Header Ads
Breaking News

ಮುಂಬೈಯಲ್ಲಿ ಒಡಿಯೂರು ಶ್ರೀಗಳು ಷಷ್ಟ್ಯಬ್ದಿ ಸಮಿತಿ ರಚನೆ : 60 ಜ್ಞಾನ ವಾಹಿನಿ 2021 ಕಾರ್ಯಕ್ರಮಗಳ ಉದ್ಘಾಟನೆ

ಶ್ರೀ ಗುರು ದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಹಾಗೂ ಷಷ್ಟ್ಯಬ್ದಿ ಸಮಿತಿ ಹಾಗೂ ನವಿ ಮುಂಬಯಿಯ ಗುರು ಭಕ್ತರು ಸೇರಿ ಒಡಿಯೂರು ಶ್ರೀ ಗಳವರ ಷಷ್ಟ್ಯಬ್ದಿ ಮಹೋತ್ಸವ ಪ್ರಯುಕ್ತ 60 ಜ್ಞಾನ ವಾಹಿನಿ 2021 ಕಾರ್ಯಕ್ರಮಗಳನ್ನು ನವಿ ಮುಂಬೈನೆರೂಲ್ ಶ್ರೀ ಶನೀಶ್ವರ ಮಂದಿರ ಪ್ರಥಮ ಕಾರ್ಯಕ್ರಮ ದಾಸರ ಭಜನೆಯೊಂದಿಗೆ ಉದ್ಘಾಟನೆಗೊಂಡಿತು.

ವೇದಿಕೆಯಲ್ಲಿ ಉದ್ಘಾಟಕರಾಗಿ ಧರ್ಮಧರ್ಶಿ ರಮೇಶ್ ಎಮ್ ಪೂಜಾರಿ, ಆಶೀರ್ವಚನ ಶ್ರೀ ಶನೇಶ್ವರ ಮಂದಿರದ ಪುರೋಹಿತ ಸೂರಜ್ ಭಟ್, , ಅತಿಥಿಗಳಾಗಿ ನವಿ ಮುಂಬಯಿ ಮಾಜಿ ನಗರ ಸೇವಕ ಸಂತೋಷ್ ಡಿ ಶೆಟ್ಟಿ, ಭವಾನಿ ಫೌಂಡೇಶನ್ ನ ಸಂಸ್ಥಾಪಕ, ಕೆ ಡಿ ಶೆಟ್ಟಿ,ಯಕ್ಷಗಾನ ತಾಳಮದ್ದಲೆಯ ಅರ್ಥದಾರಿ ಕೆ ಕೆ ಶೆಟ್ಟಿ, ನವಿ ಮುಂಬೈ ಕನ್ನಡ ಸಂಘದ ಅಧ್ಯಕ್ಷ ಗೋಪಾಲ್ ವೈ ಶೆಟ್ಟಿ, ನೇರುಲ್ ಶ್ರೀ ಅಯ್ಯಪ್ಪ ಮಂದಿರದ ಗೌರವ ಅಧ್ಯಕ್ಷ ರವಿ ಆರ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ನ ನವಿ ಮುಂಬೈ ಸ್ತಲಿಯ ಕಚೇರಿಯ ಕಾರ್ಯಧ್ಯಕ್ಷ ವಿ ಕೆ ಪೂಜಾರಿ, ನಗರ ಸೇವಕಿ ಮೀರಾ ತಾಯಿ ಪಾಟೀಲ್, ಬಳಗದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಎಲ್ ಶೆಟ್ಟಿ, ಷಷ್ಟ್ಯಬ್ದಿ ಸಮಿತಿ ಅಧ್ಯಕ್ಷ ವಾಮಯ್ಯ ಶೆಟ್ಟಿ, ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರೇವತಿ ವಾಮಯ್ಯ ಶೆಟ್ಟಿ, ಬಳಗದ ಮಹಾರಾಷ್ಟ್ರ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಮಹಿಳಾ ಘಟಕದ ಮಾಜಿ ಅಧ್ಯಕ್ಷ ಸುಹಾಸಿನಿ ಎಸ್ ಶೆಟ್ಟಿ ಉಪಸ್ಥಿತರಿದ್ದರು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನವಿ ಮುಂಬೈಯಲ್ಲಿ ಅರವತ್ತು ಕಾರ್ಯಕ್ರಮಗಳು ನಡೆಯಲಿದ್ದು ಇದರ ಸಂಚಾಲಕರಾದ ದಾಮೋಧರ್ ಶೆಟ್ಟಿ, ಸಂಯೋಜಕರಾದ ಅದ್ಯಾಪಾಡಿಗುತ್ತು ಕರುಣಾಕರ್ ಎಸ್ ಆಳ್ವ, ಕಾರ್ಯಕ್ರಮದ ವ್ಯವಸ್ಥಾಪಕರಾದ ವಿ ಕೆ ಸುವರ್ಣ, ಅನಿಲ್ ಕೆ ಹೆಗ್ಡೆ, ಪ್ರಭಾಕರ್ ಎಸ್ ಹೆಗ್ಡೆ, ಜಗದೀಶ್ ಶೆಟ್ಟಿ ಪನ್ವೆಲ್, ಅದ್ಯಾಪಾಡಿ ಬಾಲಕೃಷ್ಣ ಶೆಟ್ಟಿ, ತಾರಾನಾಥ್ ಶೆಟ್ಟಿ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಶನೀಶ್ವರ ಭಜನಾ ಮಂಡಳಿ ವತಿಯಿಂದ ದಾಸರ ಭಜನೆ ಕಾರ್ಯಕ್ರಮ ಪ್ರಸ್ತುತಿಗೊಂಡಿತು.ಮಹಾರಾಷ್ಟ್ರದಾದ್ಯಂತ ಒಡಿಯೂರು ಶ್ರೀಗಳು ಅನ್ವಯಗಳು ಸಾವಿರ ಸಾವಿರ ಸಂಖ್ಯೆಯಲ್ಲಿದ್ದು ಮಹಾರಾಷ್ಟ್ರದ ವಿವಿಧ ಉಪನಗರಗಳಲ್ಲಿ ಶ್ರೀಗಳ ಷಷ್ಟ್ಯಬ್ದಿ ಕಾರ್ಯಕ್ರಮಗಳು ನಡೆಯುವ ಸಿದ್ಧತೆಗಳು ನಡೆಯುತ್ತಿದೆ.

Related posts

Leave a Reply

Your email address will not be published. Required fields are marked *