Header Ads
Breaking News

ಪುತ್ತೂರಿನ ದೇವಳದ ಗದ್ಧೆಯಲ್ಲಿ ಸ್ಪೋಟಕ ಸಿಡಿಸಿ ಅಪರಿಚಿತರು ಪರಾರಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಕಾರೊಂದರಲ್ಲಿ ಬಂದ ಅಪರಿಚಿತರು ದೇವಳದ ಅನ್ನಛತ್ರದ ಬಳಿ ಸಿಡಿಮದ್ದು ಮಾದರಿಯ ಸ್ಪೋಟಕ ಸಿಡಿಸಿ ಪರಾರಿಯಾದ ಘಟನೆ ಮಾ.4 ರಂದು ತಡರಾತ್ರಿ ನಡೆದಿದೆ.

ರಾತ್ರಿ ಗಂಟೆ 11.45 ರ ಸುಮಾರಿಗೆ ದೇವಳದ ಅನ್ನ ಛತ್ರದ ಬಳಿ ಸಿಡಿಮದ್ದುಮಾದರಿಯ ಸ್ಪೋಟಕದ ಭಾರಿ ಸದ್ದು ಕೇಳಿಸಿದ್ದು. ಈ ಕುರಿತು ಸ್ಥಳೀಯರು ಗಾಭರಿಗೊಂಡು ನೋಡಿದಾಗ ಕಾರಿನಲ್ಲಿ ಬಂದ ತಂಡ ಈ ಕ್ರತ್ಯ ಎಸಗಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ನಗರಸಭಾ ಸದಸ್ಯರಾದ ದೇವಳದ ವಾಸ್ತು ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ದೇವಳದಲ್ಲಿ ಯಾವುದೇ ಉತ್ಸವ ಇಲ್ಲದ ಸಮಯ ದೇವಳದ ಕಡೆಯಿಂದ ಸಿಡಿಮದ್ದು ಸ್ಪೋಟಿಸಿಲ್ಲ ಬದಲಾಗಿ ಯಾರೋ ಅಪರಿಚಿತರು ಕಾರಿನಲ್ಲಿ ಬಂದು ಸ್ಪೋಟಕ ಸಿಡಿಸಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದ್ದು. ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *