Header Ads
Header Ads
Breaking News

ಕನಸು ಚಲನಚಿತ್ರದ ನಿದೇರ್ಶಕ ಸಂತೋಷ್ ಶೆಟ್ಟಿ ಮೃತ್ಯು

ಮಂಗಳೂರಿನ ಮಹಾಮಳೆಗೆ ಮತ್ತೊಂದು ಬಲಿಯಾಗಿದೆ. ’ಕನಸು’ ಚಲನಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಎರ್ಮಾಯ್ ಫಾಲ್ಸ್‌ನಲ್ಲಿ ನೀರುಪಾಲಾಗಿದ್ದಾರೆ.ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನಲ್ಲಿರುವ ಎರ್ಮಾಯ್ ಫಾಲ್ಸ್‌ಗೆ ಸಂತೋಷ್ ಶೆಟ್ಟಿ ಸೇರಿ ಐದು ಜನ ಫೋಟೋ ಶೂಟ್‌ಗೆ ತೆರಳಿದ್ದರು. ಒಮ್ಮೆಲೇ ನೀರಿನ ಹರಿವು ಹೆಚ್ಚಾಗಿ ಸಂತೋಷ್ ನೀರಿಗೆ ಜಾರಿದ್ದಾರೆ. ಕಾಲಿಗೆ ಭಾರ ಕಟ್ಟಿಕೊಂಡಿದ್ದ ಸಂತೋಷ್ ಫಾಲ್ಸ್ ಬಳಿ ನಟನೆ ನಿರತರಾಗಿದ್ದರು. ಜಾಕೆಟ್ ಹಾಕಿಕೊಂಡಿದ್ದರು. ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಕಾಲಿಗೆ ಮೂರುವರೆ ಕೆಜಿಯಷ್ಟು ಭಾರದ ರೋಬಾಟ್‌ನಂಥ ವಸ್ತು ಕಟ್ಟಿಕೊಂಡಿದ್ದೇ ಬೀಳಲು ಕಾರಣ ಎನ್ನಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ.

Related posts

Leave a Reply