Header Ads
Breaking News

ಮಂಗಳೂರು ವಿವಿ ವತಿಯಿಂದ ಎ.9, 10ರಂದು ರಿಪ್ಲೆಕ್ಷನ್ -2019 ಚಲನಚಿತ್ರೋತ್ಸವ

ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಸತಿಯ ಎಪ್ರಿಲ್ 9 & 10ರಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ಎರಡು ದಿನಗಳ ಚಲನಚಿತ್ರೋತ್ಸವ ರಿಪ್ಲೆಕ್ಷನ್ -2019ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಪ್ರೋ.ಪಿ.ಎಲ್.ಧರ್ಮ ಹೇಳಿದರು.
ಇವರು ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ಎರಡು ದಿನಗಳ ಕಾಲ ನಡೆಯಲಿರುವ ಚಲನಚಿತ್ರೋತ್ಸವವನ್ನು ಮಲಯಾಳಂ ಮತ್ತು ಮರಾಠಿ ಚಿತ್ರರಂಗದ ಜನಪ್ರಿಯ ನಿರ್ದೇಶಕ ಪ್ರಕಾಶ್ ಬಾರೆಯವರು ಉದ್ಘಾಟಿಸಲಿದ್ದಾರೆ ಅದಾನಿ ಸಮೂಹದ ಅಧ್ಯಕ್ಷರಾದ ಕಿಶೋರ್ ಆಳ್ವಾ, ಮತ್ತು ಜನಪ್ರೀಯ ಚಲನಚಿತ್ರ ನಿರ್ದೇಶಕ ಅಭಯಸಿಂಹ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ ಇನ್ನು ಎರಡು ದಿನಗಳ ಕಾಲ ಜನಪ್ರೀಯ ಮತ್ತು ವಿಮರ್ಶಕರ ಪ್ರಶಂಸೆಯ ಚಿತ್ರಗಳಾದ ಪಡ್ಡಾಯಿ,ಶುದ್ಧಿ,ಅಮ್ಮಚ್ಚಿಯೆಂಬ ನೆನಪು, ಹೆಬ್ಬೆಟ್ಟು ರಾಮಕ್ಕ,ಮತ್ತು ನಾತಿಚರಾಮಿ, ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ಅಥಿತಿ ಉಪನ್ಯಾಸಕರಾದ ಸಫಿಯಾ,ನಮೃತಾ.ಎಂ.ಎಸ್, ದೀಪ್ತಿ ಮತ್ತು ವಿದ್ಯಾರ್ಥಿ ಪ್ರತಿನಿಧಿಯಾದ ಚರಣ್ ಐವರ್ನಾಡು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *