Header Ads
Header Ads
Breaking News

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ವರ್ತನೆಯನ್ನು ಖಂಡಿಸಿ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಮೂಡುಬಿದಿರೆ : ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ನಿಂದಿಸಿ ಬಂಧಿಸಲು ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಒತ್ತಡ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ವರ್ತನೆಯನ್ನು ಖಂಡಿಸಿ ವಿ.ಹಿಂ.ಪ ಮತ್ತು ಬಜರಂಗದಳ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಹಿಂಪ ಮುಖಂಡ ಶ್ಯಾಮ ಹೆಗ್ಡೆ ಅರಣ್ಯ ಸಚಿವರಾಗಿರುವ ರಮನಾಥ ರೈ ಅವರು ಅರಣ್ಯ ಮೃಗಗಳಿಗಿಂತಲೂ ಕೀಳು ವರ್ತನೆ ತೋರಿದ್ದಾರೆ. ಜಿಲ್ಲೆಯಲ್ಲಿ ಕೋಮು ಸೌಹಾರ್ದವನ್ನು ಕಾಪಾಡಬೇಕಾದ ಹೊಣೆಗಾರಿಕೆ ಇರುವ ಸಚಿವರೇ ಕೋಮು ಗಲಭೆಗೆ ಪ್ರಚೋಧನೆ ನೀಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರ ಇಂತಹ ಮನಸ್ಥಿತಿಯಿಂದಾಗಿಯೇ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಳುಗು ಹಡಗಿನಂತ್ತಾಗಿದ್ದು ಕಾಂಗ್ರೆಸ್‌ನ ಶವ ಪೆಟ್ಟಿಗೆಗೆ ರಮಾನಾಥ ರೈ ಕೊನೆಯ ಮೊಳೆ ಹೊಡೆಯುತ್ತಿದ್ದಾರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಆದ ಸ್ಥಿತಿಯೇ ಜಿಲ್ಲೆಯಲ್ಲೂ ಮರುಕಳಿಸಲಿದೆ ಎಂದು ಹೇಳಿದರು.ನ್ಯಾಯವಾದಿ ಕೆ.ಆರ್ ಪಂಡಿತ್ ಮಾತನಾಡಿ ದ.ಕ ಜಿಲ್ಲೆಯ ಜನ ಸುಸಂಸ್ಕೃತರು ಅದರೆ ರಮಾನಾಥ ರೈ ಅವರು ಸಂಸ್ಕೃತಿ ಹೀನರಂತೆ ವರ್ತಿಸಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಲು ಸಾಧ್ಯವಿಲ್ಲ ಅಂತಹ ದುಸ್ಸಹಾಸಕ್ಕೆ ಕೈ ಹಾಕಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಿದರು.ಮುಖಂಡರಾದ ಕೆ.ಪಿ ಜಗದೀಶ ಅಧಿಕಾರಿ, ಬಾಹುಬಲಿ ಪ್ರಸಾದ್, ನಾಗರಾಜ ಪೂಜಾರಿ, ವಾಸುದೇವ ಭಟ್, ಬೆಳುವಾಯಿ ಭಾಸ್ಕರ ಆಚಾರ್ಯ, ಶ್ರೀನಾಥ್ ಸುವರ್ಣ, ಭರತ್ ಶೆಟ್ಟಿ, ಸಮಿತ್‌ರಾಜ್ ದರೆಗುಡ್ಡೆ, ಸೋಮನಾಥ್ ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ ಮತ್ತಿತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Related posts

Leave a Reply