Header Ads
Header Ads
Breaking News

ಬಾರ್ ಗೆ ದೇವರ ಹೆಸರಿಗೆ ಜನರಿಂದ ವಿರೋಧ-ಮುಜರಾಯಿ ಇಲಾಖೆ ಕಾರ್ಯದರ್ಶಿಗೆ ಟಿಪ್ಪಣಿ : ಕೋಟ ಶ್ರೀನಿವಾಸ್ ಪೂಜಾರಿ

 ಬಾರ್, ವೈನ್ ಶಾಪ್‌ಗಳಿಗೆ ದೇವರ ಹೆಸರಿಗೆ ಜನರಿಂದ ವಿರೋಧ ಬಂದಿದೆ. ನಾನು ಮುಜರಾಯಿ ಇಲಾಖೆ ಕಾರ್ಯದರ್ಶಿಗೆ ಒಂದು ಟಿಪ್ಪಣಿ ಕಳುಹಿಸಿದ್ದೇನೆ. ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ ಅಂತ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ವಾಯ್ಸ್: ಉಡುಪಿಯಲ್ಲಿ ಮಾತನಾಡಿದ ಅವರು ದೇವರ ಹೆಸರಿನ ಮದ್ಯದಂಗಡಿಗಳಿಗೆ ಮರು ನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮುಜರಾಯಿ ಇಲಾಖೆ ಕಾರ್ಯದರ್ಶಿಗೆ ಒಂದು ಟಿಪ್ಪಣಿ ಕಳುಹಿಸಿದ್ದೇನೆ. ಸಾರ್ವಜನಿಕರಿಂದ ಬಂದಿರುವ ಅಭಿಪ್ರಾಯಕ್ಕೆ ಅಧಿಕಾರಿಗಳಿಂದ ಕಡತ ಸಿದ್ಧಪಡಿಸಲು ಸೂಚಿಸಿದ್ದೇನೆ. ಅಬಕಾರಿ ಮತ್ತು ಕಾನೂನು ಇಲಾಖೆ ಜೊತೆ ಚರ್ಚೆ ಮಾಡಲು ಸೂಚನೆ ನೀಡಿದ್ದೇನೆ. ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಇದೆ. ಸಾರ್ವಜನಿಕ ಅಭಿಪ್ರಾಯಕ್ಕೆ ಕೂಡಾ ಅವಕಾಶ ಇದೆ. ಹೆಸರು ಬದಲಿಸುವ ಚಿಂತನೆ ಮುಜರಾಯಿ ಇಲಾಖೆ ಮುಂದೆ ಇದೆ ಎಂದರು. ಬಾರ್ ಒಳಗೆ ದೇವರ ಫೋಟೋ ಇಡಬೇಡಿ ಅಂದಿಲ್ಲ. ದೇವರ ಹೆಸರಿರುವರು ಕುಡಿಯಬಹುದಾ ಅಂತ ನೀವು ಪ್ರಶ್ನೆ ಮಾಡಬಹುದು? ದೇವರ ಹೆಸರಿನವರನ್ನು ಮದ್ಯದಂಗಡಿಯಿಂದ ವಾಪಾಸ್ ಕಳುಹಿಸಬೇಕಾ ಎಂಬ ಅಭಿಪ್ರಾಯ ಇದೆ. ಸರಕಾರ ಈವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಅಬಕಾರಿ, ಕಾನೂನು ಇಲಾಖೆ ಒಪ್ಪದಿದ್ದರೆ ನಾವೇನು ಮಾಡೋಕಾಗಲ್ಲ ಎಂದು ಹೇಳಿಕೆ ನೀಡಿದರು. ಹೈಕಮಾಂಡ್ ನಿಂದ ರಾಜ್ಯ ಸರಕಾರದ ಸಾಧನೆ ಪರಾಮರ್ಶೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯ ಸರಕಾರದ ನೂರು ದಿನದ ಸಾಧನೆ ಜನತೆ ಮುಂದಿಟ್ಟಿದ್ದೇವೆ.ನೆರೆಯ ವಾತಾವರಣವನ್ನು ನಿಭಾಯಿಸಿದ್ದೇವೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *