Header Ads
Breaking News

ಮಂಗಳೂರು ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮ್ಯಾಗ್ನಂ-2020 ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಮಂಗಳೂರು ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮ್ಯಾಗ್ನಂ-2020 ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ದೊರಕಿತು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ .ಪಿ.ಎಸ್.ಯಡಪಡಿತ್ತಾಯ ಮ್ಯಾಗ್ನಂ-2020 ಎರಡು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪದವಿ, ಅಂಕಗಳು ನಮ್ಮ ಜೊತೆ ಇದ್ದರೆ ಮಾತ್ರ ಜೀವನದ ಸವಾಲುಗಳನ್ನು ಎದುರಿಸಲು ಸಾಧ್ಯವಾಗದು. ಇದರೊಂದಿಗೆ ಇಂದಿನ ಆಧುನಿಕ ಕಾಲಘಟ್ಟಕ್ಕೆ ಪೂರಕವಾಗಿ ಜ್ಞಾನ ಕೌಶಲವನ್ನು ವೃದ್ಧಿಸಿಕೊಂಡು ಮುನ್ನಡೆಯಬೇಕು ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಪ್ರೊ .ಟಿ.ಎನ್.ಶ್ರೀಧರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್ ನ ಮಣಿಪಾಲದ ವಲಯ ಮ್ಯಾನೇಜರ್ ಬಾಸ್ಕರ ಹಂಧೆ, ಉದ್ಯಮಿ ಜಿ. ಗಿರಿಧರ್ ಪ್ರಭು, ಮೆಸ್ಕಾಂ ವಿಭಾಗದ ಅಧಿಕಾರಿ ಹರಿಶ್ಚಂದ್ರ ಬಿ,

ಸಿಂಡಿಕೇಟ್ ಬ್ಯಾಂಕ್ ನ ಸಂಪತ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಮಂಗಳೂರು ವಿವಿ. ವಾಣಿಜ್ಯ ಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ.ವೇದವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ನೇಳನದ ಬಗ್ಗೆ ವಿವರಿಸಿದರು.ಪ್ರಾಧ್ಯಪಕರಾದ ಡಾ.ಪರಮೇಶ್ವರ್, ಡಾ.ಪ್ರೀತಿ ಕೀರ್ತಿ ಡಿಸೋಜ, ಕಾಮರ್ಸ್ ಅಸೋಸಿಯೇಷನ್ ನ ಸಂಯೋಜಕ ಜಯಪ್ರಶಾಂತ್, ಸಹ ಸಂಯೋಜಕರಾದ ಡಾ.ಭಾಗ್ಯಲಕ್ಷ್ಮೀ ಎಂ, ಅಸೋಶಿಯೇಷನ್ ನ ವಿದ್ಯಾರ್ಥಿ ಮುಖಂಡರಾದ ಶ್ರೀನಾಥ್, ಯಶಸ್ವಿನಿ, ಫಿಯೋನಾ ಡಿಕ್ರಾಸ್ತಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *