Header Ads
Header Ads
Breaking News

ಕುವೈಟ್‌ನ ಪ್ರಕರಣಕ್ಕೂ ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್‌ಗೂ ಯಾವುದೇ ಸಂಬಂಧವಿಲ್ಲ: ಪ್ರಸಾದ್ ಶೆಟ್ಟಿ

ಕುವೈಟ್‍ಗೆ ಉದ್ಯೋಗಕ್ಕೆಂದು ತೆರಳಿ ಅಲ್ಲಿ ಕರಾವಳಿಯ ಸುಮಾರು 35 ಮಂದಿ ಯುವಕರು ಸಂಕಷ್ಟಕ್ಕೀಡಾದ ಘಟನೆಗೂ ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಮ್ಯಾನ್‍ಪವರ್ ಕನ್ಸಲ್ಟೆನ್ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಣಿಕ್ಯ ಅಸೋಸಿಯೇಟ್ಸ್ ಮ್ಯಾನ್‍ಪವರ್ ಕನ್ಸಲ್ಟೆನ್ಸಿಯ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಣಿಕ್ಯ ಅಸೊಸಿಯೇಟ್ಸ್ ಸಂಸ್ಥೆಯು 58 ಜನರನ್ನು ಉದ್ಯೋಗ ನಿಮಿತ್ತ ಮುಂಬೈನ ಹಾಕ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್‍ಗೆ ಕಳುಹಿಸಿಕೊಟ್ಟಿತ್ತು. ಆ ಸಂಸ್ಥೆಯು ಈ 58 ಜನರಿಗೆ ಕುವೈಟ್‍ನ ಆಸ್ಪೆಕ್ಟ್ ಪೆಟ್ರೋಲಿಯಂ ಸರ್ವೀಸಸ್ ಕಂಪನಿಯಲ್ಲಿ ವ್ಯವಸ್ಥೆ ಮಾಡಿತ್ತು. ಇಲ್ಲಿ ಕುವೈಟ್‍ನ ಆಸ್ಪೆಕ್ಟ್ ಪೆಟ್ರೋಲಿಯಂ ಸರ್ವೀಸಸ್ ಕಂಪನಿಗೂ ಮಾಣಿಕ್ಯ ಅಸೋಸಿಯೇಟ್ಸ್‍ಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಮಾಣಿಕ್ಯ ಅಸೋಸಿಯೇಟ್ಸ್ ಕೇವಲ ಒಂದು ಕೊಂಡಿಯಾಗಿ ಕೆಲಸ ಮಾಡಿದೆ. ಆದರೂ ಸಂಸ್ಥೆಯ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಅಪಪ್ರಚಾರ ನಡೆಯುತ್ತಿದೆ. ಆದರೂ ಮಾನವೀಯತೆಯ ದೃಷ್ಟಿಯಿಂದ ಈ ಪ್ರಕರಣದಲ್ಲಿ ಸಂತ್ರಸ್ತರೆಂದು ಎನ್ನಲಾದ 35 ಮಂದಿಯನ್ನು ಭಾರತಕ್ಕೆ ಕರೆತರಲು ಏನು ಸಹಾಯ ಮಾಡಲು ತಯಾರಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾನೂನು ಸಲಹೆಗಾರರಾದ ಪುರಂದರ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಸಲಹೆಗಾರ ನವೀನ್ ಜೊತೆಗಿದ್ದರು.

Related posts

Leave a Reply

Your email address will not be published. Required fields are marked *