Header Ads
Header Ads
Breaking News

ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆಯ ವತಿಯಿಂದ ಎರಡನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆ

ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆಯ ವತಿಯಿಂದ ಸರ್ವ ಜನರ ಸಕಲ ಕಷ್ಟಗಳು ಪರಿಹಾರವಾಗಿ ಲೋಕ ಕಲ್ಯಾಣಾರ್ಥವಾಗಿ ಪರಮ ಪಾದದಿಂದ ಮೂಲ ಪಾದದೆಡೆಗೆ ಶ್ರೀ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಎರಡನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಯು ಯಶಸ್ವಿಯಾಗಿ ನಡೆಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮಿಗಳ ಶುಭಶೀರ್ವಾದ ದೊಂದಿಗೆ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಕಾರ್ತಿಕ್ ಭಟ್ ಚಾಲನೆ ನೀಡಿದರು. ಎರಡನೇ ವರ್ಷದ ಪಾದಯಾತ್ರೆಯ ಸುಸಂದರ್ಭದಲ್ಲಿ ಈ ಬಾರಿಯೂ ಹೆಚ್ಚಿನ ರೀತಿಯಲ್ಲಿ ಅಶಕ್ತ ಕುಟುಂಬದ ಕಂಬನಿಯನ್ನು ಒರೆಸುವ ಸೇವಾ ಕಾರ್ಯ ಸಂಸ್ಥೆಯಿಂದ ನಡೆಯಿತು ಅನಾರೋಗ್ಯದಿಂದ ಬಳಲುತ್ತಿರುವ ಫಲಾನುಭವಿಗಳಾದ ಪೋರ್ಕೊಡಿ ನಿವಾಸಿ ರಾಕೇಶ್ ರವರಿಗೆ 25000 ರೂಪಾಯಿ, ಪರಂಗಿಪೇಟೆ ನಿವಾಸಿ ಧರ್ಮ ರವರಿಗೆ 25000 ರೂಪಾಯಿಕುಳಾಯಿ ನಿವಾಸಿ ಮೋಹನದಾಸ್ ರವರಿಗೆ 25000 ರೂಪಾಯಿ, ಹೀಗೆ ಹಲವರಿಗೆ ಸಹಾಯ ಧನವನ್ನು ಚೆಕ್ ರೂಪಾದಲ್ಲಿ ನೆರೆದಿದ್ದ ಗಣ್ಯರ ಮುಖಾಂತರ ಹಸ್ತಾಂತರಿಸಲಾಯಿತು.

Related posts

Leave a Reply

Your email address will not be published. Required fields are marked *