
ಮಂಗಳಾಂಭಿಕ ಸಿನಿ ಕ್ರಿಯೇಶನ್ ಬ್ಯಾನರ್ ಅಡಿಯಲ್ಲಿ ‘ಸತ್ಯೋದ ಅಜ್ಜೆ’ ತುಳು ಕಿರುಚಿತ್ರ ಮೂಡಿ ಬರಲಿದೆ. ಇದು ಒಂದು ಪೌರಾಣಿಕ ಕಥೆಯಾದಾರಿತ ಕಿರುಚಿತ್ರವಾಗಿದೆ ಎಂದು ಕಿರುಚಿತ್ರದ ನಿರ್ದೇಶಕ ಆಕೇಶ್ ತಿಳಿಸಿದರು.
ಈ ಬಗ್ಗೆ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆಬ್ರವರಿ 15ರಂದು ಬಿಡುಗಡೆಗೊಳ್ಳಲಿದೆ. ಹರಿಗಣೇಶ್ ಎಸ್.ರಾವ್ ಅವರು ಕಿರುಚಿತ್ರವನ್ನು ನಿರ್ಮಿಸಿದ್ದು, ಸೂರಜ್ ಕಂಕನಾಡಿ ಅವರು, ಕಥೆ, ಚಿತ್ರಕತೆಯನ್ನು ಬರೆದಿದ್ದಾರೆ. ಈ ಕಿರುಚಿತ್ರದಲ್ಲಿ ಒಂಭತ್ತು ಜನರು ಬಹುಮುಖ ಹೊಸ ಪ್ರತಿಭೆಗಳು ನಟಿಸಿದ್ದಾರೆ. ಮಂಗಳಾಂಬಿಕ ಸಿನಿ ಕ್ರಿಯೇಶನ್ ಯೂಟ್ಯೂಬ್ ಚಾನಲ್ನಲ್ಲಿ ಈ ಕಿರುಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಈ ಕಿರುಚಿತ್ರದ ಪೋಸ್ಟರನ್ನು ನಂದಿಗುಡ್ಡೆಯ ಕೊರಗಜ್ಜನ ಕಟ್ಟೆಯಲ್ಲಿ ಚಲನಚಿತ್ರದ ನಟ ಪ್ರಕಾಶ್ ತುಮಿನಾಡು ಅವರು ಬಿಡುಗಡೆ ಮಾಡಿದ್ದರು ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಿರುಚಿತ್ರದ ನಿರ್ಮಾಪಕ ಹರಿಗಣೇಶ್ ಎಸ್. ರಾವ್ ಉಪಸ್ಥಿತರಿದ್ದರು.