
ತುಳು ಚಿತ್ರರಂಗದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದು ದಾಖಲೆ ನಿರ್ಮಿಸಿದ ಚಿತ್ರ ಗಿರ್ಗಿಟ್. ಇದೀಗ ಅದೇ ಚಿತ್ರ ತಂಡದಿಂದ ಗಮ್ಜಾಲ್ ತುಳು ಸಿನಿಮಾ ತಯಾರಾಗಿದ್ದು, ಇಂದು ಜಿಲ್ಲೆಯಾದ್ಯಂತ ಗಮ್ಜಾಲ್ ತುಳು ಸಿನಿಮಾ ಬಿಡುಗಡೆಗೊಂಡಿತು.
ಮಂಗಳೂರಿನ ರಮಾಕಾಂತಿ ಚಿತ್ರಮಂದಿರದಲ್ಲಿ ಗಮ್ಜಾಲ್ ತುಳು ಸಿನಿಮಾ ಬಿಡುಗಡೆಗೊಂಡಿತು. ನಟ ಬೋಜರಾಜ್ ವಾಮಂಜೂರು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಚಿತ್ರವನ್ನು ಎಲ್ಲರೂ ಪ್ರೋತ್ಸಾಹಿಸಬೇಕು. ಆ ಮೂಲಕ ಚಿತ್ರ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಚಿತ್ರನಟ ರೂಪೇಶ್ ಶೆಟ್ಟಿ ಮಾತನಾಡಿ, ಎಲ್ಲರೂ ಗಮ್ಜಾಲ್ ಸಿನಿಮಾವನ್ನು ನೋಡಿ, ಚಿತ್ರತಂಡದವನ್ನು ಪ್ರೋತ್ಸಾಹಿಸಿ ಎಂದು ಹೇಳಿದರು.
ಈ ಸಂದರ್ಭ ನಟರಾದ ಅರ್ಜುನ್ ಕಾಪಿಕಾಡ್, ಪೃಥ್ವಿ ಅಂಬರ್, ರಾಹುಲ್ ಆಮೀನ್, ವಿ.ಜೆ. ವಿನೀತ್, ಚಿತ್ರನಟಿ ಕರಿಷ್ಮಾ, ಕ್ಯಾಟ್ಕಾ ಅಧ್ಯಕ್ಷರಾದ ಮೋಹನ್ ಕೊಪ್ಪಳ, ಸಂಭಾಷಣೆಕಾರ ಪ್ರಸನ್ನ ಶೆಟ್ಟಿ ಬೈಲೂರು, ನಿರ್ದೇಶಕ ನವೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಂದು ತುಳು ಚಿತ್ರರಂಗಕ್ಕೆ 50ನೇ ವರ್ಷದ ಸಂಭ್ರಮ. ಹಾಗಾಗಿ ಇಂದೇ ರೂಪೇಶ್ ಶೆಟ್ಟಿ ನಟನೆಯ ಗಮ್ಜಾಲ್ ಚಿತ್ರ ಬಿಡುಗಡೆಯಾಗಿದೆ. ಗಮ್ಜಾಲ್ ಸಿನಿಮಾವನ್ನು ಆರ್.ಎಸ್. ಫಿಲಂಸ್, ಶೂಲಿನ್ ಫಿಲಂಸ್ ಹಾಗೂ ಮೊಗರೋಡಿ ಪ್ರೊಡಕ್ಷನ್ ಅವರ ಬ್ಯಾನರ್ ಆಡಿ ನಿರ್ಮಿಸಲಾಗಿದ್ದು, ನವೀನ್ ಶೆಟ್ಟಿ ಹಾಗೂ ಸುಮನ್ ಸುವರ್ಣ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಜನಪ್ರೀಯ ಕೋಸ್ಟಲ್ವುಡ್ನ ಹಿರಿಯ ಕಲಾವಿದರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಉಮೇಶ್ ಮಿಜಾರು, ಕರಿಷ್ಮಾ ಮತ್ತು ಇತರ ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಖ್ಯಾತ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಬರೆದಿದ್ದಾರೆ. ಇನ್ನು ಚಿತ್ರಕ್ಕೆ ಜೋಯಲ್ ರೆಬೆಲ್ಲೋ ಹಾಗೂ ಡ್ಯಾರೆಲ್ ಮಸ್ಕರೇನ್ಸ್ ಅವರ ಸಂಗೀತವಿದೆ. ಲಾಕ್ಡೌನ್ ಅವಧಿಯಲ್ಲಿ ತಯಾರಾದ ಗಮ್ಜಾಲ್ ಸಿನಿಮಾ 2 ಚಲನಚಿತ್ರಗಳ ಪ್ಯಾಕೇಜ್ ಎಂಬ ಟ್ಯಾಗ್ ಲೈನ್ ಹೊಂದಿದೆ. ಇಂದು ಮಂಗಳೂರಿನ ರಮಾಕಾಂತಿ ಸಿನಿಮಾ ಮಂದಿರದಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಸಿನಿ ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಬಹುದು.