Header Ads
Breaking News

ಚಿತ್ಪಾಡಿಯ ಮಜಲ ಕೆರೆ ಅಭಿವೃದ್ಧಿ ಪಡಿಸಲು ಆಗ್ರಹ : ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಒತ್ತಾಯ

ನಗರಸಭೆ ವ್ಯಾಪ್ತಿಯ, 76 ಬಡಗುಬೆಟ್ಟು ಗ್ರಾಮದಲ್ಲಿರುವ ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಪುರಾತನವಾದ ‘ಮಜಲ ಕೆರೆ’ ಇದರ ಬಾಕಿ ಉಳಿಸಿರುವ, ಕಾಮಗಾರಿಯನ್ನು ಪೂರ್ಣಗೊಳಸಬೇಕೆಂದು, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಗ್ರಹಿಸಿದೆ.

ಬಡಗುಬೆಟ್ಟು ಗ್ರಾಮದ ಸರ್ವೆ ನಂ-37/8 ರ ಚಿಟ್ಪಾಡಿಯ ಲೋಕಯ್ಯ ಶೆಟ್ಟಿ ಕಂಪೌಂಡ್ ಬಳಿ 0.38 ಎಕ್ರೆ ಸ್ಥಳದಲ್ಲಿ ಮಜಲ ಕೆರೆ ಆವರಿಸಿಕೊಂಡಿದೆ. ಇಲ್ಲಿ ನೀರು ಸಂಗ್ರಹ ಇರುವುದರಿಂದ ಪರಿಸರದ ಬಾವಿಗಳಲ್ಲಿ ಅಂತರ್ಜಲ ಉಳಿಯುತ್ತೀದೆ. ಈ ಕೆರೆಯನ್ನು 2017 ರಲ್ಲಿ ಸರಕಾರಿ ಕೆರೆಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಪಾರ್ಶ್ವದಲ್ಲಿ ಮಾತ್ರ ತಡೆಗೊಡೆ, ಕಂಪೌಂಡು ಕಾಮಗಾರಿ ನಡೆದಿದೆ. ಇನ್ನೊಂದು ಪಾರ್ಶ್ವದಲ್ಲಿ ತಡೆಗೊಡೆ, ಕಂಪೌಂಡು ಕಟ್ಟುವ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇಲ್ಲಿ ಕೆರೆ ಒತ್ತುವರಿ ಆಗಬಹುದೆಂಬ ಆತಂಕ ಜನರದಾಗಿದೆ. ಜಿಲ್ಲಾಡಳಿತವು ಆದಷ್ಟುಬೇಗ ಮಜಲ ಕೆರೆಯ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಮಾಡಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಆಗ್ರಹಿಸಿದೆ.

ಕುಡಿಯಲು ಯೋಗ್ಯವಾಗಿದ್ದ ಮಜಲ ಕೆರೆಯ ನೀರು ಚರಂಡಿಯ ತ್ಯಾಜ್ಯ ನೀರು ಕೆರೆಯನ್ನು ಸೇರುವುದರಿಂದ ಈಗ ನೀರು ಕಲುಸಿತಗೊಂಡಿದೆ. ಕೆರೆಯ ದಂಡೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಸಾರ್ವಜನಿಕರಿಗೆ, ಜಾನುವಾರು, ಶಾಲಾ ಮಕ್ಕಳಿಗೆ ಸಂಚಾರಕ್ಕೂ ಅಪಾಯದ ಸ್ಥಿತಿ ಇಲ್ಲಿ ಎದುರಾಗಿದೆ. ಈ ಕೆರೆಯು ಮಳೆಗಾಲದಲ್ಲಿ ತುಂಬಿ, ಇಂದ್ರಾಣಿ ನದಿಗೆ ಹರಿಯುತ್ತದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಸಮಸ್ಯೆ ಪರಿಶೀಲಿಸಿದರೆ ಸತ್ಯಾಂಶವು ತಿಳಿದು ಬರುತ್ತದೆ.

Related posts

Leave a Reply

Your email address will not be published. Required fields are marked *