Header Ads
Breaking News

ಪಾಂಡೇಶ್ವರದ ಶ್ರೀನಿವಾಸ್ ವಿಶ್ವವಿದ್ಯಾನಿಲಯ : ಪದವಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‍ನ 2020-21ನೇ ಶೈಕ್ಷಣಿಕ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವು ಸಿಟಿ ಕ್ಯಾಂಪಸ್‍ನ ಗ್ಯಾಲರಿ ಹಾಲ್‍ನಲ್ಲಿ ನಡೆಯಿತು. ವಿದ್ಯಾರ್ಥಿಗಳು ಮತ್ತು ಪೋಷಕರು ಸಿಸ್ಕೋವೆಬೆಕ್ಸ್ ಮೀಟಿಂಗ್ ಆಪ್ ಹಾಗೂ ಯೂಟ್ಯೂಬ್ ನೇರಪ್ರಸಾರದ ಮೂಲಕ ಕಾರ್ಯಕ್ರಮಕ್ಕೆ ಹಾಜರಾದರು.ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಿ.ಎ. ಎ. ರಾಘವೇಂದ್ರರಾವ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಮ್ಮ ಸಂಸ್ಥೆಯು ಬೆಳೆದ ರೀತಿಯಲ್ಲಿಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ನಮ್ಮ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದು ಸಮಾಜದಲ್ಲಿ ಬೆಳೆಯಬೇಕು ಎಂದು ಪ್ರೇರೆಪಿಸಿದರು.ಸಹ –ಕುಲಾಧಿಪತಿ ಎ. ಶ್ರೀನಿವಾಸ್ ರಾವ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ನಂತರ ಮಾತನಾಡಿದ ಅವರು, ನಮ್ಮ ವಿಶ್ವವಿದ್ಯಾಲಯದ ಪಠ್ಯ ಕ್ರಮಗಳನ್ನು ಕೈಗಾರಿಕಾ ದೃಷ್ಟಿಕೋನದ ಅನುಗುಣವಾಗಿ ರಚಿಸಿದ್ದು, ನಮ್ಮ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಕೈಗಾರಿಕಾ ಕ್ಷೇತ್ರದಲ್ಲಿ ಸುಲಭವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂದರು.ಕುಲಪತಿಡಾ. ಪಿ. ಎಸ್. ಐತಾಳ್ ಅವರು ಮಾತನಾಡಿ ಶ್ರೀನಿವಾಸ್ ವಿಶ್ವವಿದ್ಯಾಲಯದ ಮೂಲ ಮೌಲ್ಯಗಳನ್ನು ವಿವರಿಸಿದರು. ನಂತರ ಶ್ರೀನಿವಾಸ್ ವಿಶ್ವವಿದ್ಯಾಲಯವು 21 ನೇ ಶತಮಾನಕ್ಕೆ ಅನುಸರಿಸುವ ಕೋರ್ಸ್‍ಗಳನ್ನು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ, ಈ ಅವಧಿಯಲ್ಲಿ ವಿದ್ಯಾರ್ಥಿಗಳು ಉದ್ಯಮಆಧಾರಿತ ಕಲಿಕಾ ಅನುಭವವನ್ನು ಪಡೆಯುವ ಅವಕಾಶಗಳಿವೆ ಎಂದು ಹೇಳಿದರು.ಈ ಸಂದರ್ಭ ಶ್ರೀನಿವಾಸ್ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಪರೀಕ್ಷಾ ನಿಯಂತ್ರಕ ಡಾ. ಲೆಫ್ಟಿನೆಂಟ್ ಕರ್ನಲ್ ಪಿ. ಕೆ. ಸುರೇಶ್‍ಕುಮಾರ್, ಸಿಟಿ ಕ್ಯಾಂಪಸ್‍ನ ಎಲ್ಲಾ ಕಾಲೇಜಿನ ಡೀನ್, ವಿಭಾಗ ಮುಖ್ಯಸ್ಥರು, ಬೋಧಕ ಬೋದಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕುಲಸಚಿವ ಡಾ. ಅನಿಲ್ ಕುಮಾರ್ ಸ್ವಾಗತಿಸಿ, ಡಾ. ಜಯಶ್ರೀ ಕೆ ವಂದಿಸಿದರು. ಪ್ರೋ.ಪಾಂಚಜನ್ಯೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply

Your email address will not be published. Required fields are marked *