Breaking News

ಚಿಂತಾಜನಕಾವಸ್ಥೆಯಲ್ಲಿದ್ದ ಬಾಲಕಿಯನ್ನು ಕೊಂಡೊಯ್ಯುತಿದ್ದ ಕಾರು ಹೆದ್ದಾರಿ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಪಿಕ್ ಅಪ್ ಗೆ ಡಿಕ್ಕಿ

ಮಂಜೇಶ್ವರ ತಲೆಗೆ ಕಬ್ಬಿಣದ ಸರಳೊಂದು ನುಗ್ಗಿ ಚಿಂತಾಜನಕವಾಸ್ಥೆಯಲ್ಲಿದ್ದ ಬಾಲಕಿಯನ್ನು ಕೊಂಡೊಯ್ಯುತಿದ್ದ ಸ್ವಿಫ್ಟ್ ಕಾರೊಂದು ಹೆದ್ದಾರಿ ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಪಿಕ್ ಅಪ್ ವೊಂದಕ್ಕೆ ಡಿಕ್ಕಿ ಹೊಡೆದು ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಸಲಫೀ ಮಸೀದಿ ಪರಿಸರದಲ್ಲಿ ಈ ದುರ್ಘಟನೆ ಸಂಭವಿಸಿದೆ.ಮೊರತ್ತಣೆ ನಿವಾಸಿ ಹನೀಫ ಎಂಬವರ ಪುತ್ರಿ ಅಸ್ನಾ (9) ಎಂಬಾಕೆಗೆ ಮನೆ ಪರಿಸರದಲ್ಲಿ ಕಬ್ಬಿಣದ ಸರಳೊಂದು ತಲೆ ಭಾಗಕ್ಕೆ ನುಗ್ಗಿ ಗಾಯಗೊಂಡಿದ್ದಳು. ಈಕೆಯನ್ನು ಕೊಂಡೊಯ್ಯುತಿದ್ದ ಕಾರು ಅಪಘಾತಕ್ಕೀಡಾಗಿದೆ. ಕುಂಜತ್ತೂರು ಸಲಫೀ ಮಸೀದಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಫರ್ನೀಚರ್ ಅಂಗಡಿಯೊಂದರ ಮಾಲಕನ ಪಿಕ್ ಅಪ್ ವಾಹನವನ್ನು ಅಂಗಡಿಯ ಮುಂಬಾಗದ ರಾಷ್ಟ್ರೀಯ ಹೆದ್ದಾರಿ ಮಧ್ಯೆ ನಿಲ್ಲಿಸಲಾಗಿತ್ತೆಂದು ಅಪಘಾತಕ್ಕೀಡಾದ ಕಾರು ಚಾಲಕ ದೂರಿದ್ದಾನೆ. ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿದೆ ಕಾರಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ಹೇಳಲಾಗಿದೆ. ಚಿಂತಾಜನಕಾವಸ್ಥೆಯಲ್ಲಿದ್ದ ಬಾಲಕಿಯನ್ನು ಬೇರೊಂದು ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Related posts

Leave a Reply