Header Ads
Breaking News

ಮಂಗಳೂರು ವಿಶ್ವವಿದ್ಯಾನಿಲಯದ 38ನೇ ಘಟಿಕೋತ್ಸವ

ಮಂಗಳೂರು ವಿಶ್ವವಿದ್ಯಾನಿಲಯದ 38ನೇ ಘಟಿಕೋತ್ಸವ ವಿವಿ ಆವರಣದ ಮಂಗಳಾ ಸಭಾಂಗಣದಲ್ಲಿ ಗುರುವಾರ ಸಂಪನ್ನಗೊಂಡಿದ್ದು ಶಿಕ್ಷಣ, ಸಾಮಾಜಿಕ ಸೇವೆ ಪರಿಗಣಿಸಿ ಉದ್ಯಮಿ ಕೆ. ಸಿ. ನಾೈಕ್ ಅವರಿಗೆ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಘಟಿಕೋತ್ಸವದಲ್ಲಿ ಇಬ್ಬರಿಗೆ ಡಾಕ್ಟರ್ ಆಫ್ ಲಿಟ್‍ರೇಚರ್ ಹಾಗೂ 105 ಮಂದಿಗೆ ಪಿಎಚ್‍ಡಿ ಪದವಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ 34 ಪದವೀದರರಿಗೆ ಚಿನ್ನದ ಪದಕ ಹಾಗೂ 120 ಪದವೀಧರರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಂಗಳೂರು ವಿವಿ ಕುಲಪತಿ ಪ್ರೊ | ಪಿ. ಎಸ್. ಯಡಪಡಿತ್ತಾಯ ಅವರು ಘಟಕೋತ್ಸವಕ್ಕೆ ಅಧಿಕೃತ ಘೋಷಣೆ ಮಾಡುವ ಮೂಲಕ ಚಾಲನೆ ನೀಡಿ ಪದವಿ ಪ್ರದಾನ ಮಾಡಿದರು. ಕೇಂದ್ರ ಸಂಸದೀಯ ವ್ಯವಹಾರ ಹಾಗೂ ವಿದೇಶಾಂಗ ಸಚಿವ ವಿ. ಮುರಳೀಧರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,..ಪ್ರಸಕ್ತ ಕಾಲದ ಅವಶ್ಯಕತೆ, ಸವಾಲುಗಳಿಗೆ ಅನುಗುಣವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಷ್ಕರಣೆ ಆಗಬೇಕು. ಆಧುನಿಕ ಪ್ರಪಂಚದ ಸವಾಲುಗಳ ಜೊತೆ ಸಂಯೋಜನೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದ್ದರು. 

ಘಟಕೋತ್ಸವ ಆರಂಭದಲ್ಲಿ ವಿವಿ ಆವರಣದಲ್ಲಿ ಅಂದಾಜು 24 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹುತಾತ್ಮರ ಚೌಕವನ್ನು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ವಿದೇಶಾಂಗ ಸಚಿವ ವಿ. ಮುರಳೀಧರನ್ ಅನಾವರಣ ನಡೆಸಿದರು. ಮಂಗಳೂರು ವಿವಿ 2018- 19ನೇ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಿಗೆ ಒಟ್ಟು 42,405 ವಿದ್ಯಾರ್ಥಿಗಳ ಪೈಕಿ 29,914 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 70.54 ಫಲಿತಾಂಶ ದಾಖಲಿಸಿದೆ. ಇದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ ಹಾಜರಾದ 6,663 ವಿದ್ಯಾರ್ಥಿಗಳಲ್ಲಿ 6,217 ಮಂದಿ ತೇರ್ಗಡೆಯಾಗಿದ್ದಾರೆ. ಪದವಿ ಪರೀಕ್ಷೆಗೆ ಹಾಜರಾದ 35,602 ವಿದ್ಯಾರ್ಥಿಗಳಲ್ಲಿ 23,561 ಮಂದಿ ಉತ್ತೀರ್ಣರಾಗಿದ್ದಾರೆ. ಈ ಸಂದರ್ಭ ಈ ಬಾರಿ ಘಟಿಕೋತ್ಸವದಲ್ಲಿ ಸಂಪ್ರದಾಯದಂತೆ ಧರಿಸುತ್ತಿದ್ದ ನಿಲುವಂಗಿಯಾದ ಕಪ್ಪು ಬಣ್ಣದ ಗೌನ್‍ಗೆ ತಿಲಾಂಜಲಿ ನೀಡಿದ್ದು, ಮುಖ್ಯ ಅತಿಥಿ, ವಿವಿ ಅಧಿಕಾರಿಗಳು, ನಿಕಾಯದ ಡೀನ್‍ಗಳು ಮತ್ತು ಸಿಂಡಿಕೇಟ್, ಶೈಕ್ಷಣಿಕ ಮಂಡಳಿ ಸದಸ್ಯರಿಗೆ ವಿವಿಧ ಬಣ್ಣಗಳ ನಿಲುವಂಗಿ ಧರಿಸಿದ್ದರು.

 ಕುಲಸಚಿವ ಪ್ರೊ | ಎ,ಎಂ. ಖಾನ್ ಸ್ತಾವನೆಗೈದರು. ಕಲಾನಿಕಾಯದ ಡೀನ್ಪ್ರೊ | ಪಿ.ಎಲ್. ಧರ್ಮ, ಶಿಕ್ಷಣ ನಿಕಾಯದ ಡೀನ್ ಪ್ರೊ | ಕಿಶೋರ್ ಕುಮಾರ್, ವಾಣಿಜ್ಯ ನಿಕಾಯದಲ್ಲಿಪ್ರೊ | ಶ್ರೀಧರ್. ವಿಜ್ಞಾನ ನಿಕಾಯದಲ್ಲಿ ಪ್ರೊ | ಶಿವಲಿಂಗಯ್ಯ ಪದವೀಧರರ ವಿವರ ನೀಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಮತ್ತು ಆಂಗ್ಲ ಅಧ್ಯಯನ ವಿಭಾಗದ ಡಾ| ರವಿಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಕುಲಸಚಿವ ಪ್ರೊ | ಎ.ಎಂ. ಖಾನ್, ಪರೀಕ್ಷಾಂಗ ಕುಲಸಚಿವ ಪ್ರೊ .ವಿ. ರವೀಂದ್ರಾಚಾರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *