Header Ads
Breaking News

ಅನಿವಾಸಿ ಭಾರತೀಯ ಸಂಘಟನೆ ವತಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಉದ್ಯಾವರ ಅಲ್ ಸಖಾಫ್ ಶಾಲೆಯ ವಿದ್ಯಾರ್ಥಿಗಳಿಗೆ ಅನಿವಾಸಿ ಭಾರತೀಯ ಸಂಘಟನೆಯ ವತಿಯಿಂದ ನಗದು ಹಾಗು ಪಾರಿತೋಷಕ ನೀಡಿ ಗೌರವಯಿಸಲಾಯಿತು .

ಸೋಮವಾರ ಬೆಳಿಗ್ಗೆ ಅಲ ಸಖಾಫ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಅಂಕ ಪಡೆದ ರೋಶನಿ ಹಾಗು ನೀಮಾ ಅಬ್ದುಲ್ ರಹ್ಮಾನ್ ಎಂಬವರಿಗೆ ಉದ್ಯಾವರ ಸೌದಿ ಇಸ್ಲಾಮಿಕ್ ಎಜ್ಯುಕೇಷನ್ ಒರ್ಗನೈಸೇಷನ್ ವತಿಯಿಂದ ಹಾಗೂ ಉದ್ಯಾವರ ದುಬೈ ಕಮಿಟಿ ಯಾ ವತಿಯಿಂದ ಸನ್ಮಾನಿಸಲಾಯಿತು, ಸೌದಿ ಅರೇಬಿಯಾ ಸಂಘಟನೆಯ ಅಧ್ಯಕ್ಷ ಇಸ್ಮಾಯಿಲ್ ಎಂ.ಪಿ ಹಾಗು ದುಬೈ ಕಮಿಟಿ ಪದಾಧಿಕಾರಿ ಅನ್ವರ್ ಇಸ್ಮಾಯಿಲ್ ವಿದ್ಯಾರ್ಥಿಗಳಿಗೆ ನಗದು ಹಾಗು ಪಾರಿತೋಶಕ ನೀಡಿ ಸನ್ಮಾನಿಸಿದರು.

ಈ ಸಂದರ್ಭ ಉದ್ಯಾವರ ಜಮಾಹತ್ ಅಧ್ಯಕ್ಷ ಸೂಫಿ ಹಾಜಿ, ಶಾಲಾ ಮುಖ್ಯೋಪಾಧ್ಯಾಯಿನಿ ಕೀರ್ತನ, ಕಮಿಟಿ ಪದಾಧಿಕಾರಿಗಳಾದ ಅಬ್ದುಲ್ ಲತೀಫ್ ಬಾಬಾ, ಮೊಹಮ್ಮದ್ ಬುಶ್ರಾ, ಹಾರಿಸ್, ಸಲೀಮ್ ಸನ ಮೊದಲಾದವರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *