Home Posts tagged #udupi (Page 5)

ಬಂಟ್ವಾಳ : ದರೋಡೆ ಪ್ರಕರಣವನ್ನು ಭೇಧಿಸಿದ ದ.ಕ.ಜಿಲ್ಲಾ ಪೊಲೀಸರು

ದ.ಕ.ಜಿಲ್ಲೆಯ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ದಿನಾಂಕ; 11-01-2024 ರಂದು ಮುಂಜಾನೆ ನಡೆದ ಚಿನ್ನಾಭರಣಗಳನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:03/2024 ಕಲಂ: 395, 397, 411 ಭಾ.ದಂ.ಸಂ. ರಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿ, ಆರೋಪಿಗಳ

ಶ್ರೀ ಕೃಷ್ಣ ಮಠದಲ್ಲಿ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ

ಉಡುಪಿಯಲ್ಲಿ ರಾಮ ಪ್ರತಿಷ್ಠಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶ್ರೀ ಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ ನಡೆಯಿತು. ಬ್ರಹ್ಮರಥ, ಚಿನ್ನದ ರಥ ಮಹಾಪೂಜಾ ರಥ, ಬೆಳ್ಳಿರಥ ಹಾಗೂ ನವರತ್ನ ರಥವನ್ನು ರಥ ಬೀದಿಗೆ ಪ್ರದಕ್ಷಿಣೆ ತರಲಾಯಿತು ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ರಾತ್ರಿ ನಡೆದ ಉತ್ಸವದಲ್ಲಿ ರಾಮಾಯಣ ಸಹಿತ ಕೃಷ್ಣದೇವರ ಉತ್ಸವ ನಡೆಸಲಾಯಿತು. ಮಹೋತ್ಸವಕ್ಕೂ ಮುನ್ನ ಮಧ್ವ ಸರೋವರದಲ್ಲಿ ತೆಪೋತ್ಸವ ನಡೆಯಿತು. ಈ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆ

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಶಿರ್ತಾಡಿ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಅಶೋಕ್ ಪೂಜಾರಿಯವರ ನೇತೃತ್ವದಲ್ಲಿ ಜನವರಿ 19ರಂದು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್ ,ಉಪಾಧ್ಯಕ್ಷರಾದ ಹರೀಶ್ ಸಾಲ್ಯಾನ್,ಪ್ರಧಾನ ಕಾರ್ಯದರ್ಶಿ ಗಂಗಾಧರ್ ಚೇಲಾರ್,ಮೂಡಬಿದ್ರೆ ವಲಯದ ಸಂಚಾಲಕರಾದ ಕುಮಾರ್ ಪೂಜಾರಿ ಹಾಗೂ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಲ್ಕಿ:ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ (ರಿ.)ಇದರ ರಜತ ಮಹೋತ್ಸವವು ಮಾರ್ಚ್ 10ರಂದು ನಡೆಯಲಿದ್ದು, ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ.ರಾಜಶೇಖರ ಕೋಟ್ಯಾನ್ ರವರು ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಗೀತಾಂಜಲಿ ಸುವರ್ಣ ಇವರನ್ನು ಬಿಲ್ಲವರ ಮಹಿಳಾ

ಕುಂದಾಪುರ: ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು

ಕುಂದಾಪುರ : ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಆನೆಗುಡ್ಡೆ ಶ್ರೀವಿನಾಯಕ ದೇವಳದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸ್ ರು ಭೇಧಿಸಿದ್ದಾರೆ. ಬೀಬಿಜಾನ್ ಶೇಖ್ (58) ಮತ್ತು ಪಾರವ್ವ ಸಿರಗಹಳ್ಳಿ (54) ಕಳ್ಳತನ ಪ್ರಕರಣದಲ್ಲಿ ಬಂಧಿತರು. ಲೋಕೇಶ್ ಮಂಜುನಾಥ ನಾಯ್ಕ ಅವರು ಸುಮಾರು 53.900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಖರೀದಿ ಮಾಡಿ ಪರ್ಸಿನಲ್ಲಿಟ್ಟು, ಪತ್ನಿಯ ವ್ಯಾನಿಟಿ

ಕುಂದಾಪುರ: ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ

ಕುಂದಾಪುರ:ಬೈಂದೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ 4ನೇ ವರ್ಷದ ರಾಜ್ಯ ಮಟ್ಟದ 40 ಗಜಗಳ ಟೆನಿಸ್ ಬಾಲ್ ಕ್ರಿಕೆಟ್ ಹಗಲು ರಾತ್ರಿ ಪಂದ್ಯಾಟ ಬೈಂದೂರು ಟ್ರೋಫಿ-2024 ಗಾಂಧಿ ಮೈದಾನದಲ್ಲಿ ಅದ್ದೂರಿಯಾಗಿ ಶನಿವಾರ ನಡೆಯಿತು. ಬೈಂದೂರು ಸ್ಪೋರ್ಟ್ಸ್ ಕ್ಲಬ್ ಅವರು ಆಯೋಜಿಸಿದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಪಾಂಚಜನ್ಯ ಕೋಟೇಶ್ವರ ಪ್ರಥಮ ಸ್ಥಾನವನ್ನು ಪಡೆಯಿತು,ಶೆಟ್ಟಿ ಎಂಪಿಯರ್ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿದೆ.ಪ್ರಥಮ ಬಹುಮಾನವಾಗಿ 1,00,006 ಹಾಗೂ

