Header Ads
Header Ads
Breaking News

ಮಂಜೇಶ್ವರ: ಉಪ್ಪಳ ಮಣಿಮುಂಡ ಬ್ರದರ್ಸ್‌ ಕಾರ್ಯಕರ್ತರ ಶ್ರಮದಾನ ಕಾರ್ಯಕ್ರಮ

ಮಂಗಲ್ಪಾಡಿ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಉಪ್ಪಳ ರೈಲ್ವೆ ಸ್ಟೇಶನ್ ಪರಿಸರದ ವಿದ್ಯುತ್ ಸಬ್ ಸ್ಟೇಶನ್ ಪಕ್ಕದಲ್ಲಿ ಶೇಖರಣೆಯಾದ ತ್ಯಾಜ್ಯವನ್ನು ಉಪ್ಪಳ ಮಣಿಮುಂಡ ಬ್ರದರ್ಸ್‌ನ ಕಾರ್ಯಕರ್ತರು ತಮ್ಮ ಪರಿಶ್ರಮದಿಂದ ಶ್ರಮದಾನದ ಮೂಲಕ ವಿಲೇವಾರಿ ಗೊಳಿಸಿ ಇತರರಿಗೆ ಮಾದರಿಯಾದರು.

ಈ ಪರಿಸರದಲ್ಲಿ ನೀರು ಹರಿದು ಹೋಗಲು ಒಂದು ಚರಂಡಿಯನ್ನು ನಿರ್ಮಿಸಲಾಗಿದ್ದು ಬೇಸಿಗೆ ಸಮಯದಲ್ಲಿ ಪರಿಸರವಾಸಿಗಳು ಹಾಗು ದಾರಿ ಹೋಕರು ಮನೆಗಳ ತ್ಯಾಜ್ಯಗಳನ್ನು ಇಲ್ಲಿ ಬಿಸಾಡುವುದು ಮಾಮೂಲಿಯಾಗಿದೆ. ಇದರಲ್ಲಿ ಮಕ್ಕಳ ಪ್ಯಾಂಪರ್‍ಸ್ ಅತಿ ಹೆಚ್ಚಿನ ಮಟ್ಟದಲ್ಲಿ ಶೇಖರಣೆಯಾಗಿದ್ದು ಇದರಿಂದಾಗಿ ಚರಂಡಿ ತುಂಬಿ ತ್ಯಾಜ್ಯಗಳು ರಸ್ತೆಗಳ ಮೇಲ್ಬಾಗಕ್ಕೆ ಬಂದು ಸಾರ್ವಜನಿಕರು ನಡೆದಾಡದoತಹ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಸ್ಥಳೀಯರು ಹಲವಾರು ಸಲ ಮಂಗಲ್ಪಾಡಿ ಪಂ. ಅಧಿಕೃತರಲ್ಲಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಹಲವಾರು ಸಲ ತಮ್ಮ ಅಳಲನ್ನು ತೋಡಿಕೊಂಡರು ಯಾರು ಇತ್ತ ಕಡೆ ಗಮನ ಹರಿಸಿಲ್ಲವೆಂಬುದಾಗಿ ಊರವರು ಹೇಳುತ್ತಿದ್ದಾರೆ .

ಈ ನಿಟ್ಟಿನಲ್ಲಿ ಬೆಳಿಗ್ಗೆ ಮನಿಮುಂಡ ಬ್ರದರ್ಸ್ ನ ನೇತೃತ್ವದಲ್ಲಿ ಈ ಪರಿಸರದ ಶುಚೀಕರಣ ನಡೆದಿದೆ ಚರಂಡಿಯಲ್ಲಿ ತ್ಯಾಜ್ಯದಿಂದ ಸ್ಥಗಿತ ಗೊಂಡಿದ್ದ ಮಳೆ ನೀರು ಸೂಕ್ತವಾದ ರೀತಿಯಲ್ಲಿ ಹರಿದು ಹೋಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮನಿಮುಂಡ ಬ್ರದರ್ಸ್ ಕಾರ್ಯಕರ್ತರಾದ ಜಫರುಲ್ಲಾ, ಮೊಹಮ್ಮದ್ ತಬ್ರಿಸ್ , ಮುದಸ್ಸರ್ ನಜರ್ , ಮುಸ್ತಾಕ್ ಮೊದಲಾದವರು ನೇತೃತ್ವವನ್ನು ನೀಡಿದರು . ಪಂಚಾಚಾಯತಿಗೆ ಸವಾಲೊಡ್ಡಿ ಇತರರಿಗೆ ಮಾದರಿಯಾದ ಶ್ರಮದಾನವನ್ನು ವೀಕ್ಷಿಸಲು ಜಸ್ಥಳೀಯ ವಾರ್ಡ್ ಸದಸ್ಯರಾದ ಜೀನತ್ ಸಕರಿಯ್ಯಾ ಹಾಗು ಸುಜಾತ ಶೆಟ್ಟಿ ಆಗಮಿಸಿದ್ದು ವಿಶೇಷವಾಗಿತ್ತೆಂದು ಸ್ಥಳೀಯರು ತಿಳಿಸಿದರು.

ಮಳೆಗಾಲಕ್ಕೆ ಮುನ್ನವೇ ಎಚ್ಛೆತ್ತುಗೊಳ್ಳಬೇಕಾಗಿದ್ದ ಪಂಚಾಯಣu ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಗಾಢವಾಗಿ ನಿದ್ರೆಗೆ ಜಾರಿರುವುದು ಇವರ ಅಸಡ್ಡೆಯನ್ನು ಎತ್ತಿ ತೋರಿಸುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.

Related posts

Leave a Reply

Your email address will not be published. Required fields are marked *