Header Ads
Breaking News

ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ ನಡೆಸಲು ವಿಶೇಷ ಜಿಲ್ಲಾ ನ್ಯಾಯಾಲಯ ಉದ್ಘಾಟನೆ

ಮಕ್ಕಳ ಲೈಂಗಿಕ ದೌರ್ಜನ್ಯ ಸಂಬಂಧಪಟ್ಟದಂತಹ ಪ್ರಕರಣ ಗಳನ್ನ ವಿಚಾರಣೆ ನಡೆಸಲು ವಿಶೇಷ ಜಿಲ್ಲಾ ನ್ಯಾಯಾಲಯವು ಇಂದು ಉದ್ಘಾಟನೆ ಗೊಂಡಿತು.ಮಂಗಳೂರಿನ ಕೋರ್ಟ್ ನ ಆರನೇ ಮಹಡಿಯಲ್ಲಿ ಪೊಕ್ಸೋ ವಿಶೇಷ ನ್ಯಾಯಾಲಯವನ್ನು ಕೌಟುಂಬಿಕ ನ್ಯಾಯಾಲಯದ ಒಂದನೇ ಹೆಚ್ಚುವರಿ ಪ್ರಧಾನ ನ್ಯಾಯಧೀಶರಾದ ಸಾವಿತ್ರಿ ವಿ.ಭಟ್ ಉದ್ಘಾಟಿಸಿದರು. ಇನ್ನು ಮಕ್ಕಳಿಗಾಗಿ ಫ್ಲೇಸ್ಕೂಲ್ ನ ಉದ್ಘಾಟನೆಯನ್ನ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಲಯದ ನ್ಯಾಯಾಧೀಶರಾದ ಕುಡ್ಲೂರು ಸತ್ಯನಾರಾಯಣ ಆಚಾರ್ಯ ಉದ್ಘಾಟಿಸಿದರು. ಈ ವೇಳೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್ ನರಸಿಂಹ ಹೆಗ್ಡೆ,ಉಪಾಧ್ಯಕ್ಷ ಬಿ.ಜಿನೇಂದ್ರ ಕುಮಾರ್, ಕಾರ್ಯದರ್ಶಿ

ಎಚ್.ವಿ.ರಾಘವೇಂದ್ರ ಮತ್ತಿತರ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ಪೊಕ್ಸೋ ಪ್ರಕರಣಗಳು ಇನ್ನು ಈ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಲಿದೆ.ಮಕ್ಕಳಿಗೆ ಭಯದ ವಾತಾವರಣ ಹೋಗಲಾಡಿಸುವ ನಿಟ್ಟಿನಲ್ಲಿ ಫ್ಲೇಸ್ಕೂಲ್ ವ್ಯವಸ್ಥೆ ಮಾಡಲಾಗಿದೆ.

Related posts

Leave a Reply

Your email address will not be published. Required fields are marked *