

ಮೊಂಟೆಪದವು ಪಬ್ಲಿಕ್ ಸ್ಕೂಲ್ ನಲ್ಲಿ ಸಹ ಶಿಕ್ಷಕರಾಗಿ 23ವರ್ಷ ಸೇರಿದಂತೆ ಶಿಕ್ಷಕ ವೃತ್ತಿಯಲ್ಲಿ ಸುಮಾರು ಮುವತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಲಕ್ಷ್ಮಣ್ ಪಿ. ಎಸ್ ಅವರಿಗೆ ವಿದಾಯ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಅವರು ಸುಮಾರು 9.5ಲಕ್ಷ ರೂ. ಅನುದಾನದಲ್ಲಿ ನವೀಕರಣಗೊಂಡ ಪ್ರೌಢಶಾಲಾ ಸಭಾಭವನ, ಟೈಲ್ಸ್ ಅಳವಡಿಕೆ, ತಾಲೂಕು ಪಂಚಾಯಿತಿ ಸದಸ್ಯ ಚಂದ್ರಹಾಸ್ ಪಿ. ಕರ್ಕೇರ ಅವರಿಂದ ಕೊಡಲ್ಪಟ್ಟ ಎರಡು ಲಕ್ಷ ರೂ. ಅನುದಾನಲ್ಲಿ ನಿರ್ಮಾಣವಾದ ಚರಂಡಿ ಕಾಮಗಾರಿ ಉದ್ಘಾಟಿಸಿ ಸಲಾಯಿತು.
ಶಾಸಕ ಯು.ಟಿ. ಖಾದರ್ ಮಾತನಾಡಿ ವೃತ್ತಿಯ ಅವಧಿಯಲ್ಲಿ ಶಾಶ್ವತವಾದ ಛಾಪು ಮೂಡಿಸುವಂತಹ ಕಾರ್ಯಗೈದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಲ್ಪಿಸಿಕೊಟ್ಟು, ನಿವೃತ್ತಿಯ ಬಳಿಕವೂ ತನ್ನ ಶಾಲೆಗೆ ಅತ್ಯುತ್ತಮ ಫಲಿತಾಂಶ ಹಾಗೂ ಉತ್ತಮ ಹೆಸರು ಶಾಶ್ವತವಾಗಿರುವಂತೆ ಉಳಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿ ಸಮುದಾಯಕ್ಕೆ ಶಾಶ್ವತವಾಗಿ ಸಲಹೆ ಸಹಕಾರ ಕೊಡುತ್ತಾ ಶಿಕ್ಷಣ ಕೊಟ್ಟ ಶಾಲೆಯ ಜೊತೆಗೆ ಸದಾ ಸಂಪರ್ಕವಿಟ್ಟುಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ. ಎಸ್. ಗಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮತ್ತಿತರರು ಉಪಸ್ಥಿತರಿದ್ದರು.