
ಹೆದ್ದಾರಿ ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ಕಾನೂನು ಬಾಹಿರ ಅನಧಿಕೃತವಾಗಿ ಹೆದ್ದಾರಿ ಅಂಚಿನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವ್ಯಾಪಾರದಂಗಡಿಗಳನ್ನು ಕೆಲ ವ್ಯಾಪಾರಿಗಳ ವಿರೋಧದ ಮಧ್ಯೆಯೂ ಕಾಪು ಸರ್ಕಲ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್ಸೈ ದಿಲೀಪ್ ರಕ್ಷಣೆಯಲ್ಲಿ ತೆರವು ಕಾರ್ಯ ಯಶಸ್ವಿಯಾಗಿ ನಡೆದಿದೆ.
ಕಾನೂನು ಬಾಹಿರವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಕೆಲ ವ್ಯಾಪಾರಿಗಳಿಗೆ ಕಾಪುವಿನ ಕೊಳಕು ಜಾತಿ ರಾಜಕೀಯದ ಬಲ ಹಿಂಬಾಗದಿಂದ ಕೆಲಸ ಮಾಡಿದ ಪರಿಣಾಮ ಬಹಳಷ್ಟು ವರ್ಷಗಳಿಂದ ಈ ತೆರವು ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಇದೀಗ ಹೆದ್ದಾರಿ ಇಲಾಖೆಯ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಉನ್ನತ ಕಂದಾಯ ಅಧಿಕಾರಿಗಳ ಗೈರು ಹಾಜರಿಯ ಹೊರತಾಗಿಯೂ ಕಾಪು ಸರ್ಕಲ್ ಇನ್ಸ್ಪೆಕ್ಟರ್ ತಂಡ ದಿಟ್ಟವಾಗಿ ಕಾರ್ಯಚರಿಸಿದ ಪರಿಣಾಮ ಬಹುತೇಕ ತೆರವು ಕಾರ್ಯ ಮುಗಿದಿದ್ದು ಒಂದು ದಿನದ ವಿರಾಮದ ಬಳಿಕ ಮತ್ತೆ ತೆರವು ಕಾರ್ಯ ಮುಂದುವರಿಯಲಿದೆ ಎಂಬುದಾಗಿ ಹೆದ್ದಾರಿ ಇಲಾಖಾ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.ಉಡುಪಿಯಿಂದ ಹೆಜಮಾಡಿಯವರಗೆ ಅದೆಷ್ಟೋ ಪರಿಹಾರ ಪಡೆದುಕೊಂಡ ಕಟ್ಟಡಗಳನ್ನು ಅದರ ಹಳೆಯ ಮಾಲಿಕರು ಬಾಡಿಗೆ ನೀಡಿ ಅಕ್ರಮ ಸಂಪಾದನೆ ಮಾಡುತ್ತಿದ್ದು, ಆ ಕಟ್ಟಡಗಳು ಹೆದ್ದಾರಿ ಅಂಚಿನಲ್ಲೇ ಇರುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದ್ದು ಇಂಥವುಗಳನ್ನು ಹಾಗೂ ಟೋಲ್ ಪಕ್ಕದಲ್ಲೇ ಕಾನೂನು ಬಾಹಿರವಾಗಿ ಕಾರ್ಯಚರಿಸುತ್ತಿರುವ ಗೂಡಂಗಡಿಗಳು ಹೆದ್ದಾರಿ ಇಲಾಖೆಯ ಗಮನಕ್ಕೆ ಬಂದಿಲ್ಲವೇ ಇದನ್ನು ಕೂಡಾ ತಕ್ಷಣ ತೆರವುಗೊಳಿಸುವಂತೆ ಜನ ಒತ್ತಾಯಿಸಿದ್ದಾರೆ.