Header Ads
Breaking News

ಫೆ.19ರಿಂದ 28ರವರೆಗೆ ರಾಷ್ಟ್ರಾದ್ಯಂತ ಸುದೃಢ ಕುಟುಂಬ ಸುಭದ್ರ ಸಮಾಜ ರಾಷ್ಟ್ರೀಯ ಅಭಿಯಾನ

ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದಿಂದ ಸುದೃಢ ಕುಟುಂಬ ಸುಭದ್ರ ಸಮಾಜ ರಾಷ್ಟ್ರೀಯ ಅಭಿಯಾನವು ಫೆ.19ರಿಂದ 28ರವರೆಗೆ  ರಾಷ್ಟ್ರಾದ್ಯಂತ ನಡೆಯಲಿದೆ.ಈ ಮೂಲಕ ಕಾರ್ಯಕ್ರಮವನ್ನು ಆಯಾ ಊರಿನ ನಿರ್ದಿಷ್ಟ ಸ್ಥಳದಲ್ಲಿ ಆಯೋಸಿಸಲು ನಿರ್ಧರಿಸಲಾಗಿದೆ. ಈ ಅಭಿಯಾನದ ಮೂಲಕ ಕುಟುಂಬದ ಮೂಲಸ್ಥಿತಿಯನ್ನು ಕಾಪಾಡಲು ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡುವ ಉದ್ದೇಶದಿಂದ ತಳಮಟ್ಟದಿಂದಲೇ ಆತ್ಮಾವಲೋಕನ ಮಾಡಲು ಹೆಚ್ಚಿನ ಒತ್ತು ಕೊಡುವ ರೂಪದಲ್ಲಿದೆ ಎಂದು ಅಭಿಯಾನದ ಬಗ್ಗೆ ಅನುಪಮಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಮಾಹಿತಿ ನೀಡಿದರು. ಈ ಅಭಿಯಾನದಲ್ಲಿ ಕಾರ್ನರ್ ಮೀಟಿಂಗ್, ಕುಟುಂಬ ಸಭೆಗಳು, ಸ್ಪರ್ಧೆಗಳು, ಫ್ಯಾಮಿಲಿ ಕ್ವಿಝ್, ಅಂತರ್ಧರ್ಮೀಯ ಸಂವಾದ, ಅಂತಾರಾಷ್ಟ್ರೀಯ ವೆಬಿನಾರ್, ಆಪ್ತಸಲಹೆ, ಚಾವಡಿ ಚರ್ಚೆ, ಜುಮಾ ಕುತ್ಬಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಬೀಹಾ ಫಾತಿಮಾ ಹೇಳಿದರು. ಈ ವೇಳೆ ದಕ್ಷಿಣ ಕನ್ನಡ ಮಹಿಳಾ ವಿಭಾಗ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕಿ ಸಮೀನ ಉಪ್ಪಿನಂಗಡಿ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಸದಸ್ಯೆ ಮರ್ಯಮ್ ಶಹೀರಾ, ಗಲ್ರ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಅಧ್ಯಕ್ಷೆ ಹುಮೇರಾ ಈ ವೇಳೆ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *