Header Ads
Breaking News

ಕುಂದಾಪುರದಲ್ಲಿ ಪಾಕ್ ಪರ ಘೋಷಣೆ : ವಿಚಾರಣೆ ನಡೆಸುತ್ತಿರುವ ಪೊಲೀಸರು

ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕುಂದಾಪುರ ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಕುಂದಾಪುರದ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ(43) ಎಂದು ಗುರುತಿಸಲಾಗಿದೆ. ಈತ ಕುಂದಾಪುರ ಮಿನಿ ವಿಧಾನಸೌಧದ ಎದುರು ನಿರಂತರವಾಗಿ ಪಾಕಿಸ್ತಾನ ಝಿಂದಾಬಾದ್ ಕೂಗುತ್ತಿರುವ ವೀಡಿಯೋ ವೈರಲ್ ಆಗಿದೆ.ಈ ಬಗ್ಗೆ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಕುಂದಾಪುರ ಪೊಲೀಸ್ ರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಘವೇಂದ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿರುವುದಾಗಿ ಪೊಲೀಸ್ ರು ಮಾಹಿತಿ ನೀಡಿದ್ದಾರೆ. ಎಂಟು ವರ್ಷಗಳ ಹಿಂದೆ ಶಿಕ್ಷಕನಾಗಿದ್ದ ರಾಘವೇಂದ್ರ ಬಳಿಕ ಮಾನಸಿಕ ಅಸ್ವಸ್ಥತೆಯ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದನೆನ್ನಲಾಗಿದೆ. ಇಂದು ಕೂಡಾ ತಾಯಿ ಜೊತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಈತ ತಾಯಿಯ ಕಣ್ತಪ್ಪಿಸಿ ಅಲ್ಲಿಂದ ಮಿನಿ ವಿಧಾನಸೌಧಕ್ಕೆ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

ಮಿನಿ ವಿಧಾನಸೌಧದ ಆವರಣದಿಂದ ಪೊಲೀಸ್ ರು ವಶಕ್ಕೆ ಪಡೆದು ಕೊಂಡೊಯ್ಯುತ್ತಿದ್ದ ವೇಳೆ ಕೂಡಾ ರಾಘವೇಂದ್ರ ಪಾಕ್ ಪರ ಘೋಷಣೆ ಕೂಗುತ್ತಲೇ ಇರುವುದು ವೀಡಿಯೊದಲ್ಲಿ ದಾಖಲಾಗಿದೆ.

Related posts

Leave a Reply

Your email address will not be published. Required fields are marked *