Home Posts tagged #v4stream (Page 26)

ಫೆ. 12, ಅತಿರುದ್ರ ಮಹಾಯಾಗ ಪ್ರಯುಕ್ತ “ಸಮರ್ಪಣಾ ದಿವಸ” ಕಾರ್ಯಕ್ರಮ

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗ ಪ್ರಯುಕ್ತ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಮತ್ತು ಅತಿರುದ್ರ ಮಹಾಯಾಗ ಸಮಿತಿ ವತಿಯಿಂದ ಫೆಬ್ರವರಿ 12, 2023 ರ ಭಾನುವಾರದಂದು ಮಣಿಪಾಲ ಸರಳೇಬೆಟ್ಟುವಿನ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇಗುಲದ ಸನಿಹದಲ್ಲಿರುವ ಯಾಗ

ಫೆ.10ರಿಂದ 12ವರೆಗೆ ಪುತ್ತೂರಿನಲ್ಲಿ ಬೃಹತ್ ಕೃಷಿಯಂತ್ರ ಮೇಳ

ಪುತ್ತೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆವರಣದಲ್ಲಿ ಫೆಬ್ರವರಿ 10 ರಿಂದ 12 ರ ತನಕ 3 ದಿನಗಳ ಕಾಲ ನಡೆಯಲಿರುವ 5 ನೇ ಬೃಹತ್ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನಕ್ಕೆ ಎಲ್ಲಾ ಸಿದ್ದತೆಗಳು ಮುಕ್ತಾಯದ ಹಂತದಲ್ಲಿವೆ ಎಂದು ಕ್ಯಾಂಪೆÇ್ಕೀ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು

ಜೆಇಇ ಮೈನ್ ಪರೀಕ್ಷೆ : ಆಳ್ವಾಸ್ ಪಿ.ಯು ವಿದ್ಯಾರ್ಥಿಗಳಿಂದ ಸಾಧನೆ

ಮೂಡುಬಿದಿರೆ: ರಾಷ್ಟ್ರ ಮಟ್ಟದಲ್ಲಿ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಒಟ್ಟು 25 ಮಂದಿ 95 ಪರ್ಸೆಂಟೈಲ್‌ಗಿಂತ ಅಧಿಕ, 60 ಮಂದಿ 90 ಪರ್ಸೆಂಟೈಲ್‌ಗಿಂತ ಅಧಿಕ, ಹಾಗೂ 103 ಮಂದಿ 85 ಪರ್ಸೆಂಟೈಲ್‌ಗಿಂತ ಅಧಿಕ, ಫಲಿತಾಂಶ ಗಳಿಸಿದ್ದಾರೆ. ಶರತ್ ಸಂಗಮೆಶ್ ಬಿರದರ್ (99.23), ಪ್ರಧ್ಯುಮ್ನ ಭಟ್ (99.07), ಸಂಭವ್ ಪವರ್ (98.87),

ಕೇರಳಕ್ಕಿಂತ ಕಡಿಮೆ ದರದಲ್ಲಿ ಇಂಧನ ಸಿಗುತ್ತಿದೆ ಎಂಬ ಪ್ಲೆಕ್ಸ್ : ಕೇರಳದಲ್ಲಿ ಭಾರೀ ಪ್ರತಿಭಟನೆ

ಮಂಜೇಶ್ವರ: ಗಡಿಪ್ರದೇಶವಾದ ಕರ್ನಾಟಕ ಪೆಟ್ರೋಲ್ ಪಂಪ್ ಎದುರು ಹಾಕಿರುವ ಪ್ಲೆಕ್ಸ್ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇರಳಕ್ಕಿಂತ 8 ರೂಪಾಯಿ ಕಡಿಮೆ ದರದಲ್ಲಿ ಇಂಧನ ಸಿಗುತ್ತದೆ ಎಂಬುದಾಗಿ ಫಲಕ ಹಾಕಿರುವುದು ಇದೀಗ ವೈರಲಾಗುತ್ತಿದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಡೀಸೆಲ್ ದರ 8 ರೂ. ಹಾಗೂ ಪೆಟ್ರೋಲ್ 5 ರೂಪಾಯಿ ಕಡಿಮೆಯಾಗಿದೆ. ಕೇರಳ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಎರಡು ರೂಪಾಯಿ ಸೆಸ್ ಹೇರಲಾಗಿದೆ. ಇದು ಏಪ್ರಿಲ್ ನಿಂದ

ಫೆ. 11 ಮತ್ತು 12ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಪುರುಷ, ಮಹಿಳೆಯರ ಪವರ್‍ ಲಿಫ್ಟಿಂಗ್ ಸ್ಪರ್ಧೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆಯು ಫೆಬ್ರವರಿ 11 ಮತ್ತು 12ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಜರುಗಲಿದೆ ಎಂದು ದ.ಕ.ಜಿಲ್ಲಾ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಮಧುಚಂದ್ರ ತಿಳಿಸಿದರು. ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಮೇಯರ್ ಕಪ್ ಪ್ರಶಸ್ತಿ ಸ್ಪರ್ಧೆ ಮಂಗಳೂರು ಬಾಲಾಂಜನೇಯ