ಬೈಂದೂರು: ವಿಕಸಿತ ಭಾರತ ಸಂಕಲ್ಪ ಅಭಿಯಾನ

ವಿಕಸಿತ ಭಾರತ ಸಂಕಲ್ಪ ಅಭಿಯಾನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್, ಕಿರಿಮಂಜೇಶ್ವರ ಕೆನರಾ ಬ್ಯಾಂಕ್ ನಾವುಂದ ಇವರ ಸಹಯೋಗದೊಂದಿಗೆ ವಿಕಸಿತ ಭಾರತ ಸಂಕಲ್ಪ ಅಭಿಯಾನ ಕಾರ್ಯಕ್ರಮ ನಾಗೂರಿನ ಒಡೆಯರ ಮಠ ಗೋಪಾಲಕೃಷ್ಣ ಕಲಾ ಮಂದಿರದಲ್ಲಿ ನಡೆಯಿತು. ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಮಾಹಿತಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಬೇಕು, ಪ್ರತಿಯೊಬ್ಬರ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು

ಹೆಮ್ಮಾಡಿ: ಆರ್ಯ ಬಿಲ್ಡ್ ಕೇರ್ ಸಂಸ್ಥೆ ಉದ್ಘಾಟನೆ

ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಆರ್ಯ ಬಿಲ್ಡ್ ಕೇರ್ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವುದರ ಜತೆಗೆ ಯುವ ಜನತೆಗೆ ಉದ್ಯೋಗವಕಾಶವನ್ನು ಮಾಡಿಕೊಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.ಎಮಿಯೆಂಟೆಕ್ ಸಿಎಂಡಿ ಸಿಜಿತ್ ಆರ್ಯ ಬಿಲ್ಡ್ ಕೇರ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ,ಸಾರ್ವಿನ್ ಪ್ಲಾಸ್ಟ್

ಉಡುಪಿ ಪರ್ಯಾಯ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ

ಭಾರತೀಯ ಪರಂಪರೆ, ಮಾಧ್ವ ತತ್ವವನ್ನು ಜಗತ್ತಿಗೆ ಸಾರಿದ ಹಾಗೂ ಗೀತಾಸಾರವನ್ನು ವಿಶ್ವಕ್ಕೆ ಪಸರಿಸಲು ಕಾರಣವಾಗಿರುವ ಉಡುಪಿ ಅಷ್ಠಮಠಗಳ ಪೈಕಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಯವರ ಪರ್ಯಾಯ ಪೀಠಾರೋಹಣ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಹೊರೆಕಾಣಿಕೆಯನ್ನು ಮೆರವಣಿಗೆಯ ಮೂಲಕ ಮಠಕ್ಕೆ ಅಗಮಿಸಿತ್ತು. ಈ ಸಂದರ್ಭ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪಡುಬಿದ್ರಿ: ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶಕ್ಕೆ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಪಡುಬಿದ್ರಿ ಪೊಲೀಸರು ಪಲಿಮಾರಿನ ನಡಿಯೂರು ಕೊಪ್ಪಲ ರಸ್ತೆಯಲ್ಲಿ ವಶಕ್ಕೆ ಪಡೆದಿದ್ದಾರೆ.ಅಕ್ರಮ ಮರಳುಗಾರಿಕೆಯ ಬಗ್ಗೆ ಮಾಹಿತಿ ಪಡೆದ ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಸಿಬ್ಬಂದಿಗಳೊಂದಿಗೆ ನಂದಿಕೂರು ಪಲಿಮಾರು ರಸ್ತೆಯಾಗಿ ಪೊಲೀಸ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅವರಾಲು ಮಟ್ಟು ಕಡೆಯಿಂದ ಕುಂಜ್ಞಾಲಿ ತೋಟ ಸಣ್ಣ ಸೇತುವೆ ಬಳಿ ಕೆ.ಎಲ್. 60-ಎ.9937ನೋಂದಾನಿ ಸಂಖ್ಯೆಯ ಟಿಪ್ಪರೊಂದು ಪೊಲೀಸ್ ವಾಹನ ನೋಡಿ ಪಕ್ಕದ