
ವಿಟ್ಲ: ಎಲ್ಲರಂತೆ ಶಾಲೆಗೆ ಹೋಗಿ, ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂಬ ಉದ್ದೇಶ ಹೊಂದಿದ್ದ 16 ವರ್ಷದ ಬಾಲಕಿ ಕಳೆದ ಮೂರುವರೆ ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಈಕೆಯ ಚಿಂತೆಯಲ್ಲಿ ಹೆತ್ತವರು ಕಂಗಾಲಾಗಿದ್ದಾರೆ. ಈಕೆಯ ರೋಗ ಗುಣ ಪಡಿಸಲು ಹೆತ್ತವರಿಗೆ ಆರ್ಥಿಕ ಸಮಸ್ಯೆ ಅಡ್ಡಿಯಾಗಿದೆ.
ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಧರ್ಮನಗರ ನಿವಾಸಿ ವನರಾಜ ಆಚಾರ್ಯ ಅವರ ಪುತ್ರಿ ವರ್ಷಿಣಿ ಕಳೆದ ಮೂರುವರೆ ವರ್ಷಗಳಿಂದ ಹಾಸಿಗೆ ಹಿಡಿದು ಜೀವನ ನಡೆಸುತ್ತಿದ್ದಾಳೆ.
ವನರಾಜ ಆಚಾರ್ಯ ಅವರಿಗೆ ಇಬ್ಬರು ಮಕ್ಕಳಿದ್ದು, ಮೊದಲಿನವ ಗಂಡು ಹುಡುಗ ಒಂಭತ್ತನೇ ತರಗತಿ ಓದುತ್ತಿದ್ದಾನೆ. ವನರಾಜ ಆಚಾರ್ಯ ಅವರು ಕೂಡಾ ಅನಾರೋಗ್ಯ ಪೀಡಿತರಾಗಿದ್ದು, ಕೆಲಸ ಮಾಡಲಾಗದೇ ಸರಿಯಾಗಿ ಮಾತನಾಡಲಾಗದೇ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅವರ ಪತ್ನಿ ತನ್ನ ಕುಟುಂಬ ಭಾರವನ್ನು ನೋಡಬೇಕು. ಇದರಿಂದ ಈ ಕುಟುಂಬ ಮಾನಸಿಕವಾಗಿ ಮನನೊಂದಿದೆ. ಇದರ ನಡುವೆಯೂ ವರ್ಷಿಣಿ ಅನಾರೋಗ್ಯ ಪೀಡಿತರಾಗಿದ್ದು, ಈ ಕುಟುಂಬಕ್ಕೆ ಮತ್ತಷ್ಟು ನೋವು ಉಂಟು ಮಾಡಿದೆ.
ಮೂರುವರೆ ವರ್ಷಗಳ ಹಿಂದೆ ಅಂದರೆ ನಾಲ್ಕನೇ ತರಗತಿ ಕಲಿಯುತ್ತಿದ್ದ ವೇಳೆ ವರ್ಷಿಣಿ ಶಾಲೆ ಬಿಟ್ಟು ಮನೆಗೆ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಬಸ್ಸಿನೊಳಗಡೆಯೇ ಕುಸಿದು ಬಿದ್ದಿದ್ದಾಳೆ. ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಲಾಗಿದ್ದರೂ ಕೂಡಾ ಕೆಲ ಸಮಯಗಳ ಬಳಿಕ ಅನಾರೋಗ್ಯ ತೀವ್ರ ರೀತಿಯಲ್ಲಿ ಕಾಣಿಸಿಕೊಂಡಿದೆ. ಆಕೆಯ ಕೈ, ಕಾಲು ಸೇರಿದಂತೆ ಇಡೀ ದೇಹವೇ ನಡುಗುತ್ತಿದೆ. ಮಾತು ಬರುತ್ತಿಲ್ಲ. ಕೈ ಕಾಲುಗಳಿಗೆ ಬಲವಿಲ್ಲ. ತಾಯಿಯೇ ಚಮಚ ಮೂಲಕ ಊಟ ತಿಂಡಿ ತಿನ್ನಿಸಬೇಕು.
