Breaking News

ಅದಾನಿ ಯುಪಿಸಿ‌ಎಲ್:ಪಲಿಮಾರುಗ್ರಾಮದಲ್ಲಿರೂ. 21.50 ಲಕ್ಷ ವೆಚ್ಚದಲ್ಲಿ‌ಅಭಿವೃದ್ಧಿ ಪಡಿಸಿದ ರಸ್ತೆ‌ಉದ್ಘಾಟನೆ

ಎಲ್ಲೂರು ಗ್ರಾಮದಲ್ಲಿ1200 ಮೆ.ವ್ಯಾ ವಿದ್ಯುತನ್ನು‌ಉತ್ಪಾದಿಸುತ್ತಿರುವ‌ಅದಾನಿ ಸಮೂಹದ‌ಉಡುಪಿ ಪವರ್‌ಕಾರ್ಪೋರೇಷನ್ ಸಂಸ್ಥೆಯಸಿ‌ಎಸ್‌ಆರ್ ಯೋಜನೆಯಡಿಯಲ್ಲಿಪಲಿಮಾರುಗ್ರಾಮದಲ್ಲಿ ನೂತನವಾಗಿ‌ಅಭಿವೃದ್ಧಿ ಪಡಿಸಿದ ಸುಮಾರು 1 ಕಿ.ಮೀ ಉದ್ದದ ರಸ್ತೆಯನ್ನು ಉದ್ಘಾಟಿಸಿಸಲಾಯಿತು.ರೂ. 21.50 ಲಕ್ಷ ವೆಚ್ಚದಲ್ಲಿ ನಂದಿಕೂರು ದುರ್ಗಾಪರಮೇಶ್ವರಿ ದೇವಾಸ್ಥಾನದಿಂದ ಪಲಿಮಾರು ಪೇಟೆಗೆ ಕೂಡುವರಸ್ತೆಯವರೆಗೆ ಅಭಿವೃದ್ಧಿ ಪಡಿಸಿದ ರಸ್ತೆಯನ್ನು ಅದಾನಿ ಯುಪಿಸಿ‌ಎಲ್ ಕಂಪನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹಾಗೂ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಫ಼ುಟ್ರಾಡೊ ಉದ್ಘಾಟಿಸಿದರು.ಉದ್ಘಾಟಿಸಿ ಮಾತನಾಡಿದ ಕಿಶೋರ್ ಆಳ್ವ ಅದಾನಿ ಯುಪಿಸಿ‌ಎಲ್ ಸಿ‌ಎಸ್‌ಆರ್ ಯೋಜನೆಯಡಿ ಪಲಿಮಾರುಗ್ರಾಮ ಪಂಚಾಯತ್‌ಗೆ ೩ ವರ್ಷದ‌ಅವಧಿಗೆ‌ಒಟ್ಟು ರೂ.೩ ಕೋಟಿ ಅನುದಾನ ನೀಡಿದ್ದು, ಪ್ರತಿ ವರ್ಷ ರೂ.೧ ಕೋಟಿಯಷ್ಟು ಅಭಿವೃದ್ಧಿಕಾಮಗಾರಿಯನ್ನು ಪಂಚಾಯತ್ ನೀಡಿರುವ ಕ್ರಿಯಾಯೋಜನೆ ಮೇರೆಗೆ ನಿರ್ವಹಿಸುತ್ತಿದೆ ಎಂದರು. ರೂ. ೩ ಕೋಟಿಯ ಸಿ‌ಎಸ್‌ಆರ್ ಅನುದಾನ ೨೦೧೭-೧೮ ನೇ ಸಾಲಿನಿಂದ ೩ ವರ್ಷಕ್ಕೆ ಘೋಷಿಸಿದ್ದರು, ೨೦೧೬-೧೭ ನೇ ಸಾಲಿನಲ್ಲಿಯೇ ಪಲಿಮಾರುಗ್ರಾಮದಲ್ಲಿ ಈಗಾಗಲೇ ಸುಮಾರು೬೦ ಲಕ್ಷದ೩ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿದ್ದು, ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಕಾಂಕ್ರೀಟೀಕರಣ ಮತ್ತು ಇಂದಿನ ರಸ್ತೆ‌ಉದ್ಘಾಟನೆಯಿಂದ ೨ ಕಾಮಗಾರಿಗಳು ಪೂರ್ಣಗೊಂಡಿದೆ. ಉಳಿದ ಒಂದು ಕಾಮಗಾರಿಯಾದ ಅಡ್ವೆ ನಂದಿಕೂರಿನ ಗರಡಿಯ ಪ್ರಾಂಗಣದ ಫ಼್ಲೋರಿಂಗ್ ಕಾಮಗಾರಿಗೆ ಗುತ್ತಿಗೆದಾರರನ್ನು ನೇಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ರೂ. ೨೧.