Header Ads
Breaking News

ಕೇರಳ ರಾಜ್ಯದಲ್ಲಿ 29 ಮಂದಿಗೆ ಕೊರೊನಾ ಸೋಂಕು ದೃಢ

ಕಾಸರಗೋಡು ಜಿಲ್ಲೆಯ ಇಬ್ಬರನ್ನೊಳಗೊಂಡಂತೆ ಕೇರಳ ರಾಜ್ಯದಲ್ಲಿ ಸೋಮವಾರ 29 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಅವರಲ್ಲಿ 21 ಮಂದಿ ವಿದೇಶದಿಂದ, 7 ಮಂದಿ ಇತರ ರಾಜ್ಯಗಳಿಂದ ಬಂದವರು. ಕಣ್ಣೂರಿನ ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.

ಕೊಲ್ಲಂ-6, ತೃಶ್ಶೂರ್-4, ತಿರುವನಂತಪುರ, ಕಣ್ಣೂರು-3, ಪತ್ತನಂತಿಟ್ಟ, ಆಲಪ್ಪುಳ, ಕೋಟ್ಟಯಂ, ಕೋಯಿಕ್ಕೋಡ್, ಕಾಸರಗೋಡು ಜಿಲ್ಲೆಗಳಲ್ಲಿ ತಲಾ 2, ಎರ್ನಾಕುಳಂ, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಸೋಂಕು ಬಾಧಿಸಿದೆ.ಜಿಲ್ಲೆಯಲ್ಲಿ ಸೋಂಕು ಬಾಧಿತ?ರಾದವರು ಪೈವಳಿಕೆ ನಿವಾಸಿಗಳಾದ 28 ವರ್ಷ ಪ್ರಾಯದ ಯುವಕರು. ಅವರು ಮುಂಬಯಿಯಿಂದ ಮೇ 15ರಂದು ಊರಿಗೆ ಬಂದು ಸರಕಾರಿ ಕ್ವಾರಂಟೈನ್‍ಗೆ ದಾಖಲಾಗಿದ್ದರು. ಈಗ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ರಾಮದಾಸ್ ತಿಳಿಸಿದರು.

Related posts

Leave a Reply

Your email address will not be published. Required fields are marked *