ಮಂಗಳೂರು ಪಡೀಲ್ ಫಸ್ಟ್ ನ್ಯೂರೋ, ವೆನ್ಲಾಕ್, ಬೆಂಗಳೂರು ಖಾಸಗಿ ಆಸ್ಪತ್ರೆ, ಸುಪರ್ ಸ್ಪೇಷಲಿಟ್ ಆಸ್ಪತ್ರೆ ಹೀಗೆ ಆಸ್ಪತ್ರೆಯಿಂದ ಆಸ್ಪತ್ಸೆಗೆ ಅಲೆದಾಡಿದ್ದು, ಬಿಟ್ಟರೆ ರೋಗ ಗುಣ ಪಡಿಸಲು ಅವರಿಗೆ ಆರ್ಥಿಕ ಸಮಸ್ಯೆ ಅಡ್ಡಿಯಾಗಿದೆ.
ಈಗಾಗಲೇ 15 ಲಕ್ಷಕ್ಕಿಂತಲೂ ಅಧಿಕ ಖರ್ಚ್ ಮಾಡಲಾಗಿದೆ. ವಿಟ್ಲ ಸುತ್ತಮುತ್ತಲಿನ ವಿವಿಧ ಸಂಘಸಂಸ್ಥೆಗಳು ಧನ ಸಹಾಯ ಮಾಡಿದ್ದಾರೆ. ಅದು ಆಕೆಯ ಪ್ರತಿನಿತ್ಯದ ಔಷಧಿಗೆ ಸಾಕಾಗಿದೆ. ವರ್ಷಿಣಿಯ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ವರ್ಷಿಣಿಗೆ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಆಗಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಪ್ರತಿತಿಂಗಳ ಔಷಧಿಗೆ 15 ಸಾವಿರ ರೂ. ಬೇಕು, ಆಕೆಗೆ ಹೆಚ್ಚಿನ ಚಿಕಿತ್ಸೆ ನೀಡಬೇಕಾದರೆ 5 ರಿಂದ 10 ಲಕ್ಷ ಅವಶ್ಯಕತೆ ಇದೆ. ಉತ್ತಮ ಆಸ್ಪತ್ರೆ ಸೇರಿಸಿ, ಚಿಕಿತ್ಸೆ ಒಳಪಡಿಸಿದರೆ ಆಕೆ ಮುಂದಿನಂತೆ ಆಗಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ. ಮೊದಲೇ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಇಷ್ಟೊಂದು ಹಣ ಎಲ್ಲಿಂದ ತರಬೇಕು ಎಂಬ ಚಿಂತೆಯಲ್ಲಿದೆ. ಯಾರದರೂ ದಾನಿಗಳು ಮುಂದೆ ಬಂದು ತನ್ನ ಮಗಳಿಗೆ ಸಹಾಯ ಮಾಡಿದರೆ ಆಕೆಯ ಮುಂದಿನ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗಬಹುದು ಎಂದು ಕುಟುಂಬಸ್ತರು ಮನವಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಸುಹಾನಾ ಎಂಬ ಬಾಲಕಿ ಶ್ವಾಸಕೋಶದಿಂದ ಬಳಲುತ್ತಿದ್ದ ವೇಳೆ ಪುತ್ತೂರಿನಿಂದ ಬೆಂಗಳೂರಿಗೆ ಝೀರೊ ಟ್ರಾಫಿಕ್ ಮೂಲಕ ತೆರಳಲು ಸಾವಿರಾರು ಮಂದಿ ಮುಂದೆ ಬಂದಿದ್ದರು. ಆಕೆಯ ಚಿಕಿತ್ಸೆಗೆ 40 ಲಕ್ಷ ರೂ. ಹಣ ಬೇಕಾಗುತ್ತದೆ ಇದನ್ನು ಸಂಗ್ರಹಿಸಲು ಹಲವು ಮಂದಿ ಶ್ರಮಿಸುತ್ತಿದ್ದಾರೆ. ಇನ್ನೂ ವರ್ಷಿಣಿಯ ಸಮಸ್ಯೆ ಅಷ್ಟೀನೂ ದೊಡ್ಡದೆನಲ್ಲ. ದಾನಿಗಳು ಮುಂದೆ ಬಂದರೆ ವರ್ಷಣಿಯ ಸಮಸ್ಯೆಯೂ ದೂರವಾಗಬಹುದು. ಎಂಬ ಮಾತುಗಳು ಕೇಳಿ ಬರುತ್ತಿದೆ.
A/c: 01412210016692
IFC: SYNB0000141
Name: varshini v
Syndicate bank vittal
Mob: 9741483040