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಈ ಮೆಟಲ್‌ರಸ್ತೆಗೆ ೨೦೧೭-೧೮ ನೇ ವಾರ್ಷಿಕ ಸಾಲಿನಲ್ಲಿ ಪಂಚಾಯತ್ ಕ್ರಿಯಾಯೋಜನೆ ಮೇರೆಗೆ ರಸ್ತೆಯ ಡಾಂಬರೀಕರಣ ಮಾಡಲಾಗುವುದು. ಅದಾನಿ ಯುಪಿಸಿ‌ಎಲ್ ಗ್ರಾಮೀಣ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಸಿ‌ಎಸ್‌ಆರ್ ಅನುದಾನ ಮೀಸಲಿಟ್ಟಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದುಯೋಗಪಡಿಸಲು ಗ್ರಾಮ ಪಂಚಾಯತ್ ನೀಡುವ ಕ್ರಿಯಾಯೋಜನೆ ಮೇರೆಗೆ‌ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ನಿರ್ವಹಿಸಲಾಗುವುದು ಎಂದು ತಿಳಿಸುತ್ತಾ, ೨೦೧೭-೧೮ನೇ ಸಾಲಿನಲ್ಲಿ ಪಲಿಮಾರುಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ವಹಿಸಬೇಕಾದ ಕಾಮಗಾರಿಗಳ ಪಟ್ಟಿ ಹಾಗೂ ಕ್ರಿಯಾಯೋಜನೆಯನ್ನು ಸಲ್ಲಿಸಲು ಆಳ್ವ ಅವರು ಪಂಚಾಯತ್ ಅಧ್ಯಕ್ಷರಲ್ಲಿ ಹಾಗೂ ಸದಸ್ಯರಲ್ಲಿ ಮನವಿ ಮಾಡಿದರು.ಮುಂಬರುವ ದಿನಗಳಲ್ಲಿ ಯುಪಿಸಿ‌ಎಲ್ ಸಾಮಜಿಕ ಅರಣ್ಯ ಯೋಜನೆಯಡಿ ಗ್ರಾಮ ಪಂಚಾಯತ್ ಸೂಚಿಸಿದ ಪ್ರದೇಶಗಳಲ್ಲಿ ಗಿಡಗಳನ್ನು ಹಸಿರು ಗ್ರಾಮ ಎಂಬ ಕಾರ್ಯಕ್ರಮದಡಿನೆಡಲಾಗುವುದು. ನೆಡಲಾದ ಗಿಡಗಳನ್ನು ಯುಪಿಸಿ‌ಎಲ್ ವತಿಯಿಂದ ಪೋಷಿಸಲಾಗುವುದು. ಉಡುಪಿ ತಾಲೂಕಿನ ಸುಮಾರು ೭೦ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಫ಼ಲ ನೀಡುವ ಸಸಿಗಳನ್ನು ವಿತರಿಸಲಾಗುವುದು. ತ್ಯಾಜ್ಯಾ ಸಂಗ್ರಹಣಕ್ಕೆ ಈಗಾಗಲೇ ಪಲಿಮಾರು ಪಂಚಾಯತಿಯ ಪ್ರಮುಖ ಸ್ಥಳಗಳಲ್ಲಿ ಕಸದತೊಟ್ಟಿಯನ್ನು ರಚಿಸಿದ್ದು, ಅದನ್ನು ವಿಲೇವಾರಿ ಮಾಡಲು ವಾಹನದ ವ್ಯವಸ್ಥೆ ಕಲ್ಪಿಸುವಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಆಳ್ವ ಹೇಳಿದರು.