ಶ್ರೀ ಉಮಾಮಹೇಶ್ವರ ದೇವಸ್ಥಾನ : ಸಚಿವ ವಿ. ಸುನೀಲ್ ಕುಮಾರ್ ಅವರಿಂದ “ಅತಿರುದ್ರ ಮಹಾಯಾಗ”ದ ತಯಾರಿಗಳ ಪರಿಶೀಲನೆ

ಮಣಿಪಾಲ ಸರಳೆಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ಲೋಕಕಲ್ಯಾಣಕ್ಕಾಗಿ ನಡೆಯಲಿರುವ “ಅತಿರುದ್ರ ಮಹಾಯಾಗ” ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅತಿರುದ್ರ ಮಹಾಯಾಗಕ್ಕೆ ಸಾಕಷ್ಟು ತಯಾರಿಗಳು ಬಿಡುವಿಲ್ಲದೆ ನಡೆಯುತ್ತಿವೆ. ಈಗಾಗಲೇ ಉಡುಪಿ ತಾಲೂಕು ಮಟ್ಟದ ಪುಟಾಣಿಗಳ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಲು “ಶಿವ ಚಿತ್ತಾರ”

ಫೆ. 12, “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆ

ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್, ಶಿವಪಾಡಿ ಮತ್ತು ಅತಿರುದ್ರ ಮಹಾಯಾಗ ಸಮಿತಿ ವತಿಯಿಂದ ಶಿವಪಾಡಿಯಲ್ಲಿ ಶಿವೋತ್ಸವ. ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪುಟಾಣಿಗಳಿಗಾಗಿ “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆಯನ್ನು ಫೆಬ್ರವರಿ 12, 2023 ರ ಭಾನುವಾರದಂದು ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ

‘ಒಂದೊಳ್ಳೆ ಲವ್‍ಸ್ಟೋರಿ’ ಕನ್ನಡ ಸಿನಿಮಾ ಫೆ.17ರಂದು ಬಿಡುಗಡೆ

ಪಿನಕಿನ್ ಸಿನಿಮಾಸ್ ಬ್ಯಾನರ್‍ನಡಿ ನಿರ್ಮಿಸಿದ ಒಂದೊಳ್ಳೆ ಲವ್‍ಸ್ಟೋರಿ ಕನ್ನಡ ಸಿನಿಮಾ ಫೆ.17ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ಅಶ್ವಿನ್ ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಿಗ್‍ಬಾಸ್ ಖ್ಯಾತಿಯ ಧನುಶ್ರೀ ನಾಯಕಿಯಾಗಿದ್ದು, ನಿರಂಜನ್ ಬಾಬು, ಕೈಲಾಸ್‍ಪಾಲ್, ನಿಶಾ ಹೆಗಡೆ, ಬಿಂದೂಜ, ಕೆಎಸ್‍ಜಿ ವೆಂಕಟೇಶ್, ರೂಪಶ್ರೀ ವರ್ಕಾಡಿ, ಈ

ಬೆಂಗ್ರೆ ಫೆ .12ರಂದು ಸರ್ವೇ ನಂಬರ್ ಸಹಿತ ಹಕ್ಕುಪತ್ರ ವಿತರಣೆ

ಸರ್ವೇ ನಂಬರ್ ಹಗೂ ಖಾತಾ ನೀಡಬೇಕು ಎನ್ನುವ ಬೆಂಗ್ರೆ ಗ್ರಾಮದ ಸಾರ್ವಜನಿಕರ ಬಹುಕಲಾದ ಬೇಡಿಕೆಯನ್ನು ಶಾಸಕರಾದ ವೇದವ್ಯಾಸ ಕಾಮತ್ ಅವರು ಈಡೇರಿಸಿದ್ದು, ಫೆ.12ರಂದು ಸಂಜೆ 5 ಗಂಟೆಗೆ ಬೆಂಗ್ರೆ ಫೆರಿ ಪಾಯಿಂಟ್ ಬಳಿಯ ಮಹಾಜನ ಸಂಘದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಮನೆಯವರಿಗೆ ಸರ್ವೇ ನಂಬರ್ ಸಹಿತವಾದ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಕಾರ್ಪೋರೇಟರ್ ಸುನೀತಾ ತಿಳಿಸಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ

ವೀರ ರಾಣಿ ಅಬ್ಬಕ್ಕ ಉತ್ಸವಕ್ಕೆ ಸರ್ಕಾರದಿಂದ ಅನುದಾನ ಕಡಿತ : ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ : ಮಮತಾ ಗಟ್ಟಿ

ಪ್ರತೀ ವರ್ಷ 50 ಲಕ್ಷ ರೂ. ಅನುದಾನ ಮೀಸಲಿಟ್ಟು ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಕರಾವಳಿಯವರೇ ಆಗಿದ್ದರೂ ಕೇವಲ 10 ಲಕ್ಷ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಆರೋಪಿಸಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಣಿ ಅಬ್ಬಕ್ಕ ದೇಶಕ್ಕಾಗಿ ಹೋರಾಡಿದ