Header Ads
Breaking News

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಡೋಲ್ಫಿ ರೇಗೋ ನಿಧನ

ಪುತ್ತೂರು: ಪುತ್ತೂರು ಪುರಸಭೆಯ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಇಲ್ಲಿನ ಪಾಂಗ್ಲಾಯಿ ನಿವಾಸಿ ದಿ.ಅಲೆಕ್ಸ್ ರೇಗೋ ಹಾಗೂ ದಿ.ಪಾವ್ಲಿನ್ ರೇಗೋರವರ ಪುತ್ರ ಡೋಲ್ಫಿ ಎ.ರೇಗೋ(63ವ.)ರವರು ಹೃದಯಾಘಾತದಿಂದ ನ.6 ರಂದು ದರ್ಬೆ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ನಿಧನರಾದರು.

ಮೃತ ಡೋಲ್ಫಿ ರೇಗೋರವರು ಸಂಜೆ ಪಾಂಗ್ಲಾಯಿಯ ತನ್ನ ಮನೆಯಲ್ಲಿದ್ದ ಸಂದರ್ಭ ಹಠಾತ್ತನೆ ಎದೆ ನೋವು ಕಾಣಿಸಿದ್ದು, ಕೂಡಲೇ ಅವರನ್ನು ದರ್ಬೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತ ಡೋಲ್ಫಿ ರೇಗೋರವರು ಪಾಂಗ್ಲಾಯಿಗೆ ತೆರಳುವ ಮೊದಲು ದರ್ಬೆ ರೇಗೋ ಕಾಂಪ್ಲೆಕ್ಸ್ ನಲ್ಲಿ ವಾಸ್ತವ್ಯ ಹೊಂದಿದ್ದರು. ಡೋಲ್ಫಿ ರೇಗೋರವರು ಪುತ್ತೂರು ಪುರಸಭೆಯಲ್ಲಿ ಎರಡು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಪಾಲನಾ ಸಮಿತಿಯಲ್ಲಿ ಎರಡು ಅವಧಿಗೆ ಉಪಾಧ್ಯಕ್ಷರಾಗಿ, ಡೋನ್ ಬೋಸ್ಕೊ ಕ್ಲಬ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಡೋಲ್ಫಿ ರೇಗೋರವರು ಓರ್ವ ಉತ್ತಮ ಲೆದರ್ ಬಾಲ್ ಕ್ರಿಕೆಟ್ ಆಟಗಾರರಾಗಿದ್ದು ಪುತ್ತೂರು ಕೋಲ್ಟ್ಸ್ ಕ್ಲಬ್ ನಲ್ಲಿ ಡೋಲ್ಫಿ ರೇಗೋರವರು ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಲೀನಾ ರೆಬೆಲ್ಲೊ, ಪುತ್ರಿ ಜಾಕ್ಲಿನ್ ಕ್ರಿಸ್ಟಲ್, ಪುತ್ರ ಡ್ಯಾಲನ್, ಸಹೋದರ ಹೆಕ್ಟರ್ ರೇಗೋ ಸೂರತ್, ಸಹೋದರಿ ಹೆರಿಯಟ್ ಬಾಂಬೆ, ಐವಿ ಬಾಂಬೆರವರನ್ನು ಅಗಲಿದ್ದಾರೆ.

Related posts

Leave a Reply

Your email address will not be published. Required fields are marked *