Header Ads
Breaking News

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಾಲ್ವರಿಗೆ ಮಾಮ್ ಇನ್‍ಸ್ಪೈರ್ ಪ್ರಶಸ್ತಿ ಪ್ರಧಾನ ಸಮಾರಂಭ

ಮೂಡುಬಿದಿರೆ : ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳ ಗಂಗೋತ್ರಿ ವತಿಯಿಂದ ನಡೆದ 2018-19ನೇ ಸಾಲಿನ ಮಾಮ್ ಇನ್‍ಸ್ಪೈರ್ ಪ್ರಶಸ್ತಿ ಪ್ರಧಾನ ಸಮಾರಂಭವು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಎ.ಎಂ. ಖಾನ್ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ ರಚನಾತ್ಮಕ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರ ಕೊಡುಗೆ ಅತ್ಯಗತ್ಯ. ಉತ್ತಮ ಬರಹಗಾರನಾಗಲು ತಾಳ್ಮೆ ಅತೀ ಅಗತ್ಯ. ಪ್ರತಿಯೊಂದು ವಿಷಯದ ಕುರಿತು ಕೂಲಂಕುಷವಾಗಿ ಚಿಂತನೆ ನಡೆಸಿ, ತದನಂತರದಲ್ಲಿ ಆ ವಿಚಾರವನ್ನು ಬರಹದ ರೂಪದಲ್ಲಿ ಮಂಡಿಸಬೇಕು. ಆದರೆ ಆಧುನಿಕತೆಯ ಭರದಲ್ಲಿ ಸಾಗುತ್ತಿರುವ ಇಂದಿನ ಜಗತ್ತಿನಲ್ಲಿ ಯುವಜನಾಂಗ ಎಲ್ಲೋ ಹಳಿ ತಪ್ಪಿ ನಡೆಯುತ್ತಿದೆ. ಇಂತಹವರನ್ನು ಸರಿಯಾದ ದಾರಿಯಲ್ಲಿ ನಡೆಸಿ ಉತ್ತಮ ಸಮಾಜ ನಿರ್ಮಾಣ ಮಾಡುವುದು ಮಾಧ್ಯಮದ ಜವಬ್ದಾರಿ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಕುಚಿತ ಮನೋಭಾವನೆಯಿಂದ ದೂರವಿರಬೇಕು. ಆಗ ಮಾತ್ರ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಯಶಸ್ಸು ಸಾಧಿಸಲು ಸಾಧ್ಯ. ಸಂಕುಚಿತ ಮನೋಭಾವನೆ ನಮ್ಮಲ್ಲಿ ವಿಚಾರಗಳ ಗ್ರಹಿಕೆಗೆ ಅಡ್ಡಿಯಾಗುತ್ತವೆ ಎಂದರು.

ಮಾಮ್‍ನ ಅಧ್ಯಕ್ಷ ಸುರೇಶ್ ಪುದುವೆಟ್ಟು ಅಧ್ಯಕ್ಷತೆ ವಹಿಸಿದ್ದರು.

2018-19ನೇ ಸಾಲಿನ ಮಾಮ್ ಇನ್‍ಸ್ಪೈರ್ ಪ್ರಶಸ್ತಿಯು ಸ್ನಾತಕೋತ್ತರ ವಿಭಾಗದಲ್ಲಿ ಆಳ್ವಾಸ್ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಭಾ ಡೊಂಗ್ರೆ ಪ್ರಥಮ ಸ್ಥಾನ, ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‍ನ ಚೇತನಾ ನಾಯಕ್ ದ್ವಿತೀಯ ಸ್ಥಾನ, ಪದವಿ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಶ್ರೀಕಾಂತ್ ಪಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿರುವ ಆಳ್ವಾಸ್ ಕಾಲೇಜಿನ ಸೋನಿಯಾ ಎಸ್. ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಮಂಗಳೂರು ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರು ಹಾಗೂ ಮಾಮ್ ಪ್ರಶಸ್ತಿ ತೀರ್ಪುಗಾರರು ಡಾ. ಧನಂಜಯ ಕುಂಬ್ಳೆ ತೀರ್ಪುಗಾರರ ಹಿನ್ನಲೆಯಲ್ಲಿ ಮಾತನಾಡಿದರು. ಮಾಮ್ ಇನ್‍ಸ್ಪೈರ್ ಪ್ರಶಸ್ತಿಯ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಮ್ ಕಾಲೇಜಿನ ಗೌರವಾಧ್ಯಕ್ಷ ವೇಣು ಶರ್ಮ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *