Header Ads
Header Ads
Breaking News

ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ವಾರ್ಷಿಕ ಅಥ್ಲೆಟಿಕ್ ಮೀಟ್‌

ನಗರದ ಸಂತ ಅಲೋಶಿಯಸ್ ಪ್ರೌಢಶಾಲೆಯ ವಾರ್ಷಿಕ ಅಥ್ಲೆಟಿಕ್ ಮೀಟ್‌ನ್ನ ಶಾಲಾ ಮೈದಾನದಲ್ಲಿ ನಡೆಯಿತು. ಇನ್ನು ಬೆಲೂನು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ಸ್ ಸರ್ಜನ್ ಡಾ|ಸತೀಶ್‌ಚಂದ್ರ ಬಿ.ಕೆ ಅವರು ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಮನುಷ್ಯನಿಗೆ ಕ್ರೀಡೆ ಅತೀ ಮುಖ್ಯವಾಗುತ್ತಿದೆ. ಯಾಕೆಂದರೆ ಸ್ಮರ್ಧಾತ್ಮಕ ಮನೋಭಾವನೆಯನ್ನ ಬೆಳೆದುಕೊಳ್ಳಲು ಸಾಧ್ಯ ಅಂತಾ ಹೇಳಿದರು.

ಬಳಿಕ ಶಾಲಾ ಮುಖ್ಯೋಪಾಧ್ಯಾಯರಾದ ರೇ.ಫಾದರ್ ಜೆರಾಲ್ಡ್ ಫುರ್ಟಾಡೋ ಎಸ್.ಜೆ ಮಾತನಾಡಿ, ಕ್ರೀಡೆಯಲ್ಲಿ ಆಸಕ್ತಿ ಮೂಡಿಸಲು ಕ್ರೀಡಾಕೂಟ ಅವಶ್ಯವಾಗಿದೆ. ಇದರಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನ ತೋರಿಸಲು ಇದೊಂದು ಸೂಕ್ತ ವೇದಿಕೆ ಅಂತಾ ಹೇಳಿದರು.
ಈವೇಳೆ ಉಪಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಎಸ್, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಮಹೇಶ್ ಆರ್.ನಾಯಕ್, ಕಲಾ ಶಿಕ್ಷಕರಾದ ಜಾನ್ ಚಂದ್ರನ್ , ಶಾಲಾ ನಾಯಕ ಜೆಸಿಂ ಹಾಗೂ ಕಾರ್ಯದರ್ಶಿ ಪರಶುರಾಮ ಉಪಸ್ಥಿತರಿದ್ದರು. ಇನ್ನು ವಿವಿಧ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ರು.

Related posts

Leave a Reply