Header Ads
Breaking News

ದ.ಕ ಜಿಲ್ಲೆಯಿಂದ ಕೇರಳ ಪ್ರವೇಶಿಸುವ ಲಾರಿಗಳಿಗೆ ಸ್ಯಾನಿಟೈಸೇಷನ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳ ಪ್ರವೇಶಿಸುವ ವಾಹನಗಳಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು. ಗಡಿ ಪ್ರದೇಶವಾದ ತಲಪಾಡಿಯಲ್ಲಿ ಸರಕು ವಾಹನಗಳಿಗೆ ಸ್ಯಾನಿಟೈಸರ್ ಮಾಡುವ ಕಾರ್ಯ ನಡೆಸುತ್ತಿದೆ. ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಜಿಲ್ಲೆಗೆ ಪ್ರವೇಶಿಸುವ ಮತ್ತು ಕೇರಳದಿಂದ ಜಿಲ್ಲೆಗೆ ಆಗಮಿಸುವ ಜನರಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದಂತೆ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಜನರ ಸಂಚಾರವೂ ಕಡಿಮೆಯಾಗಿದ್ದು, ಸ್ಥಳೀಯ ಚೆಕ್‍ಪೊಸ್ಟ್‍ನ ಪೊಲೀಸ್ರು ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ತಪಾಸಣೆ ನಡೆಸುವುದನ್ನು ಕಡಿಮೆ ಮಾಡಿದರೆ, ಕಾಸರಗೋಡು ಜಿಲ್ಲಾಡಳಿತ ಜಿಲ್ಲೆಯಿಂದ ಕಾಸರಗೋಡು ಪ್ರವೇಶಸಿಸುವ ಪ್ರತಿಯೊಂದು ವಾಹನ ಸೇರಿದಂತೆ ಸರಕು ವಾಹನಗಳ ಮೇಲೆ ತೀವ್ರ ನಿಗಾ ಇಟ್ಟಿದೆ. ಮೇಲಿನ ತಲಪಾಡಿ ವಿಶ್ವಾಸ್ ಆಡಿಟೋರಿಯಂ ಬಳಿ ಸರಕು ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಸಂಚಾರಕ್ಕೆ ಅವಕಾಶ ನೀಡುತ್ತಿದೆ.

Related posts

Leave a Reply

Your email address will not be published. Required fields are marked *