Header Ads
Breaking News

ಕಡಬ : ರಕ್ಷಿತಾರಣ್ಯದಲ್ಲಿ ಮರ ಕಳ್ಳತನ ಪ್ರಕರಣ-ದೂರುದಾರ ವ್ಯಕ್ತಿಯ ಮನೆಗೆ ದಾಳಿ

ಅರಣ್ಯ ರಕ್ಷಿಸಲು ಹೊರಟ ವ್ಯಕ್ತಿಯ ಮನೆಗೇ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಎಂಬಲ್ಲಿ ನಡೆದಿದೆ. ಬಿಳಿನೆಲೆ ರಕ್ಷಿತಾರಣ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮರಗಳನ್ನು ಕಡಿದು ಸಾಗಾಟ ನಡೆಸಲಾಗುತ್ತಿದೆ ಎಂದು ಐತೂರು ನಿವಾಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ಮರ ಸಾಗಾಟದ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ನಡುವೆ ಇದೀಗ ಏಕಾಏಕಿ ದೂರುದಾರ ವ್ಯಕ್ತಿಯ ಮನೆಗೆ ದಾಳಿ ನಡೆಸಲಾಗಿದ್ದು, ಮನೆಯ ಮೇಲ್ಫಾವಣಿಗೆ 30 ವರ್ಷದ ಹಿಂದೆ ಹಾಕಲಾಗಿದ್ದ ಮರದ ಹಲಗೆಗಳನ್ನು ಸೀಜ್ ಮಾಡುವ ನಾಟಕ ಮಾಡಲಾಗಿದೆ.
ಅಧಿಕಾರಿಗಳ ವಿರುದ್ಧ ದೂರು ನೀಡಿದಲ್ಲಿ ದೂರುದಾರನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುವಂತಹ ಘಟನೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಎಂಬಲ್ಲಿ ನಡೆದಿದೆ. ಅಲ್ಲದೆ ಸಾಮಾನ್ಯವಾಗಿ ಕೃಷಿಕರ ಮನೆಯಲ್ಲಿ ಇರುವಂತಹ ಮರ ತುಂಡರಿಸುವ ಸಣ್ಣ ಯಂತ್ರವನ್ನೂ ವಶಕ್ಕೆ ಪಡೆದುಕೊಂಡಿದೆ. ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರಸಾದ್ ವಿರುದ್ಧ ತಮ್ಮ ಹಗೆಯನ್ನು ಹೊರಹಾಕುತ್ತಿರುವುದು ದಾಳಿಯ ವಿಡಿಯೋದಲ್ಲಿ ಸೆರೆಯಾಗಿದೆ. ಅರಣ್ಯದಲ್ಲಿ ಮರ ಕಳ್ಳತನವಾಗುತ್ತಿರುವ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ್ದ ವ್ಯಕ್ತಿಯನ್ನೇ ಮರದ ಕಳ್ಳತನದಲ್ಲಿ ಸಿಲುಕಿಸುವ ಯತ್ನ ಈ ದಾಳಿಯ ಹಿಂದಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

Related posts

Leave a Reply

Your email address will not be published. Required fields are marked *