು ದಿನಗಳ ಬಳಿಕ ನೀರುಪಾಲಾದ ಯುವಕನ ಮೃತದೇಹ ಪತ್ತೆ

ಕುಂದಾಪುರ: ಮೊವಾಡಿ ಸೇತುವೆ ಬಳಿ ನದಿಯಲ್ಲಿ ಸ್ನೇಹಿತನೊಂದಿಗೆ ಈಜುತ್ತಿದ್ದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಬಂಟ್ವಾಡಿ ಸೇತುವೆ ಬಳಿಯ ಸೌಪರ್ಣಿಕ ನದಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ತ್ರಾಸಿ ಸಮೀಪದ ಹೋಲಿಕ್ರಾಸ್ ನಿವಾಸಿ ಮಹೇಂದ್ರ (24) ಮೃತ ಯುವಕ. ಭಾನುವಾರ ಸಂಜೆ ಮೊವಾಡಿಯ ಸೌಪರ್ಣಿಕಾ ನದಿ ತೀರಕ್ಕೆ ಮಹೇಂದ್ರ, ಆಶಿಕ್ ಹಾಗೂ ಶರತ್ ತೆರಳಿದ್ದರು. ಮಹೇಂದ್ರ ಹಾಗೂ ಆಶಿಕ್ ನೀರಿಗೆ ಇಳಿದಿದ್ದು ಇನ್ನೋರ್ವ

ಗಾಳಿ ಮಳೆಯಿಂದಾಗಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್‌ಗೆ ಹಾನಿ

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಅರಬ್ಬಿ‌ ಸಮುದ್ರದಲ್ಲಿ ‌ಬಾರಿ ಗಾಳಿ ಮಳೆಯಾಗಿದ್ದು, ಕುಂದಾಪುರದಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಈ ಗಾಳಿ ಮಳೆಗೆ ಸಿಲುಕಿ‌‌ ಹಾನಿಗೊಳಗಾದ ಘಟನೆ ‌ನಡೆದಿದೆ. ಕುಂದಾಪುರ ತಾಲೂಕಿನ ಕಂಚಗೋಡಿನ ಹೊಸಪೇಟೆ ನಿವಾಸಿಯಾದ ನಾಗ ಖಾರ್ವಿಯವರಿಗೆ ಸೇರಿದ ಯಕ್ಷೇಶ್ವರಿ ಅನುಗ್ರಹ ದೋಣಿಯು ಗಾಳಿ ಮಳೆಗೆ ಸಿಲುಕಿ‌‌  ದೋಣಿ ಮುಳುಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂಜಿನ್

‘ಪ್ರಕೃತಿಯೊಂದಿಗೆ ಅಭಿವೃದ್ಧಿ ಮತ್ತು ಭವಿಷ್ಯ’ ಎನ್ನುವ ತತ್ವದಡಿ ಮುನ್ನೆಡಯಬೇಕಿದೆ-ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು

ಕುಂದಾಪುರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ನಾವೆಲ್ಲರೂ, ಪ್ರಕೃತಿಯ ಮುಂದೆ ನಮ್ಮ ಸೀಮಿತ ಸಾಮರ್ಥ್ಯ ಮತ್ತೆ ಮತ್ತೆ ಸಾಬೀತಾಗಿರುವುದನ್ನು ಮನಗಂಡು, ‘ಪ್ರಕೃತಿಯೊಂದಿಗೆ ಅಭಿವೃದ್ಧಿ ಮತ್ತು ಭವಿಷ್ಯ’ ಎನ್ನುವ ತತ್ವದಡಿ ಮುನ್ನೆಡಯಬೇಕಿದೆ. ಕರಾವಳಿಯ ನೆಲ- ಜಲದ ಸಂರಕ್ಷಣೆಯೊಂದಿಗೆ ಕೃಷಿ – ಪ್ರವಾಸೋದ್ಯಮ, ಯುವಜನ ಸಬಲೀಕರಣ – ಕೌಶಲಾಭಿವೃದ್ಧಿಯ ಕ್ಷೇತ್ರಗಳಿಗೆ ಆದ್ಯತೆ ನೀಡಲು ಆಡಳಿತ ಬದ್ಧ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ

ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿ

ಕುಂದಾಪುರ: ಫೈನಾನ್ಸ್ ಪಾಲುದಾರ ಕೂಡಾಲ್ ನಿವಾಸಿ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನೂಪ್ ಶೆಟ್ಟಿಯನ್ನು ಪೊಲೀಸರು ಸೋಮವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.   ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಇನ್ನು ಏಳು ದಿನಗಳ ಕಾಲ ಅಂದರೆ ಅಗಸ್ಟ್ 9ರ ತನಕ ಪೊಲೀಸ್ ಕಸ್ಟಡಿಗೆ ನೀಡಿ 1ನೇ ಜೆಎಮ್‌ಎಫ್‌ಸಿ ನ್ಯಾಯಧೀಶೆ ನಾಗರತ್ನಮ್ಮ ಆದೇಶ ಹೊರಡಿಸಿದ್ದಾರೆ.ಸೋಮವಾರ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮುಗಿದ

ಮುರ್ಡೇಶ್ವರದ ಯಮುನಾ ನಾಯ್ಕ್ ಅತ್ಯಾಚಾರ ಕೊಲೆ ಪ್ರಕರಣ: ಮರು ತನಿಖೆಗೆ ಉಚ್ಚ ನ್ಯಾಯಾಲಯದ ಪೀಠ ಮಹತ್ವದ ತೀರ್ಪು

ಕುಂದಾಪುರ: ಉತ್ತರಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಮುರ್ಡೇಶ್ವರದ 21 ವರ್ಷದ ಯುವತಿ ಯಮುನಾ ನಾಯ್ಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಧಾರವಾಡದ ಉಚ್ಚ ನ್ಯಾಯಾಲಯದ ಪೀಠ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ, ಕೊಲೆ ಪ್ರಕರಣ ನಡೆದು ಸುಮಾರು 11 ವರ್ಷಗಳ ಬಳಿಕ ಮರು ತನಿಖೆ ನಡೆಸುವಂತೆ ನ್ಯಾಯಾಲಯ ತೀರ್ಪು ನೀಡಿದ್ದು ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಹರಿಕಾಂತ್ ಎನ್ನುವ ವ್ಯಕ್ತಿ