ಪಲಿಮಾರು ಪಂಚಾಯತಿ ಅಧ್ಯಕ್ಷ ಜಿತೇಂದ್ರ ಫ಼ುಟ್ರಾಡೋ ಅದಾನಿ ಯುಪಿಸಿ‌ಎಲ್ ಸಂಸ್ಥೆಯ ಸಮಾಜಮುಖಿ ಕೆಲಸಗಳಿಗೆ ಅಭಿನಂದನೆ ಸಲ್ಲಿಸಿದರು. ನಂದಿಕೂರು ದೇವಾಲಯದಿಂದ ಪಲಿಮಾರು ಗ್ರಾಮಕ್ಕೆ ಸಂಪರ್ಕಿಸುವ ಈ ರಸ್ತೆಯ ಅಭಿವೃದ್ಧಿಗೆ ಹಲವು ದಿನಗಳಿಂದ ಗ್ರಾಮಸ್ಥರಿಂದ ಬೇಡಿಕೆ ಇದ್ದು, ಅದನ್ನು ಅದಾನಿ ಯುಪಿಸಿ‌ಎಲ್ ಘೋಷಿಸಿದ ರೂ.೩ಕೋಟಿ ಅನುದಾನದಡಿ ಕೈಗೆತ್ತಿಕೊಳ್ಳಬೇಕೆಂದು ಪಂಚಾಯತ್ ವತಿಯಿಂದ ನಿರ್ಧರಿಸಿ ಕ್ರಿಯಾಯೋಜನೆ ತಯಾರಿಸಿ ಕಂಪನಿಗೆ ಹಸ್ತಾಂತರಿಸಿದ್ದು, ಈಗ ಕಂಪನಿ ಕೆಲಸ ನಿರ್ವಹಿಸಿ ಗ್ರಾಮಸ್ಥರಿಗೆ ಅರ್ಪಿಸಿದೆ ಎಂದರು.ಈ ರಸ್ತೆಯ ಅಭಿವೃದ್ಧಿಯಿಂದ ನಂದಿಕೂರು ಭಾಗದ ಗ್ರಾಮಸ್ಥರಿಗೆ ಪಲಿಮಾರು ಪೇಟೆಗೆ ಹೋಗಿಬರಲು ಅನುಕೂಲವಾಗಿದ್ದು, ಯುಪಿಸಿ‌ಎಲ್ ಕಂಪನಿಯು ಪಂಚಾಯತ್ ಹಾಗೂ ಗ್ರಾಮಸ್ಥರ ಮನವಿ ಸ್ಪಂದಿಸಿರುವು ಸ್ವಾಗತಿಸಿದರು.2017-18ನೇ ಸಾಲಿನ ಕ್ರಿಯಾಯೋಜನೆ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಕಾಮಗಾರಿಗಳ ಪಟ್ಟಿಯನ್ನು ಅದಾನಿ ಯುಪಿಸಿ‌ಎಲ್ ಕಂಪನಿಗೆ ನೀಡಲಾಗುವುದು ಎಂದು ಫ಼ುಟ್ರಾಡೋ ತಿಳಿಸಿದರು.ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್‌ಉಪಾಧ್ಯಕ್ಷೆ ಸುಮಂಗಲ ದೇವಾಡಿಗ, ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಕೋಟ್ಯಾನ್, ಅದಾನಿ ಯುಪಿಸಿ‌ಎಲ್ ಕಂಪನಿಯ ಏಜಿ‌ಎಂ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೇರೆ ಗೋಕುಲ್‌ದಾಸ್, ವಸಂತಕುಮಾರ್, ಪಂಚಾಯತ್ ಸದಸ್ಯರಾದ ಸತೀಶ್‌ದೇವಾಡಿಗ, ಗಾಯಿತ್ರಿ ಪ್ರಭು, ವಿಜಯ ಶೆಟ್ಟಿ, ಶಿವರಾಮ್ ಪೂಜಾರಿ, ಮಧುಕರ ಸುವರ್ಣ, ಜಯಂತಿ, ಸೌಮ್ಯ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್,ಅದಾನಿ ಫ಼ೌಂಡೇಶನ್‌ನ ಸಿಬ್ಬಂಧಿ ವರ್ಗದವರಾದ ವಿನೀತ್‌ಅಂಚನ್ ಮತ್ತು‌ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.

ವರದಿ-ಸುರೇಶ್ ಎರ್ಮಾಳ್

 

Related posts

Leave a Reply