Header Ads
Breaking News

ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ : ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆಬಲಿ ಉತ್ಸವ

ಮಂಗಳೂರಿನ ಬೋಳೂರಿನ ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆ ವಿಜ್ರಂಭಣೆಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಶ್ರೀ ಕ್ಷೇತ್ರದಲ್ಲಿ ಮಾರ್ಚ್ 9ರಿಂದ 10ರ ವರೆಗೆ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಮಾರ್ಚ್ 10ರಂದು ಸರ್ವಾಂಕಲಾರ ಪೂಜೆ, ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆ ಬಲಿ, ಮಡೆಸ್ತಾನ, ಕಂಚಿಲ್ ಸೇವೆ ನಡೆಯಿತು.ಆ ಬಳಿಕ ಶ್ರೀ ದೇವಿಯ ಗರ್ಭಗುಡಿ ಪ್ರವೇಶ ನಡೆಯಿತು. ರಾತ್ರಿ ನೈವೇದ್ಯ ಬಲಿ, ಮಹಾರಾಶಿ ಪೂಜೆ ನಡೆಸವು. ಆನಂತರ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆಬಲಿ, ಮಡೆಸ್ತಾನ, ಕಂಚಿಲ್‍ಸೇವೆ, ರಥೋತ್ಸವ, ತುಲಾಭಾರ, ಪ್ರಸಾದ ವಿತರಣೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಭಕ್ತ ಸಮೂಹ ಪಾಲ್ಗೊಂಡು ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಿದರು. ಇದೇ ವೇಳೆ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತಿತರರು ಉಪಸ್ತಿತರಿದ್ದರು.

Related posts

Leave a Reply

Your email address will not be published. Required fields are marked *